ಬಿಜೆಪಿ-ಕಾಂಗ್ರೆಸ್ 
ರಾಜಕೀಯ

'ವಿಷಸರ್ಪ' ದಿಂದ 'ವಿಷಕನ್ಯೆ' ಮತ್ತು 'ನಾಲಾಯಕ್ ಬೇಟಾ'ವರೆಗೆ; ಕರ್ನಾಟಕ ಚುನಾವಣೆಯಲ್ಲಿ ಚರ್ಚೆಯಾದ ಹೇಳಿಕೆಗಳಿವು...

'ವಿಷಪೂರಿತ ಹಾವು', 'ವಿಷಕನ್ಯೆ' ಮತ್ತು 'ನಾಲಾಯಕ್' ನಂತಹ ಹೇಳಿಕೆಗಳು ಈ ಭಾರಿಯ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ಕೇಳಿಬಂದ ಮಾತುಗಳು. ಇವುಗಳನ್ನು ಕೇಳಿದ ಮತದಾರ, ಬುಧವಾರ ತಮ್ಮ ಮತವನ್ನು ಚಲಾಯಿಸಲಿದ್ದಾನೆ.

ಬೆಂಗಳೂರು: 'ವಿಷಸರ್ಪ', 'ವಿಷಕನ್ಯೆ' ಮತ್ತು 'ನಾಲಾಯಕ್' ನಂತಹ ಹೇಳಿಕೆಗಳು ಈ ಭಾರಿಯ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ಕೇಳಿಬಂದ ಮಾತುಗಳು. ಇವುಗಳನ್ನು ಕೇಳಿದ ಮತದಾರ, ಬುಧವಾರ ತಮ್ಮ ಮತವನ್ನು ಚಲಾಯಿಸಲಿದ್ದಾನೆ.

ಎಚ್ಚರಿಕೆ ಮತ್ತು ಸಂಯಮವನ್ನು ಅನುಸರಿಸದೆ ನಾಯಕರು ಅಶ್ಲೀಲ ಮತ್ತು ನಿಂದನೀಯ ಪದಗಳನ್ನು ಬಳಸಿದ ನಿದರ್ಶನಗಳು ಪ್ರಚಾರ ಮತ್ತು ಚುನಾವಣಾ ವಾತಾವರಣವನ್ನು ಕೆಡಿಸುತ್ತವೆ ಎಂದು ರಾಜಕೀಯ ವೀಕ್ಷಕರು ಹೇಳುತ್ತಾರೆ.

224 ಸದಸ್ಯ ಬಲದ ವಿಧಾನಸಭೆಗೆ ನಡೆಯಲಿರುವ ಚುನಾವಣೆಗಾಗಿ ಹೈವೋಲ್ಟೇಜ್ ಪ್ರಚಾರ ಸೋಮವಾರ ಕೊನೆಗೊಂಡಿತು. ಚುನಾವಣೆಯು ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಮತ್ತು ಮತ್ತು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರ ಜನತಾ ದಳ (ಜಾತ್ಯತೀತ) ನಡುವಿನ ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದೆ.

ಪ್ರಚಾರದ ವೇಳೆ ಎಐಸಿಸಿ ಅಧ್ಯಕ್ಷ ಎಂ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರು ವಿಷಸರ್ಪ ಎಂದು ಟೀಕಿಸಿದ್ದರು.

ಏಪ್ರಿಲ್ 27ರಂದು ಗದಗ ಜಿಲ್ಲೆಯ ರೋಣದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ತಪ್ಪು ಮಾಡಬೇಡಿ. ಮೋದಿ ವಿಷಸರ್ಪವಿದ್ದಂತೆ ಎಂದಿದ್ದರು. ಕರ್ನಾಟಕದವರೇ ಆದ ಖರ್ಗೆ ಅವರ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, ಮೋದಿ ಕೂಡ ಅವರ ಚುನಾವಣಾ ರ‍್ಯಾಲಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಕಿಡಿಕಾರಿದ್ದಾರೆ. 

ನಂತರ ಖರ್ಗೆ ಅವರು ತಮ್ಮ ಹೇಳಿಕೆ ಪ್ರಧಾನಿ ವಿರುದ್ಧವಲ್ಲ. ಆದರೆ, ಬಿಜೆಪಿ ವಿರುದ್ಧ ಎಂದು ಸ್ಪಷ್ಟಪಡಿಸಿದರು.

ಖರ್ಗೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ವಿಜಯಪುರದ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ವಿಷಕನ್ಯೆಗೆ ಹೋಲಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಾದ ಕೆಲವೇ ದಿನಗಳಲ್ಲಿ, ಕಲಬುರಗಿ ಕ್ಷೇತ್ರದ ಚಿತ್ತಾಪುರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ, ಪರಿಶಿಷ್ಟ ಜಾತಿ, ಅದರಲ್ಲೂ ವಿಶೇಷವಾಗಿ ಅಲೆಮಾರಿ ಲಂಬಾಣಿ ಪಂಗಡಗಳಿಗೆ ಒಳಮೀಸಲಾತಿ ವಿಚಾರದಲ್ಲಿ ಗೊಂದಲದ ಹಿನ್ನೆಲೆಯಲ್ಲಿ ಮೋದಿಯನ್ನು ‘ನಾಲಾಯಕ್ ಬೇಟಾ’ ಎಂದು ಕರೆದಿದ್ದಾರೆ.

ಅಲ್ಲದೆ, ಈ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತೀವ್ರ ಹಣಾಹಣಿಯಲ್ಲಿ ತೊಡಗಿದ್ದು, ಭ್ರಷ್ಟಾಚಾರದ ವಿಷಯಗಳು ಪ್ರಚಾರದಲ್ಲಿ ಮೇಲುಗೈ ಸಾಧಿಸಿವೆ.

ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ದಾಳಿಯನ್ನು ಮುಂದುವರಿಸಿ, ಅದನ್ನು '40 ಪರ್ಸೆಂಟ್ ಕಮಿಷನ್ ಸರ್ಕಾರ' ಎಂದು ಕರೆದಿದೆ. ಇದಕ್ಕೆ ತಿರುಗೇಟು ನೀಡಿರುವ ಪ್ರಧಾನಿ ಮೋದಿ, ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ 85 ಪರ್ಸೆಂಟ್ ಭ್ರಷ್ಟಾಚಾರವಿತ್ತು ಎಂದಿದ್ದಾರೆ.

ಮೇ 6 ರಂದು ಮೋದಿ ಅವರು ಬೃಹತ್ ರ‍್ಯಾಲಿ ನಡೆಸಿದ ದಿನವೇ ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬವನ್ನು ಮಟ್ಟ ಹಾಕಲು ಸಂಚು ರೂಪಿಸಿದ್ದರು ಎಂದು ಕಾಂಗ್ರೆಸ್ ಆರೋಪಿಸಿದೆ.

ರಾಥೋಡ್ ಅವರದು ಎಂದು ಹೇಳಲಾದ ಸಂಭಾಷಣೆಯ ಆಡಿಯೋ ರೆಕಾರ್ಡಿಂಗ್ ವೈರಲ್ ಆಗಿದ್ದು, ಅಲ್ಲಿ ಅವರು ಖರ್ಗೆ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ. ಈ ಆರೋಪವನ್ನು ರಾಥೋಡ್ ತಳ್ಳಿಹಾಕಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Imran Khan ಸಾವಿನ ಊಹಾಪೋಹ ನಡುವೆ ಜೈಲಿನಲ್ಲಿ ಮಾಜಿ ಪ್ರಧಾನಿ ಭೇಟಿಯಾಗಿ ಬಂದ ಸಹೋದರಿ ಉಜ್ಮಾ ಖಾನಮ್ ಹೇಳಿದ್ದೇನು?

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಇದ್ದ ವೇದಿಕೆಗೆ ನುಗ್ಗಿದ ಆಗಂತುಕ!

ದರ್ಶನ್ ಲಾಕಪ್ ಡೆತ್: ಇನ್ಸ್ ಪೆಕ್ಟರ್ ಶಿವಕುಮಾರ್ ಸೇರಿ 4 ಮಂದಿ ಅಮಾನತು!

'ನಮ್ ಜೊತೆ ಯುದ್ಧ ಬೇಕು ಅಂದ್ರೆ.. ನಾವು ಸಿದ್ಧ': ಯೂರೋಪ್ ಗೆ Vladimir Putin ಬಹಿರಂಗ ಎಚ್ಚರಿಕೆ

Video: 'ಅಯೋಧ್ಯೆ ಮಾತ್ರವಲ್ಲ.. ಮುಸ್ಲಿಮರು ಇನ್ನೂ 2 ಐತಿಹಾಸಿಕ ಸ್ಥಳಗಳ ಬಿಟ್ಟುಕೊಡಿ, ಭಾರತ ಜಾತ್ಯಾತೀತವಾಗಿರಲು ಹಿಂದೂಗಳೇ ಕಾರಣ': Muhammad

SCROLL FOR NEXT