ರಾಜಕೀಯ

ಯಡಿಯೂರಪ್ಪ ಹೊರಗಿಟ್ಟು ಬಿಜೆಪಿ ನಾಯಕರ ಜೊತೆ ಸಭೆ: ಕಾಂಗ್ರೆಸ್ ನಾಯಕರ ಬಾಯಿಗೆ ಆಹಾರವಾಯ್ತು ಸಂತೋಷ್ ಹೇಳಿಕೆ!

Shilpa D

ಬೆಂಗಳೂರು: ಹಲವು ಕಾಂಗ್ರೆಸ್ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷೇ ನೀಡಿದ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ.

ಇದರ ಜೊತೆಗೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಹೊರಗಿಟ್ಟು, ಮೊನ್ನೆ ಬೆಂಗಳೂರಿನಲ್ಲಿ ಬಿಜೆಪಿ ನಾಯಕರ ಸಭೆ ನಡೆಸಿರುವುದು ಬಿಎಸ್ ವೈ ಆಪ್ತರು ಮತ್ತಷ್ಟು ಕೆರಳುವಂತೆ ಮಾಡಿದೆ.

ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಸಂತೋಷ್ ಕಾರಣ ಎಂದು ಬಿಜೆಪಿಯ ಒಂದು ವರ್ಗದ ಮುಖಂಡರು ಆರೋಪಿಸಿದ್ದರು. 40-45 ಕಾಂಗ್ರೆಸ್ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಸಂತೋಷ್ ಇತ್ತೀಚೆಗೆ ಹೇಳಿದ್ದರು.

ಕಾಂಗ್ರೆಸ್ ನ ನಗರಸಭೆ ಸದಸ್ಯರೂ ಸಂತೋಷ್ ಸಂಪರ್ಕದಲ್ಲಿಲ್ಲ. ಯಾರೂ ಬಿಜೆಪಿಗೆ ಸೇರಲು ಬಯಸುವುದಿಲ್ಲ ಏಕೆಂದರೆ ಅದು ಅವರನ್ನು ಬಳಸಿಕೊಳ್ಳುತ್ತದೆ ಮತ್ತು ಬಿಸಾಡುತ್ತದೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಲಾಗಿತ್ತು ಎಂದು  ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ  ಹೇಳಿದ್ದಾರೆ.

ಮಾಜಿ ಸಚಿವರಾದ ಎಸ್.ಟಿ.ಸೋಮಶೇಖರ್, ಶಿವರಾಮ ಹೆಬ್ಬಾರ್, ವಿ.ಸೋಮಣ್ಣ ಸಭೆಗೆ ಗೈರುಹಾಜರಾದ ಬಗ್ಗೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸಂತೋಷ್ ಅವರನ್ನು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ನಾಯಕರ ಬಗ್ಗೆ ಸಂತೋಷ್ ನೀಡಿರುವ ಹೇಳಿಕೆ ಬಿಜೆಪಿ ನಾಯಕರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಗಿಮಿಕ್ ಎಂದು ಕಿಡಿಕಾರಿದರು.

ಸಂತೋಷ್ ಎಲ್ಲಾ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿದರೆ ಸಂತೋಷವಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮಾರ್ಮಿಕವಾಗಿ ಹೇಳಿದರು. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಅವರು ತಮ್ಮ ನಾಯಕತ್ವದಲ್ಲಿ ಪಕ್ಷದ ಸೋಲಿನ ಹತಾಶೆಯಿಂದ ಸಂತೋಷ್ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.

ಈ ಮಧ್ಯೆ, ಬಿಜೆಪಿಯ ಮಾಜಿ ಸಚಿವ ಮತ್ತು ಬಿಎಸ್ ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗ, ಸಂಸದ ರೇಣುಕಾಚಾರ್ಯ ಅವರು ವೀರಶೈವ ಲಿಂಗಾಯತ ನಾಯಕತ್ವವನ್ನು ಪಕ್ಷದಲ್ಲಿ ದೂರವಿಟ್ಟಿದ್ದಕ್ಕಾಗಿ ಸಂತೋಷ್ ವಿರುದ್ಧ ವಾಗ್ದಾಳಿ ನಡೆಸಿದರು.

2006-2007ರಲ್ಲಿ ಸಂಘಪರಿವಾರದಿಂದ ಸಂಘಟನೆಗೆ ಪ್ರವೇಶಿಸಿದ ಅವರು (ಸಂತೋಷ್) ಕರ್ನಾಟಕದಲ್ಲಿ ಪಕ್ಷವನ್ನು ಕಟ್ಟಲಿಲ್ಲ. ಆದರೆ ಅವರು ಇಡೀ ಪಕ್ಷವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಬಯಸುತ್ತಾರೆ ಮತ್ತು ಜನರಿಂದ ಆಯ್ಕೆಯಾಗದ ಪಕ್ಷದ ಮೇಲೆ ತಮ್ಮ ಬಣವು ಹಿಡಿತ ಸಾಧಿಸಬೇಕೆಂದು ಅವರು ಬಯಸುತ್ತಾರೆ ಎಂದು ಆರೋಪಿಸಿದ್ದಾರೆ.

SCROLL FOR NEXT