ಶಿವರಾಮ್ ಹೆಬ್ಬಾರ್ ಮತ್ತು ವಿಶ್ವೇಶ್ವರ ಹೆಗಡೆ ಕಾಗೇರಿ 
ರಾಜಕೀಯ

ನಮ್ಮ ತ್ಯಾಗದ ಫಲದಿಂದ ಅಧಿಕಾರ ಅನುಭವಿಸಿದ್ದೀರಿ: ಕಾಗೇರಿ ವಿರುದ್ಧ ಹೆಬ್ಬಾರ್ ಟೀಕಾ ಪ್ರಹಾರ

ಲೋಕಸಭೆ ಚುನಾವಣೆಯಲ್ಲಿ ಹೆಬ್ಬಾರ್ ಕಾಂಗ್ರೆಸ್ ಪಕ್ಷಕ್ಕೆಬೆಂಬಲ ನೀಡುತ್ತಾರೆ ಎಂಬ ಊಹಾಪೋಹಗಳು ಮುಂಚೂಣಿಗೆ ಬಂದಿದ್ದು, ಸ್ವತಃ ಶಿವರಾಮ್ ಹೆಬ್ಬಾರ್ ಸ್ಪಷ್ಟನೆ ನೀಡಿದ್ದಾರೆ.

ಉತ್ತರ ಕನ್ನಡ: ಬಿಜೆಪಿ ಶಾಸಕ ಅರಬೈಲ್ ಶಿವರಾಮ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಈ ವಾರದ ಆರಂಭದಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಹೆಬ್ಬಾರ್ ಕಾಂಗ್ರೆಸ್ ಪಕ್ಷಕ್ಕೆಬೆಂಬಲ ನೀಡುತ್ತಾರೆ ಎಂಬ ಊಹಾಪೋಹಗಳು ಮುಂಚೂಣಿಗೆ ಬಂದಿದ್ದು, ಸ್ವತಃ ಶಿವರಾಮ್ ಹೆಬ್ಬಾರ್ ಸ್ಪಷ್ಟನೆ ನೀಡಿದ್ದಾರೆ.

ಶಿವರಾಮ ಹೆಬ್ಬಾರ್ ಅವರನ್ನು ಪದಚ್ಯುತಗೊಳಿಸಲು ತಮ್ಮ ಪಕ್ಷವನ್ನು ಹರಸಾಹಸ ಮಾಡುತ್ತಿದ್ದಾರೆ ಎಂದು ತೋರುತ್ತದೆ ,2018 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಹೆಬ್ಬಾರ್ ಅವರು ಕಾಂಗ್ರೆಸ್‌ಗೆ ಮರಳುವುದು ಬಹುತೇಕ ಖಚಿತವಾಗಿದೆ. ಹೆಬ್ಬಾರ್ ಅವರ ಸಾಂಪ್ರದಾಯಿಕ ಎದುರಾಳಿ ವಿಶ್ವೇಶ್ವರ ಹೆಗಡೆ ಕಾಗೇರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಆದರೆ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಹೆಬ್ಬಾರ್ ಇಲ್ಲಿಯವರೆಗೂ ಎಲ್ಲಿಯೂ ತುಟಿ ಬಿಚ್ಚಿಲ್ಲ.

ಮತದಾರರನ್ನು ಗೊಂದಲದಲ್ಲಿ ಸಿಲುಕಿಸಿದ್ದಾರೆ ಎಂಬ ಕಾಗೇರಿ ಅವರ ವ್ಯಂಗ್ಯಕ್ಕೆ ಉತ್ತರಿಸಿದ ಅವರು, ಯಾರು ಏನು ಮಾಡಿದರು ಎಂಬುದು ಇಲ್ಲಿನ ಜನರಿಗೆ ಗೊತ್ತಿದೆ. ನನ್ನ ತ್ಯಾಗದಿಂದಾಗಿ ಅವರು ಸಭಾಪತಿ ಸ್ಥಾನವನ್ನು ಅಲಂಕರಿಸಿದ್ದಾರೆ. ನಮ್ಮಲ್ಲಿ 17 ಜನ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಕಾರಣಕ್ಕೆ ಬಿಎಸ್ ಯಡಿಯೂರಪ್ಪ ನಾಲ್ಕನೇ ಬಾರಿ ಮುಖ್ಯಮಂತ್ರಿಯಾದರು... ನೀವು ಸ್ಪೀಕರ್ ಆಗಿದ್ದು ನಮ್ಮಿಂದ, ನೀವು ನೀವೂ ಅಧಿಕಾರ ಅನುಭವಿಸಿದ್ದು ನಮ್ಮಿಂದ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಸವರಾಜ್ ಪಾಟೀಲ್ ಯತ್ನಾಳ್ ಟೀಕೆಗೆ ಕಿಡಿ ಕಾರಿದ ಅವರು, ಕಳೆದ ಒಂದು ವರ್ಷದಲ್ಲಿ ಪಕ್ಷದ ವಿರುದ್ಧ ನೀವು ಏನೇ ಹೇಳಿದ್ದೀರೋ ಅದು ನನಗಿಂತ ಪಕ್ಷಕ್ಕೆ ಹೆಚ್ಚು ಹಾನಿ ಮಾಡಿದೆ. ನಿಮಗೆ ನಮ್ಮ ಜಿಲ್ಲೆಯ ರಾಜಕೀಯ ಗೊತ್ತಿಲ್ಲದಿರುವುದರಿಂದ ಬಾಯಿ ಮುಚ್ಚಿಕೊಂಡರೆ ಒಳ್ಳೆಯದು ಎಂದು ತಪರಾಕಿ ಹಾಕಿದ್ದಾರೆ. ಉತ್ತರ ಕನ್ನಡದಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡದ ಹೆಬ್ಬಾರ್ ವಿರುದ್ಧ ಯತ್ನಾಳ್ ಮತ್ತು ಕಾಗೇರಿ ಇಬ್ಬರೂ ಗುಡುಗಿದ್ದರು.

ವಿವೇಕ್ ಹೆಬ್ಬಾರ್ ಅವರು ಕಾಂಗ್ರೆಸ್‌ಗೆ ಎಂಟ್ರಿ ಕೊಟ್ಟಿರುವುದರಿಂದ ಯಲ್ಲಾಪುರ ಬಿಜೆಪಿ ಪಕ್ಷಕ್ಕೆ ಈಗ ನಾಯಕರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. 2023ರ ವಿಧಾನಸಭಾ ಚುನಾವಣೆಯ ವೇಳೆ ಎದುರಾಳಿ ವಿಎಸ್ ಪಾಟೀಲ್ ಅವರನ್ನು ಕಾಂಗ್ರೆಸ್ ಸೆಳೆದುಕೊಂಡ ಕಾರಣ ಕಾಂಗ್ರೆಸ್ ನಾಯಕರು ಇದನ್ನು ಮಾಸ್ಟರ್ ಸ್ಟ್ರೋಕ್ ಎಂದು ಹೇಳುತ್ತಿದ್ದಾರೆ. ಶಿವರಾಮ ಹೆಬ್ಬಾರ್ ಅವರು ಪಕ್ಷಾಂತರ ನಿಷೇಧ ಕಾಯ್ದೆಯ ಸೆಕ್ಷನ್ 10 ಅನ್ನು ಆಕರ್ಷಿಸುವ ಕಾರಣ ಮತ್ತು ಚುನಾಯಿತ ಪ್ರತಿನಿಧಿಯಾಗಿ ಅವರನ್ನು ಪದಚ್ಯುತಗೊಳಿಸಬಹುದು ಎಂಬ ಕಾರಣಕ್ಕೆ ಇನ್ನೂ ತಮ್ಮ ಮುಂದಿನ ನಡೆಯ ಬಗ್ಗೆ ನಿರ್ಧರಿಸಿಲ್ಲ.

ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಉರುಳಿಸಲು ಹೆಬ್ಬಾರ್ 16 ಇತರರೊಂದಿಗೆ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಸೇರ್ಪಡೆಗೊಂಡರು . ಯಡಿಯೂರಪ್ಪ ಹೆಬ್ಬಾರ್ ಅವರನ್ನು ಕಾರ್ಮಿಕ ಸಚಿವರನ್ನಾಗಿ ಮಾಡಿದರು ಮತ್ತು ಬೊಮ್ಮಾಯಿ ಸರ್ಕಾರದಲ್ಲಿ ಸಚಿವರಾಗಿ ಮುಂದುವರೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಆಪರೇಷನ್ ಸಿಂಧೂರ ವೇಳೆಯ 'ಅಪವಿತ್ರ ಮೈತ್ರಿ'ಯನ್ನು ಸದ್ದಿಲ್ಲದೆ ಒಪ್ಪಿಕೊಂಡ ಮೋದಿ ಸರ್ಕಾರ! ಚೀನಾ ಆಕ್ರಮಣವನ್ನು ಕಾನೂನುಬದ್ಧಗೊಳಿಸುತ್ತಿದ್ದೆಯೇ? ಕಾಂಗ್ರೆಸ್

ಮಕ್ಕಳ ಕಣ್ಣೀರಿಗೂ ಕರಗದ ಮನಸ್ಸು: ವಿಚ್ಛೇನದ ನೀಡಿ ಪ್ರಿಯಕರನ ಜೊತೆ ಹೋಗುತ್ತಿದ್ದ ತಾಯಿಯನ್ನು ಪರಿ ಪರಿಯಾಗಿ ಬೇಡಿದ ಮಕ್ಕಳು, Video!

'Ethanol ಮಿಶ್ರಿತ ಪೆಟ್ರೋಲ್ ನಿಂದ ಮೈಲೇಜ್ 2-4% ರಷ್ಟು ಕಡಿಮೆ

ಬಾನು ಮುಷ್ತಾಕ್ ದನದ ಮಾಂಸ ತಿಂದು ದಸರಾ ಉದ್ಘಾಟಿಸಿ ಬಿಡುತ್ತಾರೇನೋ? ಆರ್. ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ!

SCO ಶೃಂಗಸಭೆ: ಮೋದಿ ಭೇಟಿ ಹಿನ್ನೆಲೆ, ಅಮೆರಿಕದ ಸುಂಕಾಸ್ತ್ರ ವಿರುದ್ಧ ರಷ್ಯಾ ಅಧ್ಯಕ್ಷ ಪುಟಿನ್ ಕಿಡಿ! ಹೇಳಿದ್ದು ಏನು?

SCROLL FOR NEXT