ಮುನಿರತ್ನ-ಸಿಟಿ ರವಿ 
ರಾಜಕೀಯ

ಮುನಿರತ್ನ ಮನೆಗೆ ಸಿಟಿ ರವಿ ಭೇಟಿ: ಗಾಂಧಿ ರಾಜ್ಯ ಮಾಡುತ್ತೇವೆಂದು ಗೂಂಡಾ ರಾಜ್ಯ ಮಾಡುತ್ತಿದ್ದಾರೆ; ಸರ್ಕಾರದ ವಿರುದ್ಧ ಆಕ್ರೋಶ

ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಯ್ಕೆಯಾಗಿರುವ ಶಾಸಕ ಮುನಿರತ್ನ ಅವರ‌ ಮೇಲೆ ನಡೆದ ಹಲ್ಲೆ ದುರದೃಷ್ಟಕರ. ಯಾರೇ ತಪ್ಪು ಮಾಡಿದರೂ‌ ಕಾನೂನಿನ ಮೂಲಕ‌ ಅದನ್ನು ಎದುರಿಸಬೇಕು. ಬದಲಾಗಿ ಅವರ‌ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ.

ಬೆಂಗಳೂರು: ಮೊಟ್ಟೆ ದಾಳಿ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಆರ್ ಆರ್​ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರ ನಿವಾಸಕ್ಕೆ ಪರಿಷತ್ ಸದಸ್ಯ ಸಿ ಟಿ ರವಿ ಅವರು ಶುಕ್ರವಾರ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.

ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಟಿ ರವಿ ಅವರು, ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಯ್ಕೆಯಾಗಿರುವ ಶಾಸಕ ಮುನಿರತ್ನ ಅವರ‌ ಮೇಲೆ ನಡೆದ ಹಲ್ಲೆ ದುರದೃಷ್ಟಕರ. ಯಾರೇ ತಪ್ಪು ಮಾಡಿದರೂ‌ ಕಾನೂನಿನ ಮೂಲಕ‌ ಅದನ್ನು ಎದುರಿಸಬೇಕು. ಬದಲಾಗಿ ಅವರ‌ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ. ಗಾಂಧಿಗಿರಿ ನೆನಪಿಸಿಕೊಳ್ಳುವ ಸಮಯದಲ್ಲಿ ಗೂಂಡಾಗಿರಿ ಮಾಡುತ್ತಿದ್ದಾರೆ. ರಾಜ್ಯವನ್ನು ಗೂಂಡಾ ರಾಜ್ಯ ಮಾಡಲು ಹೊರಟಿದ್ದಾರೆಂದು ಕಿಡಿಕಾರಿದರು.

ಅಧಿಕಾರ ದುರುಪಯೋಗ ಆಗಿರೋದು‌ ಅಂಗೈ ನಲ್ಲಿ ಇರೋ ಹುಣ್ಣಿನಂತೆ. ನನ್ನನ್ನ‌ ಬಂಧಿಸಿದ್ದು ಯಾವ ಹಿನ್ನೆಲೆಯಲ್ಲಿ? ಅದರ ಪರಮಾಧಿಕಾರ ಇರೋದು ನಮ್ಮ ಸಭಾಪತಿ ಅವರಿಗೆ. ಸಭಾಪತಿಗಳು ರೂಲಿಂಗ್ ಕೊಟ್ಟ ಬಳಿಕವೂ ಕಾನೂನು ಉಲ್ಲಂಘನೆ ಆಗಿದೆ. ನನ್ನನ್ನು ಬಂಧನ ಮಾಡಿ ಅಮಾನವೀಯ ವರ್ತನೆ ಮಾಡಿದ್ದಾರೆ. ಆದರೆ. ಬೆನ್ನು ತೋರಿಸಿ ಓಡೋಗುವ ಅಭ್ಯಾಸ ನನಗಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ತುರ್ತು ಪರಿಸ್ಥಿತಿಯನ್ನು ದೇಶದ ಮೇಲೆ ಹೇರಿದ್ದ ಇಂದಿರಾ ಗಾಂಧಿ ಅವರ ಪರಿಸ್ಥಿತಿ ಏನಾಯ್ತು ಎಂದು ಪ್ರಶ್ನಿಸಿದರು.

ಶಾಸಕ ಮುನಿರತ್ನ ಮಾತನಾಡಿ, ಘಟನೆ ನಡೆದಾಗ ಸಿ ಟಿ ರವಿ ದೂರವಾಣಿ ಕರೆ ಮಾಡಿ ವಿಚಾರಿಸಿದರು. ನಿಮ್ಮ ಜೊತೆ ನಾವಿದ್ದೇವೆ, ಎಲ್ಲಾ ವಿಷಯವನ್ನ ದೆಹಲಿಗೆ ತಲುಪಿಸಿದ್ದೇನೆ ಎಂದಿದ್ದರು. ಒಬ್ಬ ಶಾಸಕನ ಹಕ್ಕನ್ನ ಕಸಿಯಲಾಗುತ್ತಿದೆ. ಕ್ಷೇತ್ರಕ್ಕೆ ಹೋಗಬಾರದು ಎಂದು ಹೀಗೆ ಮಾಡುತ್ತಿದ್ದಾರೆ. ಡಿ ಕೆ ಶಿವಕುಮಾರ್ ಕೂಡ ಜೈಲಿಗೆ ಹೋಗಿ ಬಂದಿದ್ದಾರೆ. ಅವರಿಗೆ ಕ್ಷೇತ್ರಕ್ಕೆ ಹೋಗಲು ಅವಕಾಶ ಇದೆ, ಆದರೆ ನಾನು ಕ್ಷೇತ್ರಕ್ಕೆ ಹೋಗದಂತೆ ತಡೆಯುತ್ತಿದ್ದಾರೆ ಎಂದು ಆರೋಪ ಮಾಡಿದರು.

ಶಾಸಕಾರಗಲೇಬೇಕು ಎಂದುಕೊಂಡಿರುವ ಕಸುಮಾಗೆ ಒಂದು ಮಾತು ಹೇಳುತ್ತೇನೆ. ವಿದ್ಯಾವಂತರಿದ್ದೀರೆಂದು ಹೇಳ್ಕೊಂಡಿದ್ದೀರಿ, ಆದರೆ ಇಂತದಕ್ಕೆಲ್ಲ ಪ್ರಚೋದನೆ ಕೊಡಬೇಡಿ. ನಮ್ಮ ಕ್ಷೇತ್ರಕ್ಕೆ ಒಳ್ಳೆಯದಾಗಲು ನೋಡಿಕೊಳ್ಳಿ. ನಿಮ್ಮ ಮಾತನ್ನ ಎಲ್ಲರೂ ಕೇಳುತ್ತಾರೆ, ವರ್ಗಾವಣೆ ಲೆಟರ್ ಕೂಡ ನೀವು ಕೋಡುತ್ತೀರಿ. ಡಿಕೆ ಶಿವಕುಮಾರ್ ಮತ್ತು ಡಿ ಕೆ ಸುರೇಶ್ ನಿಮ್ಮ ಮಾತು ಕೇಳುತ್ತಾರೆ. ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿ, ಅದನ್ನ ಬಿಟ್ಟು ಮುನಿರತ್ನ ಮೇಲೆ ದಾಳಿ ಮಾಡಲು, ಚಪ್ಪಲಿ ಹಾರ ಹಾಕೋದಕ್ಕೆ, ಪೋಸ್ಟ್‌ರ್ ಹರಿಯೋದಕ್ಕೆ ಪ್ರೋತ್ಸಾಹ ಕೊಡಬೇಡಿ ಎಂದರು.

ಕಾಲ ಭೈರವೇಶ್ವರನ ಸನ್ನಿಧಿಗೆ ಬನ್ನಿ ಪ್ರಮಾಣ ಮಾಡೋಣ. ನ್ಯಾಯಾಲಯದ ತೀರ್ಪನ್ನು ನಾನು ಗೌರವಿಸುತ್ತೇನೆ. ತಿದ್ದಿಕೊಳ್ಳುತ್ತೀರ ಎಂದ ಭಾವಿಸುತ್ತೇನೆ. ಕ್ಷೇತ್ರದ ಜನ ಅಪ್ಪ ಮಗಳು ತೊಂದರೆ ಕೊಡುತ್ತಿದ್ದಾರೆ ಎಂದು ಮಾತಾಡುತ್ತಿದ್ದಾರೆ. ಇದು ನಿಮಗೂ ಶೋಭೆ ತರೋದಿಲ್ಲ. 10 ವರ್ಷ ಮುಂದಿದ್ದ ಕ್ಷೇತ್ರ 10 ವರ್ಷ ಹಿಂದಕ್ಕೆ ಹೋಗುತ್ತಿದೆ. ಅಭಿವೃದ್ಧಿ ಕೆಲಸಗಳೆಲ್ಲ ನಿಂತಿದೆ. ಯಾರಿಂದ ಎನ್ನೋದು ಗೊತ್ತಿದೆ. ರೇಪ್ ಕೇಸ್ ಹಾಕಿರೋದು ಅವರಿಗೆ ಗೊತ್ತಿಲ್ಲ ಎಂದು ಹೇಳಲಿ ಕಾಲ ಬೈರೇಶ್ವರನಲ್ಲಿ ಪ್ರಮಾಣ ಮಾಡಲಿ. ರೇಪ್ ಕೇಸ್ ಕೊಟ್ಟ ಹೆಣ್ಣು ಮಗಳು ಅವರಿಗೆ ಗೊತ್ತಿಲ್ಲ ಎಂದು‌ ಹೇಳಲಿ ನೋಡೋಣ. ನನಗೂ ಹೆಣ್ಣು ಮಕ್ಕಳಿದ್ದಾರೆ, 15 ವರ್ಷದ ಮೊಮ್ಮೊಗಳಿದ್ದಾಳೆ. ಈ ರೀತಿಯ ಸುಳ್ಳು ರೇಪ್ ಕೇಸ್ ಕೊಟ್ಟರೆ ಹೇಗೆ? ಈ ವಿಚಾರವನ್ನ ಕೇಂದ್ರದ ವರಿಷ್ಠರ ಗಮನಕ್ಕೆ ತಂದಿದ್ದೇನೆ ನಾನು ಪಕ್ಷದ ಜೊತೆ ಇದ್ದೇನೆ, ಪಕ್ಷ ನನ್ನ ಜೊತೆ ಇದೆ ಎಂದು ಹೇಳಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT