ಸಭಾಧ್ಯಕ್ಷರ ಪೀಠದ ಬಳಿ ಫೋಟೋ ತೆಗೆಸಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರು. 
ರಾಜಕೀಯ

ಸ್ಪೀಕರ್ ಪೀಠದ ಬಳಿ ‘ಕೈ‘ ನಾಯಕರ ಫೋಟೋಶೂಟ್‌: BJP ತೀವ್ರ ಕಿಡಿ

ಸ್ಪೀಕರ್‌ ಹುದ್ದೆ ಅಲಂಕರಿಸಿರುವ ಯು.ಟಿ. ಖಾದರ್ ಅವರು ಸದನದ ನಿಯಮಾವಳಿಗಳೆಲ್ಲವನ್ನೂ ಗಾಳಿಗೆ ತೂರಿ ತಮ್ಮ ಪೀಠದ ಬಳಿ ತಮ್ಮ ರಾಜಕೀಯ ಆಪ್ತೇಷ್ಟರ ಜೊತೆ ಫೋಟೋಶೂಟ್‌ ಮಾಡಿಸಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ?

ಬೆಂಗಳೂರು: ವಿಧಾನಸಭೆ ಸಭಾಧ್ಯಕ್ಷರ ಪೀಠದ ಬಳಿ ಕಾಂಗ್ರೆಸ್‌ನ ಕೆಲವು ನಾಯಕರು ಫೋಟೋ ಶೂಟ್ ನಡೆಸಿದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ವರ್ತನೆ ವಿರುದ್ಧ ಬಿಜೆಪಿ ತೀವ್ರ ಕಿಡಿಕಾರಿದೆ.

ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಪೀಠದಲ್ಲಿದ್ದಾಗಲೇ, ಮಂಗಳೂರು ಕಾಂಗ್ರೆಸ್‌ನ ನಾಯಕರು ಅಲ್ಲಿ ನಿಂತು ಚಿತ್ರ ತೆಗೆಸಿಕೊಂಡಿದ್ದಾರೆ. ಇದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ.

ಈ ಫೋಟೋಗಳನ್ನು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಬಿಜೆಪಿ ರಾಜ್ಯ ಘಟಕ, ಈ ಕುರಿತು ತೀವ್ರವಾಗಿ ಕಿಡಿಕಾರಿದೆ.

ಸ್ಪೀಕರ್‌ ಹುದ್ದೆ ಅತ್ಯಂತ ಪವಿತ್ರ ಹಾಗೂ ಘನತೆ ಇರುವಂತಹದ್ದು. ಸ್ಪೀಕರ್‌ ಹುದ್ದೆ ಅಲಂಕರಿಸಿದವರು ರಾಜಕೀಯದಿಂದ ಗಾವುದ ದೂರದಲ್ಲಿರಬೇಕು ಎಂಬುದು ಅಲಿಖಿತ ನಿಯಮ. ಆದರೆ ಸ್ಪೀಕರ್‌ ಹುದ್ದೆ ಅಲಂಕರಿಸಿರುವ ಯು.ಟಿ. ಖಾದರ್ ಅವರು ಸದನದ ನಿಯಮಾವಳಿಗಳೆಲ್ಲವನ್ನೂ ಗಾಳಿಗೆ ತೂರಿ ತಮ್ಮ ಪೀಠದ ಬಳಿ ತಮ್ಮ ರಾಜಕೀಯ ಆಪ್ತೇಷ್ಟರ ಜೊತೆ ಫೋಟೋಶೂಟ್‌ ಮಾಡಿಸಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಅವರೇ ತಿಳಿಸಬೇಕು’ ಎಂದು ಬಿಜೆಪಿ ಪ್ರಶ್ನಿಸಿದೆ.

ಯುಟಿ.ಖಾದರ್ ಸ್ಪಷ್ಟನೆ

ವಿವಾದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಯುಟಿ.ಖಾದರ್ ಅವರು, ಇದು ಅಧಿವೇಶನ ಆರಂಭವಾಗುವ ಮುನ್ನ ಸದನದ ಒಳಗಡೆ ತೆಗೆದ ಫೊಟೋ ಆಗಿದೆ. ಸದನ ನಡೆಯುವಾಗ ತೆಗೆದ ಫೋಟೋ ಅಲ್ಲ. ಅಧಿವೇಶನ ಆರಂಭವಾಗುವ ಮುನ್ನ ಸದನದಲ್ಲಿ ಕೆಲಸ ನಡೆಯುತ್ತಿರುವಾಗ ರಾತ್ರಿ 10 ಗಂಟೆಗೆ ತಪಾಸಣೆಗೆ ಹೋಗಿದ್ದೆ. ಆಗ ಅಲ್ಲಿಗೆ ಆಗಮಿಸಿದ್ದವರು ನನ್ನೊಂದಿಗೆ ಫೋಟೋ ತೆಗೆದರು ಎಂದು ಹೇಳಿದ್ದಾರೆ.

ಪ್ರತಿಪಕ್ಷಗಳ ಪ್ರತಿಭಟನೆ ಮತ್ತು ಧರಣಿ ಪ್ರಜಾಪ್ರಭುತ್ವದ ಸೌಂದರ್ಯ. ಅವರಿಗೆ ಬೇಕಿರುವ ಸೌಲಭ್ಯಕ್ಕೆ ವ್ಯವಸ್ಥೆ ಮಾಡಿದ್ದೇವೆ. ನಿಲುವಳಿ ಸೂಚನೆ ಅತ್ಯಗತ್ಯ ಮತ್ತು ತುರ್ತು ಆಗಿರಬೇಕು ಅಥವಾ ಅದು ಸಾರ್ವಜನಿಕ‌ ಮಹತ್ವದ್ದಾಗಿರಬೇಕು. ಹೀಗಾಗಿ, ಸ್ಪೀಕರ್ ಆಗಿ ಸದನದಲ್ಲಿ ಕೆಟ್ಟ ಸಂಪ್ರದಾಯ ಆರಂಭಿಸಲು ನಾನು ತಯಾರಿಲ್ಲ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮತುರ್ತಾಗಿರುವ ಕಾರಣ ಚರ್ಚೆಗೆ ಅವಕಾಶ ನೀಡಿದ್ದೇವೆ.‌ ತನಿಖೆ ನಡೆಯುತ್ತಿದ್ದರೂ ಚರ್ಚೆಗೆ ಅವಕಾಶ ಕೊಟ್ಟಿದ್ದೇವೆ. ಇಡಿಗೆ ಸಂಬಂಧಪಟ್ಟ ವಿಚಾರವೂ ತುರ್ತಾಗಿರುವುದರಿಂದ ಚರ್ಚೆಗೆ ಅವಕಾಶ ಕೊಟ್ಟಿದ್ದೇನೆ.‌ ಶಿವಲಿಂಗೇಗೌಡರ ದೇವರಾಜು ಅರಸು ಟ್ರಕ್ ಟರ್ಮಿನಲ್ ವಿಚಾರದ ಮೇಲಿನ ನಿಲುವಳಿ ಸೂಚನೆ ಚರ್ಚೆಗೆ ಅವಕಾಶ ನೀಡಿದ್ದೇನೆ ಎಂದರು.

ಮುಡಾ ಹಗರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಯುತ್ತಿದೆ. ಲೋಕಾಯುಕ್ತಕ್ಕೂ ದೂರು ನೀಡಿದ್ದಾರೆ. ಅಧಿಕಾರಿಗಳ ಬಗ್ಗೆ ಯಾರೂ ಚರ್ಚೆ ಮಾಡುವುದಿಲ್ಲ. ಇದು ಹಿಂದಿನ ಪ್ರಕರಣ, ಈಗ ಆಗಿರುವುದಲ್ಲ. ಈ ಬಗ್ಗೆ ಸದನದಲ್ಲಿ ನಾನು ಚರ್ಚೆಗೆ ಅವಕಾಶ ನೀಡಿದರೆ ಕೆಟ್ಟ ಸಂಪ್ರದಾಯವಾಗುತ್ತದೆ. ಮುಂದಿನ ಸ್ಪೀಕರ್ ಇದನ್ನೇ ಉದಾಹರಣೆಯಾಗಿ ಉಲ್ಲೇಖಿಸಿ ಅನುಸರಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT