ಸಂಸದ ಪ್ರತಾಪ್ ಸಿಂಹ 
ರಾಜಕೀಯ

ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪುವ ಸಾಧ್ಯತೆ: ಫೇಸ್ ಬುಕ್ ಲೈವ್ ನಲ್ಲಿ ಪ್ರತಾಪ್ ಸಿಂಹ ಭಾವುಕ!

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪುವ ಸಾಧ್ಯತೆಯ ಮಾತುಗಳು ಕೇಳಿಬರುತ್ತಿರುವಂತೆಯೇ, ಸೋಮವಾರ ರಾತ್ರಿ ದಿಢೀರ್ ಫೇಸ್ ಬುಕ್ ಲೈವ್ ನಲ್ಲಿ ಬಂದು ಭಾವುಕದ ಮಾತುಗಳನ್ನಾಡಿದ್ದಾರೆ.

ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪುವ ಸಾಧ್ಯತೆಯ ಮಾತುಗಳು ಕೇಳಿಬರುತ್ತಿರುವಂತೆಯೇ, ಸೋಮವಾರ ರಾತ್ರಿ ದಿಢೀರ್ ಫೇಸ್ ಬುಕ್ ಲೈವ್ ನಲ್ಲಿ ಬಂದು ಭಾವುಕದ ಮಾತುಗಳನ್ನಾಡಿದ್ದಾರೆ.

ಹೌದು. ಅತ್ತ ದೆಹಲಿಯಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯುತ್ತಿರುವ ಸಮಯದಲ್ಲಿಯೇ ಸಾಮಾಜಿಕ ಮಾಧ್ಯಮ ಫೇಸ್ ಬುಕ್ ಲೈವ್ ನಲ್ಲಿ ಕಾಣಿಸಿಕೊಂಡ ಪ್ರತಾಪ್ ಸಿಂಹ, ಮಾ. 11ರಂದು ಮೈಸೂರು - ಮನಮಧುರೈ ರೈಲಿಗೆ ಚಾಲನೆ ನೀಡಿದ್ದನ್ನು ಹೇಳಿದರು. ಸಂಸದನಾಗಿ ನನ್ನ ಮೊದಲ ಅವಧಿಯ ಕಡೆ ತಿಂಗಳಲ್ಲಿ ನಾನು ಮೈಸೂರು - ಕಾಚಿಗೂಡ ರೈಲು ತಂದಿದ್ದೆ. ಎರಡನೇ ಅವಧಿಯ ಕಡೆಯ ಹಂತದಲ್ಲಿ ಮೈಸೂರು - ಮನಮಧುರೈ ರೈಲಿಗೆ ಫ್ಲಾಗ್ ಆಫ್ ಮಾಡಿದ್ದೇನೆ ಎಂದು ತಿಳಿಸಿದರು.

ಮೈಸೂರಲ್ಲಿ ರಾಜಕಾರಣ ಮಾಡುವುದು ತುಂಬಾ ಕಷ್ಟ. ರಾಜರ ಊರು ಅಂದಮೇಲೆ ಚಾಡಿಕೋರರು, ಹೊಗಳುಭಟ್ಟರು ಎಲ್ಲರೂ ಇರುತ್ತಾರೆ. ಸಿದ್ದಾಂತ ಬೇರೂರುವುದು ಬಹಳ ಕಷ್ಟ. 1989ರಿಂದ ಮೈಸೂರಿನಲ್ಲಿ ಸತತವಾಗಿ ಎರಡನೇ ಸಲ ಯಾರನ್ನೂ ಗೆಲ್ಲಿಸಿಲ್ಲ. ಜನ ನನ್ನನ್ನು ಗೆಲ್ಲಿಸಿದ್ದಾರೆ. ಜನರಿಗೆ ಅವರ ಮನೆ ಬಾಗಿಲು ಕಾಯುವವರು ಬೇಕು. ಜನರು ಹೋಗಿ ಬಾಗಿಲು ಕಾಯುವವರು ಅವರಿಗೆ ಬೇಡ. ಮೈಸೂರಿನಲ್ಲಿ ಎರಡು ಬಾರಿ ರಾಜವಂಶಸ್ಥರನ್ನು ಸೋಲಿಸಿದ್ದಾರೆ. ಆದರೆ 40 ವರ್ಷಗಳಲ್ಲಿ ನಾನೊಬ್ಬನನ್ನು ಮಾತ್ರ ಸತತ ಎರಡು ಬಾರಿ ಗೆಲ್ಲಿಸಿದ್ದಾರೆ. ನನ್ನ ಟಿಕೆಟ್ ಬಗ್ಗೆ ಚಾಮುಂಡೇಶ್ವರಿ ನಿರ್ಧಾರ ಮಾಡುತ್ತಾಳೆ. ಆ ತಾಯಿಗೆ ಬಿಟ್ಟಿದ್ದೇನೆ. ಟಿಕೆಟ್ ನನಗೆ ಕೊಟ್ಟರೆ ನಾನು 3 ಲಕ್ಷ ಅಂತರದಿಂದ ಗೆಲ್ಲುತ್ತೇನೆ. ಕಾರ್ಯಕರ್ತರು ನನ್ನ ಪರ ನಿಂತಿದ್ದಾರೆ ಎಂದು ತಿಳಿಸಿದರು.

ರಾಜಕೀಯದಲ್ಲಿ ದ್ವೇಷ ಅಸೂಯೇ ಸಹಜ ನನ್ನ ಕೆಲಸ ನೋಡಿ ಜನ ಸಾಮಾಜಿಕ ಮಾಧ್ಯಮದಲ್ಲಿ ಬೆಂಬಲಕ್ಕೆ ನಿಂತಿದ್ದಾರೆ ಸಾಕು. ನಿಮ್ಮ ಹೃದಯದಲ್ಲಿ ನನಗೆ ಸ್ಥಾನ ಕೊಟ್ಟಿದ್ದೀರಿ. 28 ವಿಧಾನ ಸಭಾ ಕ್ಷೇತ್ರದಲ್ಲಿ ಯಾವ ಎಂಪಿ ಪರವಾಗಿ ಜನ ನಿಂತಿಲ್ಲ. ನನ್ನ ಪರವಾಗಿ ನಿಂತಿದ್ದಾರೆ. ದೇಶಕ್ಕೆ ಮೋದಿ ಹೇಗೆ ಬೇಕೋ ಹಾಗೇ ಆಯಾ ಕ್ಷೇತ್ರಕ್ಕೆ ಒಬ್ಬೊಬ್ಬ ಛೋಟಾ ಮೋದಿ ಬೇಕು ಅಂತಾ ಬಯಸುತ್ತಾರೆ. ದೇವರು ಆಶೀರ್ವಾದ ಇದ್ದರೆ ಮೂರನೇ ಬಾರಿಗೆ ನಿಮ್ಮ ಸೇವೆ ಮಾಡುತ್ತೇನೆ. ಕೊಡಗಿಗೆ ಎರಡು ಅವಧಿಯಲ್ಲಿ ಸ್ವಲ್ಪ ಕಡಿಮೆ ಕೆಲಸ ಮಾಡಿದ್ದೆ. ಕೊಡಗಿನ ಋಣ ತೀರಿಸಬೇಕಿದೆ. ಆ ಕೆಲಸವನ್ನು ಮೂರನೇ ಬಾರಿಯ ಅವಧಿಯಲ್ಲಿ ಮಾಡುತ್ತೇನೆ. ಮೈಸೂರಿಗೆ ಅತಿ ಹೆಚ್ಚಿನ ಕೆಲಸ ಮಾಡಿರುವುದಾಗಿ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

SCROLL FOR NEXT