ಸಿ.ಎಸ್.ಪುಟ್ಟರಾಜು
ಸಿ.ಎಸ್.ಪುಟ್ಟರಾಜು 
ರಾಜಕೀಯ

ಮಂಡ್ಯ ಕ್ಷೇತ್ರಕ್ಕೆ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿ: ಸಿ.ಎಸ್ ಪುಟ್ಟರಾಜು

Shilpa D

ಮಂಡ್ಯ: ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಅವರೇ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಲಿದ್ದು, ನಾನೇ ಚುನಾವಣೆಯ ನೇತೃತ್ವ ವಹಿಸುತ್ತೇನೆ. ಅತ್ಯಂತ ಪ್ರಚಂಡ ಬಹುಮತದಲ್ಲಿ ಅವರನ್ನು ಗೆಲ್ಲಿಸುತ್ತೇವೆ ಎಂದು ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕುಮಾರಸ್ವಾಮಿ ನಾಮಪತ್ರ ಸಲ್ಲಿಸಲು ಅಷ್ಟೇ ಬರಲಿ ಅಂತಾ ಹೇಳಿದ್ದೇವೆ. ನಾವೇ ಓಡಾಡಿ ಗೆಲ್ಲಿಸುತ್ತೇವೆ. ಇಂದು ಚೆನ್ನೈನಲ್ಲಿ ಕುಮಾರಸ್ವಾಮಿಯವರ ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಮೂರ್ನಾಲ್ಕು ದಿನದಲ್ಲಿ ರಾಜ್ಯಕ್ಕೆ ಬರಲಿದ್ದಾರೆ. ಮಂಡ್ಯ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

ಬಿಜೆಪಿ ಹೈಕಮಾಂಡ್ ಜೆಡಿಎಸ್‌ಗೆ ಯಾವ ಕ್ಷೇತ್ರಗಳು ಎಂದು ನಾಳೆ ಅಧಿಕೃತವಾಗಿ ಘೋಷಿಸುತ್ತದೆ. ಟಿಕೆಟ್ ಘೋಷಣೆ ಬಳಿಕ ಸುಮಲತಾ ಅವರೊಂದಿಗೂ ಮಾತಾನಾಡುತ್ತೇವೆ. ಎಲ್ಲರೂ ಒಗ್ಗಟ್ಟನಿಂದ ಹೋಗುತ್ತೇವೆ ಎಂದರು.

ಕಾಂಗ್ರೆಸ್ ನಾಯಕರು ಪುಟ್ಟರಾಜುಗೆ ಗಾಳ ಹಾಕಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ದೇವೇಗೌಡರ ಮನೆ ಮಗನಾಗಿದ್ದೇನೆ. ನನ್ನ ಕೊನೆ ಉಸಿರು ಇರುವವರೆಗೂ ದೇವೇಗೌಡರ ಮನೆ ಮಗನಾಗೆ ಇರ್ತಿನಿ ಎಂದರು.

ಸುಮಲತಾ ಅಂಬರೀಶ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಿಂದೆ ರಾಜಕೀಯವಾಗಿ ವ್ಯತ್ಯಾಸಗಳು ಆಗಿವೆ, ರಾಜಕೀಯದಲ್ಲಿ ಯಾರು ಶತ್ರುಗಳಲ್ಲ, ಮಿತ್ರರೂ ಅಲ್ಲಾ. ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ ಎಂದರು.

ಸ್ವಂತ ನಿರ್ಧಾರಗಳನ್ನ ಜೆಡಿಎಸ್ ಮಾಡಲು ಆಗ್ತಿಲ್ಲ ಎಂಬ ಚಲುವರಾಯಸ್ವಾಮಿ ಹೇಳಿಕೆಗೆ ಉತ್ತರಿಸಿದ ಅವರು, ಚಲುವರಾಯಸ್ವಾಮಿ ನಮ್ಮ ಹೆಡ್ ಮಾಸ್ಟರ್. ಚಲುವರಾಯಸ್ವಾಮಿ ಹೇಳಿದ ಹಾಗೆ ನಾವು ನಡೆದುಕೊಳ್ತಿವಿ. ಅವರಿಲ್ಲದೆ ನಾವು ಈಗ ಕಂಗಾಲಾಗಿದ್ದೇವೆ ಎಂದು ವ್ಯಂಗ್ಯವಾಡಿದರು.

SCROLL FOR NEXT