ನಿಖಿಲ್ ಕುಮಾರಸ್ವಾಮಿ, ಸಿ ಪಿ ಯೋಗೇಶ್ವರ್  
ರಾಜಕೀಯ

ಚನ್ನಪಟ್ಟಣ ಉಪ ಚುನಾವಣೆ: ಇಬ್ಬರು ಒಕ್ಕಲಿಗ ಪ್ರಾಬಲ್ಯ ನಾಯಕರ ನಡುವಿನ ಕದನ

ಮಾಜಿ ಸಿಎಂ ಕುಮಾರಸ್ವಾಮಿ 2023 ರ ಚುನಾವಣೆಯಲ್ಲಿ ಮರದ ಆಟಿಕೆಗಳು ಮತ್ತು ಮೆರುಗೆಣ್ಣೆಗಳಿಗೆ ಹೆಸರುವಾಸಿಯಾದ ಚನ್ನಪಟ್ಟಣದಿಂದ ಗೆದ್ದರೆ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ನೆರೆಯ ಕನಕಪುರದಿಂದ 1.2 ಲಕ್ಷ ಮತಗಳ ಅಂತರದಿಂದ ಚುನಾಯಿತರಾದರು.

ಬೆಂಗಳೂರು: ನವೆಂಬರ್ 13 ರಂದು ನಡೆಯಲಿರುವ ವಿಧಾನಸಭೆ ಉಪಚುನಾವಣೆಯಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮತ್ತು ಅವರ ಸಾಂಪ್ರದಾಯಿಕ ಎದುರಾಳಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸ್ಪರ್ಧಾ ಕಣದಲ್ಲಿ ಇಲ್ಲದಿರಬಹುದು.

ಆದರೆ ರಾಜಧಾನಿ ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಚನ್ನಪಟ್ಟಣ ಈಗ ಕುತೂಹಲದ ಕಣವಾಗಿ ಮಾರ್ಪಟ್ಟಿರುವುದಂತೂ ಸತ್ಯ. ಕ್ಷೇತ್ರದ ಎರಡು ಪ್ರಬಲ ಒಕ್ಕಲಿಗರ ನಡುವೆ ನಿಜವಾದ ಸ್ಪರ್ಧೆ ಏರ್ಪಟ್ಟಿದೆ. ಒಕ್ಕಲಿಗ ಸಮುದಾಯ ಮತ್ತು ಪ್ರದೇಶದೊಳಗೆ ತಮ್ಮ ಬೆಂಬಲದ ನೆಲೆಯನ್ನು ಕ್ರೋಢೀಕರಿಸಲು ಪರಸ್ಪರರನ್ನು ಮೀರಿಸಲು ಎರಡೂ ಪಕ್ಷಗಳ ನಾಯಕರು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ 2023 ರ ಚುನಾವಣೆಯಲ್ಲಿ ಮರದ ಆಟಿಕೆಗಳು ಮತ್ತು ಮೆರುಗೆಣ್ಣೆಗಳಿಗೆ ಹೆಸರುವಾಸಿಯಾದ ಚನ್ನಪಟ್ಟಣದಿಂದ ಗೆದ್ದರೆ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ನೆರೆಯ ಕನಕಪುರದಿಂದ 1.2 ಲಕ್ಷ ಮತಗಳ ಅಂತರದಿಂದ ಚುನಾಯಿತರಾದರು. ನಂತರ ಕುಮಾರಸ್ವಾಮಿ ಮಂಡ್ಯ ಸಂಸದ ಸ್ಥಾನಕ್ಕೆ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿ ವಿಧಾನಸಭಾ ಸ್ಥಾನ ತೆರವು ಮಾಡಿದ ನಂತರ ಈಗ ನಿಖಿಲ್ ಕುಮಾರಸ್ವಾಮಿ ಬಹು ನಿರೀಕ್ಷೆಯ ಉಪ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಎದುರಿಸುತ್ತಿರುವುದು ಮಾಜಿ ಸಚಿವ, ಐದು ಬಾರಿ ಶಾಸಕರಾಗಿದ್ದ ಸಿ ಪಿ ಯೋಗೇಶ್ವರ್ ಅವರನ್ನು. ಇಬ್ಬರೂ ಅಭ್ಯರ್ಥಿಗಳು ಕನ್ನಡ ಚಲನಚಿತ್ರ ರಂಗದಲ್ಲಿ ಕೂಡ ಗುರುತಿಸಿಕೊಂಡವರು.

ನಿಖಿಲ್ ಈ ಹಿಂದೆ ಎರಡು ಚುನಾವಣೆಗಳಲ್ಲಿ ಒಂದರ ಹಿಂದೊಂದರಂತೆ ಸೋತರು - 2019 ರ ಲೋಕಸಭೆ ಚುನಾವಣೆ ಮಂಡ್ಯದಿಂದ ಮತ್ತು 2023 ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರದಿಂದ. ಪಕ್ಷದ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಮೊಮ್ಮಗನಿಗೆ ಆ ಸೋಲಿನ ಸರಮಾಲೆಯನ್ನು ಈ ಬಾರಿ ಮುರಿಯುವುದು ಮುಖ್ಯವಾಗಿದೆ.

ಕುಮಾರಸ್ವಾಮಿ ಮತ್ತು ಅವರ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಈ ಚುನಾವಣೆ ಅಷ್ಟೇ ಮಹತ್ವದ್ದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟಕ್ಕೆ ಕುಮಾರಸ್ವಾಮಿ ಸೇರ್ಪಡೆಯಾದಾಗಿನಿಂದ ಕಾಂಗ್ರೆಸ್ ನಾಯಕರು ನಿರಂತರವಾಗಿ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸಚಿವರ ನಡುವೆ ನಿರಂತರ ಘರ್ಷಣೆ ಇದೆ.

ಚನ್ನಪಟ್ಟಣದಲ್ಲಿನ ಗೆಲುವು ಒಕ್ಕಲಿಗ ಪ್ರಬಲ ಸಮುದಾಯದ ಮತದಾರರ ಮೇಲೆ ಅವರು ಇನ್ನೂ ಹಿಡಿತ ಸಾಧಿಸಿದ್ದಾರೆ ಎಂಬ ಸಂದೇಶವನ್ನು ಜೆಡಿಎಸ್ ನಾಯಕ ಕುಮಾರಸ್ವಾಮಿ ತನ್ನ ವಿರೋಧಿಗಳಿಗೆ ರವಾನಿಸಲು ಸಹಾಯ ಮಾಡಬಹುದು ಮತ್ತು ಎನ್‌ಡಿಎ ನಾಯಕರಲ್ಲಿ ಅವರ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಬಹುದು.

ಈ ವಾರದ ಆರಂಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಮರಳಿದ ಯೋಗೇಶ್ವರ್‌ಗೆ ಕಾಂಗ್ರೆಸ್‌ ಟಿಕೆಟ್‌ ನೀಡುವ ಮೂಲಕ ಸೇಫ್‌ ಆಟವಾಡುತ್ತಿರುವ ಶಿವಕುಮಾರ್‌ಗಿಂತ ಭಿನ್ನವಾಗಿ, ಕುಮಾರಸ್ವಾಮಿ ಅವರು ತಮ್ಮ ಮಗನನ್ನು ಕಣಕ್ಕಿಳಿಸುವ ಮೂಲಕ ಅಪಾಯದ ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ. ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿಯವರು ಶೇಕಡಾ48.83ರಷ್ಟು ಮತಗಳನ್ನು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯೋಗೇಶ್ವರ್ ಶೇಕಡಾ 40.7ರಷ್ಟು ಮತಗಳನ್ನು ಪಡೆದರು. ಕಾಂಗ್ರೆಸ್ ಕೇವಲ ಶೇಕಡಾ 7.77 ಮತಗಳನ್ನು ಗಳಿಸಿತ್ತು.

ಬಹುಶಃ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿ ಕೆ ಶಿವಕುಮಾರ್‌ಗೆ, ಜೆಡಿಎಸ್‌ನ ಭದ್ರಕೋಟೆಯಲ್ಲಿ ಯೋಗೇಶ್ವರ ಅವರನ್ನು ಕಣಕ್ಕಿಳಿಸಿ ಗೆಲುವಿನ ಕನಸಿನಲ್ಲಿದ್ದಾರೆ. ಬೆಂಗಳೂರು ಗ್ರಾಮಾಂತರದಿಂದ ಲೋಕಸಭೆ ಚುನಾವಣೆಯಲ್ಲಿ ಕಿರಿಯ ಸಹೋದರ ಡಿಕೆ ಸುರೇಶ್ ಸೋಲನುಭವಿಸಿದ ನಂತರ ಕಾಂಗ್ರೆಸ್‌ನಲ್ಲಿ ಒಕ್ಕಲಿಗ ಪ್ರಬಲ ವ್ಯಕ್ತಿ ಎಂಬ ಅವರ ಇಮೇಜ್‌ಗೆ ಹೊಡೆತ ಬಿದ್ದಿತ್ತು. ಚನ್ನಪಟ್ಟಣದಲ್ಲಿನ ಗೆಲುವು ಸ್ವಲ್ಪ ಮಟ್ಟಿಗೆ ಆ ಹಾನಿಯನ್ನು ನಿವಾರಿಸಲು ಅವರಿಗೆ ಸಹಾಯ ಮಾಡಬಹುದು.

ಶಿಗ್ಗಾಂವಿಯಲ್ಲಿ ಲಿಂಗಾಯತ ಮತ ಮೇಲೆ ಕಾಂಗ್ರೆಸ್ ನಿರೀಕ್ಷೆ

ಶಿಗ್ಗಾಂವಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ನಾಯಕ ಯಾಸಿರ್ ಖಾನ್ ಪಠಾಣ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ ಕಾಂಗ್ರೆಸ್ ತಂತ್ರವು ಇತರ ಸಮುದಾಯಗಳ ಬೆಂಬಲವನ್ನು ಹೊರತುಪಡಿಸಿ ಲಿಂಗಾಯತ ಮತಗಳನ್ನು ಕ್ರೋಢೀಕರಿಸಲು ಬಿಜೆಪಿಗೆ ಸಹಾಯ ಮಾಡುವ ಸಾಧ್ಯತೆಯಿದೆ. ತನ್ನ ಭಾಗದಲ್ಲಿ, ಕಾಂಗ್ರೆಸ್ ಈ ಭಾಗದಲ್ಲಿ ಅಲ್ಪಸಂಖ್ಯಾತ ಮತ್ತು ಕುರುಬ ಸಮುದಾಯದ ಮತದಾರರ ಮೇಲೆ ಅವಲಂಬಿತವಾಗಿದೆ.

ಮಾಜಿ ಸಿಎಂ ಹಾಗೂ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಅವರು ತಮ್ಮ ತಂದೆ ಪ್ರತಿನಿಧಿಸುತ್ತಿದ್ದ ಕ್ಷೇತ್ರದಿಂದ ಚುನಾವಣೆಗೆ ಪದಾರ್ಪಣೆ ಮಾಡುತ್ತಿದ್ದಾರೆ. ಹಿರಿಯ ಜನತಾ ಪಕ್ಷ ಮತ್ತು ಜನತಾ ದಳದ ನಾಯಕರಾಗಿದ್ದ ಭರತ್ ಅವರ ಅಜ್ಜ ಎಸ್‌ಆರ್ ಬೊಮ್ಮಾಯಿ ಅವರು ಆಗಸ್ಟ್ 1988 ರಿಂದ ಏಪ್ರಿಲ್ 1989 ರವರೆಗೆ ಮುಖ್ಯಮಂತ್ರಿಯಾಗಿದ್ದರು.

ಸಂಡೂರಿನಲ್ಲಿ (ಎಸ್‌ಟಿ ಮೀಸಲು ಕ್ಷೇತ್ರ) ಬಿಜೆಪಿ ಉಸ್ತುವಾರಿಯನ್ನು ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಮುನ್ನಡೆಸುತ್ತಿದ್ದಾರೆ. ಬಿಜೆಪಿ ಹಿಂದೆಂದೂ ಈ ಸ್ಥಾನವನ್ನು ಗೆದ್ದಿಲ್ಲವಾದರೂ, ಅದರ ನಾಯಕರು ಪ್ರತಿ ಚುನಾವಣೆ ವಿಭಿನ್ನವಾಗಿದೆ ಎಂದು ಹೇಳಿಕೊಳ್ಳುತ್ತಾರೆ. ಸಂಡೂರು ಕ್ಷೇತ್ರವನ್ನು ಕಾಂಗ್ರೆಸ್‌ನ ಇ ತುಕಾರಾಂ ನಾಲ್ಕು ಅವಧಿಗೆ ಪ್ರತಿನಿಧಿಸಿದ್ದರು. ಬಳ್ಳಾರಿಯಿಂದ ಸಂಸದರಾಗಿ ಆಯ್ಕೆಯಾದ ನಂತರ ಅವರ ಪತ್ನಿ ಇ ಅನ್ನಪೂರ್ಣ ಈಗ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

ಈ ಬಾರಿಯ ಉಪ ಚುನಾವಣೆ ಗಮನ ಹೆಚ್ಚಾಗಿ ಚನ್ನಪಟ್ಟಣದ ಮೇಲೆ ಕೇಂದ್ರೀಕೃತವಾಗಿದೆ. ಇದು ಕಾಂಗ್ರೆಸ್ ಮತ್ತು ಜೆಡಿಎಸ್‌ನ ಒಕ್ಕಲಿಗ ಪ್ರಾಬಲ್ಯದ ಭಾರೀ ಘರ್ಷಣೆಗೆ ಸಾಕ್ಷಿಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT