ಸಾಂದರ್ಭಿಕ ಚಿತ್ರ 
ರಾಜಕೀಯ

ಜಾತಿ ಜ್ವಾಲಾಗ್ನಿ: ಸಮೀಕ್ಷೆಗೆ ದಶಕ, ಸಚಿವ ಸಂಪುಟಕ್ಕೆ ತರಲು 2 ವರ್ಷ; ಇನ್ನು ಸರಾಗವಾಗಿ ವರದಿ ಜಾರಿ ಹೇಗೆ ಸಾಧ್ಯ?

ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದಿನ ಅವಧಿಯಲ್ಲಿ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನದ ಪ್ರಸ್ತಾಪ ಮಂಡಿಸಿದಾಗ ಎದುರಿಸದಂತ ಸವಾಲುಗಳು ಮತ್ತೆ ಮರುಳಿಸುತ್ತವೆ.

ಬೆಂಗಳೂರು: ಸದ್ಯ ಇರುವ ಪರಿಸ್ಥಿತಿಗಳಿಂದ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಶೀಘ್ರದಲ್ಲೇ ಜಾರಿಗೊಳಿಸುವುದು ಅಸಾಧ್ಯವಾಗಿದೆ. ಏಕೆಂದರೆ 'ಜಾತಿ ಜನಗಣತಿ' ಎಂದು ಕರೆಯಲ್ಪಡುವ ವರದಿಯು ಬೆಳಕಿಗೆ ಬರಲು ಸುಮಾರು ಒಂದು ದಶಕ ತೆಗೆದುಕೊಂಡಿತು. ಇನ್ನು ಅನುಷ್ಠಾನ ಅಷ್ಟು ಬೇಗ ಆಗಲು ಸಾಧ್ಯವಿಲ್ಲ.

ಗುರುವಾರದ ಸಚಿವ ಸಂಪುಟ ಸಭೆಯು ಅನಿಶ್ಚಿತವಾಗಿಯೇ ಉಳಿದಿದ್ದು, ಮೇ 2 ರಂದು ಈ ವಿಷಯವನ್ನು ಮತ್ತೆ ಚರ್ಚಿಸಲು ನಿರ್ಧರಿಸಲಾಗಿದೆ ಆದರೆ ಸಮೀಕ್ಷೆಗೆ ಬಳಸಿದ ಮಾನದಂಡಗಳ ಕುರಿತು ಸಭೆಯಲ್ಲಿ ಅನೇಕರು ಅನುಮಾನ ವ್ಯಕ್ತ ಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ತಾಂತ್ರಿಕ ವಿವರಗಳನ್ನು ಸಚಿವರು ಕೋರುತ್ತಿದ್ದಾರೆ.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ವತಃ ಜಾತಿ ಗಣತಿ ವರದಿ ಅನುಷ್ಠಾನದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಕೆಲವು ಸಮುದಾಯಗಳನ್ನು ಕಡಿಮೆ ಎಣಿಕೆ ಮಾಡಲಾಗಿದೆ ಎಂಬ ಆರೋಪಿಸಿದ್ದಾರೆ. ಕೆಲ ಸಮುದಾಯದ ಸಂಖ್ಯೆ ಕಡಿಮೆಯಾಗಲು ಸಮೀಕ್ಷೆ ನಡೆಸಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಇದಕ್ಕೆ ಹೊಣೆ ಎಂದಿದ್ದಾರೆ.

ಈ ಸಮಸ್ಯೆಗಳನ್ನು ಸರಿಯಾಗಿ ಪರಿಹರಿಸದಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದಿನ ಅವಧಿಯಲ್ಲಿ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನದ ಪ್ರಸ್ತಾಪ ಮಂಡಿಸಿದಾಗ ಎದುರಿಸದಂತ ಸವಾಲುಗಳು ಮತ್ತೆ ಮರುಳಿಸುತ್ತವೆ, ಜೊತೆಗೆ ಇದು ಸರ್ಕಾರಕ್ಕೆ ತಿರುಗುಬಾಣವಾಗುವ ಸಾಧ್ಯತೆಯಿದೆ ಎಂದಿದ್ದಾರೆ.

ಇದು ಕೇವಲ ಒಂದು ಅಥವಾ ಎರಡು ಸಮುದಾಯಗಳ ವಿಷಯವಲ್ಲ, ನೂರಾರು ಸಮುದಾಯಗಳು ಭಯಭೀತವಾಗಿಲೆ. ಅವರನ್ನು ಸಮಾಧಾನಪಡಿಸದಿದ್ದರೆ, ಖಂಡಿತವಾಗಿಯೂ ಸಮಸ್ಯೆಯಾಗುತ್ತದೆ. ಅನುಷ್ಠಾನವನ್ನು ಇದ್ದಕ್ಕಿದ್ದಂತೆ ಮಾಡಲು ಸಾಧ್ಯವಿಲ್ಲದ ಕಾರಣ ಸರ್ಕಾರವೇ ರಾಜಿ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಜಾತಿ ಗಣತಿ ವರದಿ ಸರ್ಕಾರಕ್ಕೆ ಸಲ್ಲಿಸಲು 10 ವರ್ಷಗಳ ಸಮಯ ಹಿಡಿಯಿತು, ಅದನ್ನು ಸಂಪುಟಕ್ಕೆ ತರಲು ಎರಡು ವರ್ಷಗಳು ಬೇಕಾಯಿತು, ಹೀಗಾಗಿ ಜಾರಿಗೆ ತರುವ ತೀರ್ಮಾನಕ್ಕೆ ಬರಲು ಇನ್ನೂ ಒಂದು ವರ್ಷ ಬೇಕಾಗಬಹುದು ಎಂದು ಅವರು ಹೇಳಿದರು, ತಮ್ಮ ಜನಸಂಖ್ಯೆಯನ್ನು ಕಡಿಮೆ ಎಣಿಸಲಾಗಿದೆ ಎಂಬ ಸಮುದಾಯಗಳ ಭಾವನೆಗಳನ್ನು ಎದುರಿಸಲು ಸರ್ಕಾರ ಸಿದ್ಧವಾಗಿರಬೇಕು ಎಂದಿದ್ದಾರೆ.

ಇದರ ನಡುವೆ ಕೆಲವು ತಜ್ಞರು ಕೋಟಾವನ್ನು ಪುನರ್ರಚಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ, ವಿಶೇಷವಾಗಿ ಕುರುಬ ಸಮುದಾಯವನ್ನು ವರ್ಗ-2A ಯಿಂದ ವರ್ಗ-1B ಗೆ ಬದಲಾಯಿಸಬೇಕಾಗಿದೆ, ಏಕೆಂದರೆ ಇದು ಅತ್ಯಂತ ಹಿಂದುಳಿದ ಸಮುದಾಯವಾಗಿದೆ. ಸಮುದಾಯವು ಹಿಂದುಳಿದಿದೆ ಎಂಬುದನ್ನು ನಿರ್ಧರಿಸಲು ಜನಾಂಗೀಯ ಅಧ್ಯಯನದ ಅಗತ್ಯವಿದೆ ಎಂದಿದ್ದಾರೆ.

ದಶಕಗಳಿಂದ ವರ್ಗ-2A ಕೋಟಾದ ಅಡಿಯಲ್ಲಿ ಗರಿಷ್ಠ ಪ್ರಯೋಜನಗಳನ್ನು ಅನುಭವಿಸಿದ ಸಮುದಾಯಗಳ ಬಗ್ಗೆ, ವಿಶೇಷವಾಗಿ ಕುರುಬ ಸಮುದಾಯದ ಬಗ್ಗೆ ಆಯೋಗವು ಮಾಹಿತಿಯನ್ನು ಪಡೆದುಕೊಂಡಿದೆಯೇ ಎಂಬುದು ಪ್ರಶ್ನೆಯಾಗಿದೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ತಮ್ಮ 2015ರ ಸಾಮಾಜಿಕ, ಆರ್ಥಿಕ ಸಮೀಕ್ಷೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ಕುರಿತಾದ ದತ್ತಾಂಶ ಮತ್ತು ತಜ್ಞರ ಅಧ್ಯಯನ ವರದಿಯನ್ನು ಆಧರಿಸಿ ಹಿಂದುಳಿದ ವರ್ಗಗಳ ಕೋಟಾವನ್ನು ಪುನರ್ರಚಿಸಲಾಗಿದೆ ಹೀಗಾಗಿ ಜನಾಂಗೀಯ ಅಧ್ಯಯನದ ಅಗತ್ಯವಿಲ್ಲ ಎಂದು ಹೇಳಿದರು.

ಕುರುಬ ಸಮುದಾಯಕ್ಕೆ ಸೇರಿದ ಮುಖ್ಯಮಂತ್ರಿಯೊಬ್ಬರು ಸಮುದಾಯದ ಪರವಾಗಿ ಶಿಫಾರಸು ಮಾಡಿದ್ದರೇ ಅದು ಇತರ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶವನ್ನೇ ವಿಫಲಗೊಳಿಸುತ್ತದೆ" ಎಂದು ಹಿಂದುಳಿದ ಜಾತಿಯ ಕಾಂಗ್ರೆಸ್ ನಾಯಕರೊಬ್ಬರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT