ಆರ್.ಅಶೋಕ್ 
ರಾಜಕೀಯ

ಬೆಂಗಳೂರು ಕಾಲ್ತುಳಿತ: DC-DCM ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕು; BJP ಆಗ್ರಹ

ದುರಂತಕ್ಕೆ ಸರ್ಕಾರವೇ ಸಂಪೂರ್ಣ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಕ್ಷ್ಮತೆಯಿದ್ದರೆ, ಅವರು ರಾಜ್ಯದ ಜನರ ಕ್ಷಮೆಯಾಚಿಸಬೇಕು. ಮೂವರೂ ಇದಕ್ಕೆ ಹೊಣೆಗಾರಿಕೆ ವಹಿಸಿಕೊಂಡು ರಾಜೀನಾಮೆ ನೀಡಬೇಕು.

ಬೆಂಗಳೂರು: ಜೂನ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿಯ ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರ ಸಾವಿಗೆ ಕಾರಣವಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ರಾಜೀನಾಮೆಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮಂಗಳವಾರ ಒತ್ತಾಯಿಸಿದ್ದಾರೆ.

ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಎ1, ಎ2 ಮತ್ತು ಎ3 ಆರೋಪಿಗಳಾಗಿದ್ದು, ಜವಾಬ್ದಾರಿ ಹೊತ್ತು ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ವಿಧಾನಸಭೆಯಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ಈ ವಿಷಯದ ಕುರಿತು ಮಾತನಾಡಿದ ಅಶೋಕ್ ಅವರು, ದುರಂತಕ್ಕೆ ಸರ್ಕಾರವೇ ಸಂಪೂರ್ಣ ಕಾರಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಕ್ಷ್ಮತೆಯಿದ್ದರೆ, ಅವರು ರಾಜ್ಯದ ಜನರ ಕ್ಷಮೆಯಾಚಿಸಬೇಕು. ಮೂವರೂ ಇದಕ್ಕೆ ಹೊಣೆಗಾರಿಕೆ ವಹಿಸಿಕೊಂಡು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಕಾನೂನು ಸಚಿವ ಎಚ್.ಕೆ. ಪಾಟೀಲ್ ಭವಿಷ್ಯದಲ್ಲಿ ಇಂತಹ ದುರಂತಗಳನ್ನು ತಡೆಗಟ್ಟಲು ನಿಯಮಗಳನ್ನು ರೂಪಿಸಬೇಕು ಮತ್ತು ಸದನ ಸಮಿತಿಯನ್ನು ನೇಮಿಸಬೇಕು. ದುಃಖಿತ ಪೋಷಕರಿಗೆ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ್ 'ಎಕ್ಸ್' ಖಾತೆಯಲ್ಲಿ ಜನರಿಗೆ ಆಹ್ವಾನ ನೀಡಿ ಪೋಸ್ಟ್ ಮಾಡಿದ್ದರು. ಆದರೆ, ಡಿಪಿಎಆರ್ ಕಾರ್ಯದರ್ಶಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ನಡೆಸದಂತೆ ಸಲಹೆ ನೀಡಿದ್ದರು.. ಆರ್‌ಸಿಬಿ ಮತ್ತು ಕೆಎಸ್‌ಸಿಎ ತಮ್ಮ ಅಫಿಡವಿಟ್‌ನಲ್ಲಿ ಸರ್ಕಾರ ತಮ್ಮನ್ನು ಆಹ್ವಾನಿಸಿದೆ ಎಂದು ಹೇಳಿವೆ. ನನ್ನ ಬಳಿ ಕಾರ್ಯಕ್ರಮದ ವೇಳಾಪಟ್ಟಿ ಮತ್ತು ವೈರ್‌ಲೆಸ್ ಲಾಗ್ ಪುಸ್ತಕವಿದೆ... ಇದು ಸರ್ಕಾರಿ ಕಾರ್ಯಕ್ರಮ ಎಂದು ಮತ್ತು ದುರಂತಕ್ಕೆ ಯಾರು ಹೊಣೆ ಎಂದು ಚಿಕ್ಕ ಮಗುವಿಗೂ ಕೂಡ ಅರ್ಥವಾಗುತ್ತದೆ.

ಕಾಲ್ತುಳಿತದಲ್ಲಿ ಸಂಭವಿಸಿ ಸಾವುನೋವುಗಳಾಗಿ, ಜನರು ಗಾಯಗೊಳ್ಳುತ್ತಿದ್ದರೂ ಅದನ್ನು ಲೆಕ್ಕಿಸದೆ ಸರ್ಕಾರ ಸಂಭ್ರಮಾಚರಣೆಯನ್ನು ಮುಂದುವರೆಸಿತ್ತು ಎಂದ ಅವರು, ಸಿಎಂ, ಡಿಸಿಎಂ ಮತ್ತು ಗೃಹ ಸಚಿವರನ್ನು ತರಾಟೆಗೆ ತೆಗೆದುಕೊಂಡರು.

ಶಿವಕುಮಾರ್ ನಿಮಿಷ ನಿಮಿಷಕ್ಕೆ ಮಾಹಿತಿ ಪಡೆಯುತ್ತಿದ್ದರು. ಮಾಹಿತಿ ತಿಳಿದ ಬಳಿಕವಾದರೂ ಕಾರ್ಯಕ್ರಮವನ್ನು ನಿಲ್ಲಿಸಬಹುದಿತ್ತು. ಇದು ಸರ್ಕಾರಿ ಕಾರ್ಯಕ್ರಮವಲ್ಲದಿದ್ದರೆ, ಅಭಿಮಾನಿಗಳಿಗೆ ಕ್ರೀಡಾಂಗಣಕ್ಕೆ ಬರಲೇಕೆ ಹೇಳಿದರು? ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ನಿವಾಸ ಕಾವೇರಿಯಲ್ಲಿ ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಮತ್ತು ಗೋವಿಂದರಾಜು ಅವರೊಂದಿಗೆ ನಡೆದ ಸಭೆಯಲ್ಲಿ, ಸಿದ್ದರಾಮಯ್ಯ ಅವರು ವಿಜಯೋತ್ಸವ ಮೆರವಣಿಗೆ ನಡೆಸದಂತೆ. ಉಳಿದ ಕಾರ್ಯಕ್ರಮವನ್ನು ನಡೆಸುವಂತೆ ಸೂಚಿಸಿದ್ದರು. ಅದೇ ಸಮಯದಲ್ಲಿ, ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಕಾರ್ಯಕ್ರಮಕ್ಕೆ ರಾಜ್ಯಪಾಲರನ್ನು ದೂರವಾಣಿ ಮೂಲಕ ಆಹ್ವಾನಿಸಿದರು. ದುರಂತದ ನಂತರ ಮಾತನಾಡಲು ಅವರಿಗೆ ಮುಖವಿರಲಿಲ್ಲ. ನಂತರ ರಾಜ್ಯಪಾಲರನ್ನು ಆಹ್ವಾನಿಸಿಲ್ಲ ಎಂದು ಹೇಳಿದರು ಎಂದು ಲೇವಡಿ ಮಾಡಿದರು.

"ಚಿನ್ನಸ್ವಾಮಿ ಕ್ರೀಡಾಂಗಣದ ಹದಿನೇಳು ದ್ವಾರಗಳ ಪೇಕಿ ಒಂದು ಗೇಟ್ ಆದರೂ ಅಭಿಮಾನಿಗಳಿಗೆ ತೆರೆದಿದ್ದರೆ ದುರಂತವನ್ನು ತಪ್ಪಿಸಬಹುದಿತ್ತು. ಲಾಠಿಚಾರ್ಜ್‌ಗೆ ಯಾರು ಅನುಮತಿ ನೀಡಿದರು ಎಂದು ಪರಮೇಶ್ವರ್ ಅವರ ವಿರುದ್ಧ ಕಿಡಿಕಾರಿದರು.

ಆರ್'ಸಿಬಿ ಸಂಭ್ರಮಾಚರಣೆ ಮೂಲಕ ಸಿಎಂ ಹಾಗೂ ಡಿಸಿಎಂ ಕ್ರೆಡಿಟ್ ವಾರ್ ನಲ್ಲಿ ತೊಡಗಿದ್ದರು. ಡಿಸಿಎಂ ಆಗಿ ಶಿವಕುಮಾರ್ ಅವರ ವರ್ತನೆ ಅನುಚಿತವಾಗಿತ್ತು. ವಿಮಾನ ನಿಲ್ದಾಣಕ್ಕೂ ಹೋಗಿ ಆರ್‌ಸಿಬಿ ಆಟಗಾರರನ್ನು ಬರಮಾಡಿಕೊಂಡಿದ್ದರು.

"ನ್ಯಾಯಮೂರ್ತಿ ಡಿ'ಕುನ್ಹಾ ಆಯೋಗದ ಪ್ರಕಾರ, 515 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ತಿಳಿಸಿದೆ. ಆದರೆ, ರಿಜಿಸ್ಟರ್‌ಗೆ ಸಹಿ ಹಾಕಿರುವುದು ಕೇವಲ 194 ಮಂದಿ ಮಾತ್ರಯ ಅಧಿಕಾರಿಗಳು ಸಾವುಗಳನ್ನು ಸಚಿವರ ಗಮನಕ್ಕೆ ತಂದಾಗಲೂ ಕಾರ್ಯಕ್ರಮ ನಿಲ್ಲಲಿಲ್ಲ. ಡಿಸಿಎಂ ಕಪ್‌ಗೆ ಮುತ್ತಿಕ್ಕಿ, ಅದನ್ನು ಎತ್ತಿ ಪ್ರದರ್ಶಿಸುವ ಅಗತ್ಯವಿತ್ತೇ?" ಎಂದು ಪ್ರಶ್ನಿಸಿದರು.

ಆರ್‌ಸಿಬಿ ಭಾರತ ತಂಡವೂ ಅಲ್ಲ, ರಾಜ್ಯ ತಂಡವೂ ಅಲ್ಲ. ಬೆಂಗಳೂರು ಹೊರತುಪಡಿಸಿದರೆ ಆರ್‌ಸಿಬಿಯನ್ನು ಯಾರೂ ಗುರುತಿಸುವುದಿಲ್ಲ ಎಂದು ಹೇಳುವ ಮೂಲಕ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರು ಸರ್ಕಾರದಿಂದ ಬೇಷರತ್ ಕ್ಷಮೆಯಾಚನೆಗೆ ಆಗ್ರಹಿಸಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Israel -Gaza Conflict: ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್‌ ಒಪ್ಪಿಗೆ; ಶಾಂತಿ ಒಪ್ಪಂದದಲ್ಲಿ ಮಹತ್ವದ ಬೆಳವಣಿಗೆ, ಟ್ರಂಪ್ ನಡೆಗೆ ಪ್ರಧಾನಿ ಮೋದಿ ಸ್ವಾಗತ

'Greater Bengaluru Authority' ವ್ಯಾಪ್ತಿಯಲ್ಲಿ ಇಂದಿನಿಂದ ಜಾತಿಗಣತಿ: 17 ಸಾವಿರ ಸಿಬ್ಬಂದಿಗಳ ನಿಯೋಜನೆ, ಅನಾವಶ್ಯಕ ಗೈರಾದವರಿಗೆ ಕಠಿಣ ಕ್ರಮದ ಎಚ್ಚರಿಕೆ..!

ದಸರಾ ಪರೇಡ್​ನಲ್ಲಿ ಸಿಎಂ ಜತೆ ಸಚಿವ ಮಹದೇವಪ್ಪ ಮೊಮ್ಮಗನ ದರ್ಬಾರ್: ವಿವರಣೆ ಕೋರಿದ ಕಾಂಗ್ರೆಸ್ ಹೈ ಕಮಾಂಡ್!

ಬಿಹಾರ ಚುನಾವಣೆಗೋಸ್ಕರ GST ಸರಳೀಕರಣ: ಕೇಂದ್ರದ ನಿರ್ಧಾರದಿಂದ ರಾಜ್ಯಕ್ಕೆ 15,000 ಕೋಟಿ ರೂ. ನಷ್ಟ; ಸಿಎಂ ಸಿದ್ದರಾಮಯ್ಯ

ಬರವಣಿಗೆ ಮೂಲಕ ಸಂಪಾದಕೀಯದ ಘನತೆಯನ್ನು ಮತ್ತೊಂದು ಮಜಲಿಗೆ ಕೊಂಡೊಯ್ದವರು ಜಾರ್ಜ್: ಡಿ.ಕೆ. ಶಿವಕುಮಾರ್

SCROLL FOR NEXT