ವಿ.ಸೋಮಣ್ಣ 
ರಾಜಕೀಯ

ನಾನು ಪ್ರಚಾರ ಮಾಡಿದ ಕ್ಷೇತ್ರದಲ್ಲಿ ಹಿಂದ್ಯಾವತ್ತೂ ಬಿಜೆಪಿ ಗೆದ್ದಿರಲಿಲ್ಲ, ಈ ಬಾರಿ ಗೆಲುವು ಖುಷಿ ತಂದಿದೆ: ಸೋಮಣ್ಣ

ಹಳೆಯ ದೆಹಲಿಯ ಭಾಗವಾಗಿರುವ ಅಲ್ಲಿ ಬೆಂಗಳೂರಿನ ಹಾಗೆಯೇ ನಾನು ಪ್ರಚಾರ ಮಾಡಿದ್ದೆ. ಹಿಂದೆ ಯಾವತ್ತೂ ಗೆದ್ದಿರದ ನಾಗ್ಲೋಯಿ ಜಾಟ್ ಕ್ಷೇತ್ರದಲ್ಲಿ ಬಿಜೆಪಿಯ ಮನೋಜ್ ಕುಮಾರ್ ಶೋಕೀನ್ 26,000 ಮತಗಳ ಅಂತರದಿಂದ ಗೆದ್ದಿದ್ದಾರೆ.

ತುಮಕೂರು: ದೆಹಲಿಯಲ್ಲಿ ಬಿಜೆಪಿ ಗೆದ್ದಿರುವುದಕ್ಕೇ ಕೇಂದ್ರ ಸಚಿವ ವಿ ಸೋಮಣ್ಣ ಸಂತಸ ವ್ಯಕ್ತಪಡಿಸಿದ್ದಾರೆ. ದೆಹಲಿಯ ನಾಗಲೋಯಿ ಜಾಟ್ ಕ್ಷೇತ್ರದಲ್ಲಿ ಗೆದ್ದಿದ್ದೇವೆ, ನನಗೆ ಆ ಕ್ಷೇತ್ರ ಉಸ್ತುವಾರಿ ಕೊಟ್ಟಿದ್ದರು. ಅಲ್ಲಿ ಜೀವನದಲ್ಲಿ ಗೆದ್ದಿರಲಿಲ್ಲ ಈಗ ಅಲ್ಲಿ ಗೆದ್ವಿ ಎಂದು ಸಂತಸ ಹಂಚಿಕೊಂಡರು.

ದೆಹಲಿಯಲ್ಲಿ ನಾನು ಪ್ರಚಾರಕ್ಕೆಂದು ತೆರಳಿದ ನಾಗ್ಲೋಯಿ ಜಾಟ್ ಕ್ಷೇತ್ರವು ಬೆಂಗಳೂರಿನ ಪಾದರಾಯಣಪುರ ಮತ್ತು ಶಿವಾಜಿನಗರಕ್ಕಿಂತ ಕಡೆಯಾಗಿದೆ. ಹಳೆಯ ದೆಹಲಿಯ ಭಾಗವಾಗಿರುವ ಅಲ್ಲಿ ಬೆಂಗಳೂರಿನ ಹಾಗೆಯೇ ನಾನು ಪ್ರಚಾರ ಮಾಡಿದ್ದೆ. ಹಿಂದೆ ಯಾವತ್ತೂ ಗೆದ್ದಿರದ ನಾಗ್ಲೋಯಿ ಜಾಟ್ ಕ್ಷೇತ್ರದಲ್ಲಿ ಬಿಜೆಪಿಯ ಮನೋಜ್ ಕುಮಾರ್ ಶೋಕೀನ್ 26,000 ಮತಗಳ ಅಂತರದಿಂದ ಗೆದ್ದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಚಿಂತನೆಯೇ ದೆಹಲಿಯಲ್ಲಿ ಬಿಜೆಪಿ ಗೆಲುವಿಗೆ ಕಾರಣವೆಂದು ಸೋಮಣ್ಣ ಹೇಳಿದ್ದಾರೆ.

ಇನ್ನೂ ಮೂರು ವರ್ಷಗಳಲ್ಲಿ ದೆಹಲಿ‌ ಅಭಿವೃದ್ಧಿ ಆಗಲಿದೆ. ಮೋದಿಯವರು ಅಭಿವೃದ್ಧಿ ಮಾಡಲಿದ್ದಾರೆ. ಅಣ್ಣ ಹಜಾರೆ ಹೆಸರಿನಲ್ಲಿ‌ ಹೋದ ಕ್ರೇಜಿವಾಲ್ ಅವರ ಬಗ್ಗೆ ಜನರಿಗೆ ಅರ್ಥವಾಗಿದೆ. ದೇಶದ ರಾಜಧಾನಿ ಮೇಲ್ಪಂಕ್ತಿಯಲ್ಲಿ‌ ಇರಬೇಕೆಂದು ತೋರಿಸಿದ್ದಾರೆ. ಅದಕ್ಕೆ ಧನ್ಯವಾದಗಳು ಎಂದು ಹೇಳಿದರು.

ಕುಂಭಮೇಳ ಐತಿಹಾಸಿಕ ‌ಕಾರ್ಯಕ್ರಮ. ಸೋಮಣ್ಣ ಒಬ್ಬನೇ ಹೋಗಿ ರೈಲಿನಲ್ಲಿ ನೋಡಿದೆ. ಯಾರಿಗೂ ಕಾಯಿಲೆ ಇಲ್ಲ, ಏನಿಲ್ಲ. ಲಕ್ಷಾಂತರ ಜನರು ಔಟ್ ಪೆಷೆಂಟ್ ಆಗಿ ಬಂದರು, 450 ಜನರು‌ ಮಾತ್ರ ದಾಖಲಾಗಿದ್ದರು. ಕಾಂಗ್ರೆಸ್ ನವರು ಕೂಡ ಹೋಗಿ ಕುಂಭಮೇಳದಲ್ಲಿ‌ ಮಿಂದು ಬರ್ತಿದ್ದಾರೆ. ಭಗವಂತ ಮೋದಿ, ಯೋಗಿಯವರ ಜೊತೆ ಇದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!