ಜಮೀರ್ ಅಹ್ಮದ್ ಖಾನ್ 
ರಾಜಕೀಯ

ನವೆಂಬರ್ ಕ್ರಾಂತಿ ಬಿಜೆಪಿಯ ಊಹೆಯಷ್ಟೆ; ಡಿ.ಕೆ ಶಿವಕುಮಾರ್ ದೇಹದಲ್ಲಿ ಹರಿಯುತ್ತಿರುವುದು ಕಾಂಗ್ರೆಸ್ ರಕ್ತ: ಜಮೀರ್ ಅಹ್ಮದ್ ಖಾನ್

ನವೆಂಬರ್ ಕ್ರಾಂತಿ ಏನು ಇಲ್ಲ ಎಲ್ಲವೂ ಬಿಜೆಪಿ ಊಹೆ. ಬಿಜೆಪಿ ಐದು ಗುಂಪುಗಳಿವೆ ನೋಡಿಕೊಳ್ಳಲಿ. ಕರ್ನಾಟಕದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲಸಂಪುಟ ಪುನಾರಚನೆ ಚಿಂತನೆ ಇದೆ. ಅದನ್ನ ವರಿಷ್ಠರು ತೀರ್ಮಾನಿಸುತ್ತಾರೆ ಎಂದರು.

ಚಿತ್ರದುರ್ಗ: 2028ರವರೆಗೂ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ. ನವೆಂಬರ್ ಕ್ರಾಂತಿ ಬಿಜೆಪಿಯ ಊಹೆಯಷ್ಟೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ಚಿತ್ರದುರ್ಗದಲ್ಲಿ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್, ನವೆಂಬರ್ ಕ್ರಾಂತಿ ಏನು ಇಲ್ಲ ಎಲ್ಲವೂ ಬಿಜೆಪಿ ಊಹೆ. ಬಿಜೆಪಿ ಐದು ಗುಂಪುಗಳಿವೆ ನೋಡಿಕೊಳ್ಳಲಿ. ಕರ್ನಾಟಕದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ ಸಂಪುಟ ಪುನಾರಚನೆ ಚಿಂತನೆ ಇದೆ. ಅದನ್ನ ವರಿಷ್ಠರು ತೀರ್ಮಾನಿಸುತ್ತಾರೆ ಎಂದರು.

ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವಿನ ಸ್ಪರ್ಧೆಯ ಬಗ್ಗೆ ಮಾತನಾಡುತ್ತಾ, ಜಮೀರ್ ಇಬ್ಬರೂ ಉತ್ತಮ ಸಂಬಂಧದಲ್ಲಿದ್ದಾರೆ, ಅವರ ನಡುವೆ ಯಾವುದೇ ಭಿನ್ನಾಬಿಪ್ರಾಯಗಳಿಲ್ಲ ಎಂದು ಹೇಳಿದರು. "ಸಿದ್ದರಾಮಯ್ಯ ಮತ್ತು ಶಿವಕುಮಾರ್ ಸಹೋದರರಂತೆ" ಎಂದು ಅವರು ಹೇಳಿದರು.

ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲು ಅವಕಾಶ ಸಿಗದಿದ್ದರೆ ಬಿಜೆಪಿ ಸೇರುತ್ತಾರೆ ಎಂಬ ವದಂತಿ ಬಗ್ಗೆ ಪ್ರತಿಕ್ರಿಯಿಸಿದ ಜಮೀರ್, "ನಾನು ಬೇರೆ ಪಕ್ಷದಿಂದ ಬಂದಿದ್ದೇನೆ, ಆದರೆ ಶಿವಕುಮಾರ್ ಅವರ ದೇಹದಲ್ಲಿ ಹರಿಯುತ್ತಿರುವುದು ಕಾಂಗ್ರೆಸ್ ರಕ್ತ. ಅವರು ಬಿಜೆಪಿ ಸೇರುವುದಿಲ್ಲ" ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಾಯಕತ್ವ ಬದಲಾವಣೆ ಬಗ್ಗೆ ನಾನು, ಸಿಎಂ ಹೇಳಿದರಷ್ಟೇ ಬೆಲೆ: ಡಿಕೆ.ಶಿವಕುಮಾರ್

MES ಮುಖಂಡನ ಜೊತೆ ಸೆಲ್ಫಿ; ಪೊಲೀಸ್‌ ಇನ್‌ಸ್ಪೆಕ್ಟರ್‌ ವಿರುದ್ಧ ಶೀಘ್ರದಲ್ಲೇ ಕ್ರಮ ಎಂದ ಗೃಹ ಸಚಿವ

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊ? ಡಿಕೆಶಿಯೋ?: HDK ಪ್ರಶ್ನೆ

ವಿವಿಧ ಕ್ಷೇತ್ರಗಳ ಸಾಧಕರಿಗೆ 'ರಾಜ್ಯೋತ್ಸವ ಪ್ರಶಸ್ತಿ' ಪ್ರದಾನ; ಕನ್ನಡ ಪರ ಹೋರಾಟಗಾರರ ಮೇಲಿನ ಪ್ರಕರಣ ವಾಪಸ್!

ಬೆಳಗಾವಿ: ರಾಜ್ಯೋತ್ಸವ ಮೆರವಣಿಗೆ ವೇಳೆ ಐವರಿಗೆ ಚಾಕು ಇರಿತ; ಇಬ್ಬರ ಸ್ಥಿತಿ ಗಂಭೀರ!

SCROLL FOR NEXT