ಬಿಜೆಪಿ ಟ್ವೀಟ್ 
ರಾಜಕೀಯ

ಸೌದಿ ಅರೇಬಿಯಾದಿಂದ ಜಮೀರ್ ಸಾಮಾಜಿಕ ಜಾಲತಾಣ ಖಾತೆಗಳ ನಿರ್ವಹಣೆ: ಸಚಿವಾಲಯ ನಿಯಂತ್ರಿಸುವುದು ಯಾರು? ಟರ್ಕಿಯೋ, ಪ್ಯಾಲೇಸ್ತೀನೋ..?

ಜಮೀರ್‌ ನಿರ್ವಹಿಸುವ ಸಚಿವಾಲಯವನ್ನು ನಿಯಂತ್ರಿಸುವುದು ಟರ್ಕಿಯೋ, ಪ್ಯಾಲೇಸ್ತೀನೋ? ಜಮೀರ್‌ ಅವರೇ, ಕರ್ನಾಟಕದ ನಿಮ್ಮದೇ 'ಬಾಂಧವʼರ ಮೇಲೆ ನಿಮಗೆ ನಂಬಿಕೆ ಇಲ್ಲವೇ?

ಬೆಂಗಳೂರು: ಜಮೀರ್‌ ಅವರ ಸಾಮಾಜಿಕ ಜಾಲತಾಣಗಳು ಸೌದಿಯಿಂದ ನಿರ್ವಹಣೆಯಾಗುತ್ತಿರುವುದು ಲೋಕಸತ್ಯ, ಜಮೀರ್‌ ನಿರ್ವಹಿಸುವ ಸಚಿವಾಲಯವನ್ನು ನಿಯಂತ್ರಿಸುವುದು ಟರ್ಕಿಯೋ, ಪ್ಯಾಲೇಸ್ತೀನೋ? ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ರಾಜ್ಯ ಸರ್ಕಾರದಲ್ಲಿ ಪ್ರಭಾವಿ ಎನಿಸಿಕೊಂಡಿರುವ ಮತ್ತು ಸದಾ ಕಾಲವೂ ಬರೀ ಮುಸಲ್ಮಾನರನ್ನು ಜಪಿಸುವ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಸಾಮಾಜಿಕ ಜಾಲತಾಣ ಖಾತೆಗಳು ಸೌದಿ ಅರೇಬಿಯಾದಿಂದ ನಿರ್ವಹಣೆಯಾಗುತ್ತಿದೆ ಎಂದು ಆರೋಪಿಸಿದೆ.

ಜಮೀರ್ ಅಹ್ಮದ್ ಖಾನ್ ಅವರ ಸಾಮಾಜಿಕ ಜಾಲತಾಣ ಖಾತೆಗಳು ಸೌದಿ ಅರೇಬಿಯಾದಿಂದ ನಿರ್ವಹಣೆಯಾಗುತ್ತಿದೆ. ಈ ಮೂಲಕ ಸಿದ್ದರಾಮಯ್ಯ ಸರ್ಕಾರದ ಸಚಿವರೊಬ್ಬರು ತಮ್ಮ ಇಲಾಖೆಯ ಖಚಿತ ಮತ್ತು ಅಧಿಕೃತ ಮಾಹಿತಿಗಳನ್ನು ಅನ್ಯ ರಾಷ್ಟ್ರಕ್ಕೆ ರವಾನಿಸುತ್ತಿರುವುದು ಸ್ಪಷ್ಟವಾಗುತ್ತಿದೆ.

ಜಮೀರ್‌ ಅವರ ಸಾಮಾಜಿಕ ಜಾಲತಾಣಗಳು ಸೌದಿಯಿಂದ ನಿರ್ವಹಣೆಯಾಗುತ್ತಿರುವುದು ಲೋಕಸತ್ಯ, ಜಮೀರ್‌ ನಿರ್ವಹಿಸುವ ಸಚಿವಾಲಯವನ್ನು ನಿಯಂತ್ರಿಸುವುದು ಟರ್ಕಿಯೋ, ಪ್ಯಾಲೇಸ್ತೀನೋ? ಜಮೀರ್‌ ಅವರೇ, ಕರ್ನಾಟಕದ ನಿಮ್ಮದೇ 'ಬಾಂಧವʼರ ಮೇಲೆ ನಿಮಗೆ ನಂಬಿಕೆ ಇಲ್ಲವೇ? ಎಂದು ಪ್ರಶ್ನಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!