ಡಿ.ಕೆ ಶಿವಕುಮಾರ್ 
ರಾಜಕೀಯ

ಅವರು ದೊಡ್ಡ ವ್ಯಕ್ತಿ ಇರಬಹುದು, ನನಗೂ ಸಣ್ಣ ಅನುಭವವಿದೆ: ವಾರ್ಡ್ ಮರುವಿಂಗಡಣೆ ಕುರಿತ ಚರ್ಚೆ ಬಗ್ಗೆ ಕುಮಾರಸ್ವಾಮಿಗೆ ಅರಿವಿಲ್ಲ; ಡಿಕೆಶಿ

ಬೆಂಗಳೂರು ವಾರ್ಡ್ ಗಳ ಮರುವಿಂಗಡಣೆ ವೇಳೆ ಎಲ್ಲಾ ಪಕ್ಷದ ಶಾಸಕರನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. ಬೆಂಗಳೂರು ವಾರ್ಡ್ ಗಳ ಮರುವಿಂಗಡಣೆ ವೇಳೆ ಎಲ್ಲಾ ಪಕ್ಷದ ಶಾಸಕರನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು.

ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನುಗುಣವಾಗಿ ವಿರೋಧ ಪಕ್ಷದ ಶಾಸಕರು, ಸಾರ್ವಜನಿಕರನ್ನು ವಿಶ್ವಾಸಕ್ಕೆ ಪಡೆದು ಜಿಬಿಎ ಪಾಲಿಕೆಗಳು ಹಾಗೂ ವಾರ್ಡ್ ಗಳ ಮರುವಿಂಗಡಣೆ ಮಾಡಲಾಗಿದೆ. ಆದರೆ ಈ ಬಗ್ಗೆ ಕುಮಾರಸ್ವಾಮಿ ಅವರಿಗೆ ಅರಿವಿಲ್ಲ. ಬೇಕಿದ್ದರೇ ಅವರ ಶಾಸಕರನ್ನೇ ಕೇಳಿ ತಿಳಿದುಕೊಳ್ಳಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.

ಕೇಂದ್ರ ಸರ್ಕಾರದ ಲೋಕಸಭಾ ಕ್ಷೇತ್ರ ಮರುವಿಂಗಡಣೆ ವಿಧೇಯಕ ಸಮರ್ಥಿಸಿಕೊಳ್ಳುವ ಭರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಬೆಂಗಳೂರು ಪಾಲಿಕೆಗಳ ವಾರ್ಡ್ ಮರುವಿಂಗಡಣೆ ಬಗ್ಗೆ ಯಾರೊಂದಿಗೂ ಚರ್ಚೆ ನಡೆಸಿಲ್ಲ ಎಂದು ಮಾಡಿರುವ ಆರೋಪದ ಬಗ್ಗೆ ಕೇಳಿದಾಗ, “ಬೆಂಗಳೂರು ವಾರ್ಡ್ ಗಳ ಮರುವಿಂಗಡಣೆ ವೇಳೆ ಎಲ್ಲಾ ಪಕ್ಷದ ಶಾಸಕರನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು.

ಅವರ ಪಕ್ಷದ ಶಾಸಕರು ಸಮಿತಿಯ ಭಾಗವಾಗಿದ್ದರು. ಜೆಡಿಎಸ್ ಹಾಗೂ ಬಿಜೆಪಿ ಶಾಸಕರ ಜತೆ ಚರ್ಚೆ ಮಾಡಿ, ಅವರೆಲ್ಲರ ಅಭಿಪ್ರಾಯ ಪಡೆದ ನಂತರವೇ ಅಂತಿಮ ತೀರ್ಮಾನ ಮಾಡಲಾಗಿದೆ” ಎಂದರು.

“ಕುಮಾರಸ್ವಾಮಿ ಅವರು ದೊಡ್ಡ ವ್ಯಕ್ತಿ ಇರಬಹುದು. ನನಗೂ ಸಣ್ಣ ಅನುಭವವಿದೆ. ಈ ಅನುಭವದ ಮೇಲೆ ಹೇಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ಶಾಸಕರು, ನಾಯಕರನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬುದು ನನಗೂ ಗೊತ್ತಿದೆ. ನಾನು ಅವರ ಶಾಸಕರ ಜತೆ ಎಷ್ಟು ಗಂಟೆಗಳ ಕಾಲ ಚರ್ಚೆ ಮಾಡಿದ್ದೇನೆ, ಎಷ್ಟು ಗಂಟೆಗಳ ಕಾಲ ಸಾರ್ವಜನಿಕರೊಂದಿಗೆ ಸಂವಾದ ಮಾಡಲಾಗಿದೆ ಎಂದು ಕುಮಾರಸ್ವಾಮಿ ಅವರು ತಿಳಿದುಕೊಂಡು ಮಾತನಾಡುವುದು ಸೂಕ್ತ” ಎಂದು ಛೇಡಿಸಿದರು.

ನಾವು ಪಾಲಿಕೆ ಚುನಾವಣೆಗೆ ಸಿದ್ಧವಿರುವುದಾಗಿ ತಿಳಿಸಿದ್ದೇವೆ. ಉಳಿದಂತೆ ಆ ಪ್ರಕ್ರಿಯೆ ನಡೆಸಲು ರಾಜ್ಯ ಚುನಾವಣಾ ಆಯೋಗವಿದೆ, ನ್ಯಾಯಾಲಯವಿದೆ ಎಂದು ತಿಳಿಸಿದರು.

ಮುಸಲ್ಮಾನರ ಬಗ್ಗೆ ಹಗೆ ಸುಳ್ಳು ಆರೋಪ

ಅದೆಲ್ಲ ಸುಳ್ಳು. ಯಾರೂ ಹಗೆ ಸಾಧಿಸುತ್ತಿಲ್ಲ. ಪಕ್ಷವು ಶಿಸ್ತು ಪಾಲನೆಗೆ ಆದ್ಯತೆ ನೀಡುತ್ತಿದೆ. ಎಲ್ಲರೂ ಶಿಸ್ತು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಬೇಸಿಗೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ನೀರಿನ ಸಮಸ್ಯೆ ನಿರ್ವಹಣೆ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಈಗಾಗಲೇ ಬಿಡಬ್ಲ್ಯೂಎಸ್ಎಸ್ ಬಿ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಅಂತರ್ಜಲ ಹೆಚ್ಚಳದ ಬಗ್ಗೆ ಮಾತನಾಡಿದ್ದು, ಏನೇ ಸಮಸ್ಯೆ ಬಂದರೂ ನಾವು ಅದನ್ನು ಸಮರ್ಥವಾಗಿ ನಿಭಾಯಿಸುತ್ತೇವೆ” ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಮ್ಮ ಯಾವುದೇ ನಿಯೋಗ ಪಾಕ್‌ಗೆ ಭೇಟಿ ನೀಡಿಲ್ಲ': ಇಸ್ಲಾಮಾಬಾದ್‌ಗೆ ತೆರಳಲು ಸಿದ್ಧವಾದ ಟ್ರಂಪ್‌ಗೆ ಇರಾನ್‌ ಶಾಕ್!

ಬಗೆಹರಿಯದ ಪಶ್ಚಿಮ ಏಷ್ಯಾ ಸಂಘರ್ಷ: ಇರಾನ್ ಜೊತೆಗಿನ ಶಾಂತಿ ಮಾತುಕತೆಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನಕ್ಕೆ ಪ್ರಯಾಣ?

ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಮೀಸಲಾತಿಗಾಗಿ ಸಂಸತ್ತಿನಲ್ಲಿ ಖಾಸಗಿ ಮಸೂದೆ ಮಂಡಿಸಲಿದೆ ಎಸ್‌ಪಿ!

ದೆಹಲಿಯಲ್ಲಿ ಗ್ರೆನೇಡ್ ದಾಳಿಗೆ ಸಂಚು: ಇಬ್ಬರು ISI ಕಾರ್ಯಕರ್ತರ ಬಂಧನ

ಎಂಜಿಆರ್, ಶಿವಾಜಿ ಗಣೇಶನ್ ತೊಡೆ ಮೇಲೆ ಕೂತು ಬೆಳೆದವನು ನಾನು, ಆದರೂ....: ನಟ ವಿಜಯ್‌ಗೆ ತಿರುಗೇಟು ನೀಡಿದ ಕಮಲ್ ಹಾಸನ್!

SCROLL FOR NEXT