ಪ್ರೀತಂ ಗೌಡ 
ರಾಜಕೀಯ

'ಓಡೋರು ಓಡಲಿ, ಸುಸ್ತಾಗಿ ನೀರು ಕುಡಿಯೋಕೆ ಕೂರ್ತಾರೆ; ನಾನು ರೇಸ್ ನಿಧಾನವಾಗಿ ಓಡ್ತೀನಿ; ಹಾಸನ ಕ್ಷೇತ್ರಕ್ಕೆ ಮುಂದಿನ ಕ್ಯಾಂಡಿಡೇಟ್ ನಾನೇ'

ಹೆಚ್‌ಡಿಕೆ ಮುಂದಿನ ಸಿಎಂ ಆಗ್ತಾರೆ ಎಂದು ಜೆಡಿಎಸ್ ನಾಯಕರು ತಮ್ಮ ಮನಸ್ಸಿನ ಮಾತನ್ನು ಹೇಳಿಕೊಂಡಿದ್ದಾರೆ. ನಮ್ಮ ಸಿದ್ಧಾಂತದ ಪ್ರಕಾರ ನಾವು ಕೆಲಸ ಮಾಡುತ್ತೇವೆ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿರುವ ಮತದಾರರು ನಮ್ಮೊಂದಿಗಿರುತ್ತಾರೆ.

ಹಾಸನ: ನನ್ನ ಮನಸ್ಸಿನ ಇಚ್ಚೆ ನಾನು ಸಾರ್ವಜನಿಕವಾಗಿ ಹೇಳಿದ್ರೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಗೌರವ ತರಲ್ಲ. ನಾನು ಗೌರವವನ್ನು ಕಾಪಾಡಿಕೊಂಡು, ರಾಜಕಾರಣವನ್ನು ಮಾಡುವಂತ ಅನಿವಾರ್ಯತೆ ಇದೆ. ಹಾಗಾಗಿ ನಾನು ತಾಳ್ಮೆಯಿಂದ ಇದ್ದೀನಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಹೇಳಿದ್ದಾರೆ.

ಬಿಜೆಪಿ ಜೊತೆ ಮೈತ್ರಿ ಅಷ್ಟೇ, ಸಿದ್ದಾಂತದಲ್ಲಿ ರಾಜೀ ಇಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರೀತಂ ಗೌಡ, ನಿಖಿಲ್ ಯುವಕರಾಗಿದ್ದು. ಅವರು ಅವರ ಪಕ್ಷ ಸಿದ್ದಾಂತದ ಬಗ್ಗೆ ಮಾತಾಡಿದ್ದಾರೆ. ಅವರಿಗೆ ಆಲ್ ದಿ ಬೆಸ್ಟ್ ಒಳ್ಳೆಯದಾಗಲಿ ಎಂದು ಟಾಂಗ್ ನೀಡಿದರು. ನಿಖಿಲ್ ಕುಮಾರಸ್ವಾಮಿ ಹೇಳಿರೋದು ಸರಿ ಇದೆ, ಅವರಿಗೆ ಆಲ್ ದಿ ಬೆಸ್ಟ್ ಹೇಳುತ್ತೇನೆ ಎಂದು ಟಾಂಗ್ ನೀಡಿದರು.

ಹೆಚ್‌ಡಿಕೆ ಮುಂದಿನ ಸಿಎಂ ಆಗ್ತಾರೆ ಎಂದು ಜೆಡಿಎಸ್ ನಾಯಕರು ತಮ್ಮ ಮನಸ್ಸಿನ ಮಾತನ್ನು ಹೇಳಿಕೊಂಡಿದ್ದಾರೆ. ನಮ್ಮ ಸಿದ್ಧಾಂತದ ಪ್ರಕಾರ ನಾವು ಕೆಲಸ ಮಾಡುತ್ತೇವೆ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿರುವ ಮತದಾರರು ನಮ್ಮೊಂದಿಗಿರುತ್ತಾರೆ ಎಂದರು.

ಎನ್‌ಡಿಎ ನೇತೃತ್ವದಲ್ಲಿ ಸಿಎಂ ಆಗ್ತಾರೆ, ಆದರೆ ಯಾರು ಸಿಎಂ ಆಗ್ತಾರೆ ಅನ್ನೋದು ಆವತ್ತಿನ ದಿನದಲ್ಲಿ ತೀರ್ಮಾನ ಆಗುತ್ತದೆ. ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಆದ ಹಾಗೇ, ಬಿಹಾರದಲ್ಲಿ ಸಾಮ್ರಾಟ ಚೌಧರಿ ಆದ ರೀತಿಯಲ್ಲಿಯೇ ಕರ್ನಾಟಕದಲ್ಲೂ ಒಬ್ಬರು ಮುಖ್ಯಮಂತ್ರಿಯಾಗ್ತಾರೆ.ಕಾದು ನೋಡೋಣ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

IIT Bombay ವಿದ್ಯಾರ್ಥಿ ನಕಲು ಮಾಡಿದ್ದನ್ನು ತಡೆದಿದ್ದೇ ತಪ್ಪಾ? ಪ್ರೊಫೆಸರ್ ವಿರುದ್ಧ ಪ್ರತಿಭಟನೆ; ಯಾರು ಈ ಪ್ರೊ. Suryanarayana Doolla?

Bihar horror: ಕೋಚಿಂಗ್‌ ಸೆಂಟರ್`ನಿಂದ ಮರಳುತ್ತಿದ್ದ ಅಪ್ರಾಪ್ತ ಜೋಡಿ ಅಡ್ಡಗಟ್ಟಿದ ಗುಂಪು, ಲೈಂಗಿಕ ಕಿರುಕುಳ

ಧರ್ಮಸ್ಥಳ ಸೌಜನ್ಯಾ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ..!

TMC ಹೆಸರು-ಚಿಹ್ನೆ ಫ್ರೀಜ್; ಚುನಾವಣಾ ಆಯೋಗದ ನಿರ್ಧಾರಕ್ಕೆ ಮಮತಾ ಬ್ಯಾನರ್ಜಿ ಆಕ್ಷೇಪ, ತುರ್ತು ವಿಚಾರಣೆಗೆ ಸುಪ್ರೀಂ ಒಪ್ಪಿಗೆ..!

ಭೂಮಿಯನ್ನು ಸುತ್ತುತ್ತಿರುವ ಆಯುಧಗಳು: ಭಾರತದ ಮುಂದಿರುವ ಸವಾಲುಗಳೇನು? (ಜಾಗತಿಕ ಜಗಲಿ)