ಜನಾರ್ದನ ರೆಡ್ಡಿ ಮತ್ತು ನಾಗೇಂದ್ರ 
ರಾಜಕೀಯ

ನಿನಗೆ ರಾಜಕಿಯ ಜನ್ಮ ನೀಡಿದ್ದು ನಾನೇ: ರಾಮಾಯಣ ಕಥೆ ಹೇಳಿ ಜನರನ್ನ ದಾರಿ ತಪ್ಪಿಸಬೇಡ; ನಾಗೇಂದ್ರ ಸ್ವಯಂ ಘೋಷಿತ 'ಶಂಭುಕ' -ರೆಡ್ಡಿ

ನಾಗೇಂದ್ರ ಸ್ವಯಂ ಘೋಷಿತ ಶಂಭುಕ. ನಾಗೇಂದ್ರ ಅವರು ಕಣ್ಣೀರು ಹಾಕುತ್ತಾ ನಾಟಕ ಮಾಡುತ್ತಿರುವುದನ್ನು ನೋಡಿದ್ದೇನೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ನಾಸೀರ್ ಹುಸೇನ್ ನಿನ್ನೆ ನಾಗೇಂದ್ರ ಪಕ್ಕದಲ್ಲಿ ಕುಳಿತಿದ್ದ.

ಬಳ್ಳಾರಿ: ಮಾಜಿ ಸಚಿವ ನಾಗೇಂದ್ರನಿಗೆ ರಾಜಕೀಯ ಜನ್ಮ ನೀಡಿದ್ದು ನಾನು, ಕೂಡ್ಲಿಗಿಯಲ್ಲಿ ಬಿಜೆಪಿಯಿಂದ ಗೆದ್ದು ರಾಜಕೀಯ ಜೀವನ ಆರಂಭಿಸಿರುವುದನ್ನು ಅವರು ಸ್ಮರಿಸಿಕೊಳ್ಳಬೇಕು. ರಾಜಕಾರಣಕ್ಕೆ ವಾಲ್ಮೀಕಿ ಸಮುದಾಯವನ್ನು ತಂದಿದ್ದೀಯ ಎಂದು ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೆಡ್ಡಿ, ನಿನ್ನ ತಲೆದಂಡ ಮಾಡಿದ್ದು ಕಾಂಗ್ರೆಸ್, ರಾಮಾಯಣದ ಕಥೆ ಹೇಳಿ ಜನರನ್ನು ದಾರಿ ತಪ್ಪಿಸಬೇಡ. ರಾಜಕೀಯವಾಗಿ ತಲೆಕೆಟ್ಟಿರುವ ಕಾರಣ ಏನೇನೋ ಮಾತನಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ನಾಗೇಂದ್ರ ಸ್ವಯಂ ಘೋಷಿತ ಶಂಭುಕ. ನಾಗೇಂದ್ರ ಅವರು ಕಣ್ಣೀರು ಹಾಕುತ್ತಾ ನಾಟಕ ಮಾಡುತ್ತಿರುವುದನ್ನು ನೋಡಿದ್ದೇನೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ನಾಸೀರ್ ಹುಸೇನ್ ನಿನ್ನೆ ನಾಗೇಂದ್ರ ಪಕ್ಕದಲ್ಲಿ ಕುಳಿತಿದ್ದ.

ಜನಾರ್ದನ ರೆಡ್ಡಿ ಅವರಿಂದ ನೀನು ಎಂಎಲ್‌ಎ ಆಗಿದ್ದು. ನಿನ್ನ ಇತಿಹಾಸದ ಬಗ್ಗೆ ನಮ್ಮವರು ಮಾತನಾಡುತ್ತಾರೆ. ಮನುವಾದದ ಬಗ್ಗೆ ಮಾತನಾಡುತ್ತೀಯಾ. ನಿನ್ನ ರಾಜಕೀಯ ಆರಂಭವಾಗಿದ್ದು ಬಿಜೆಪಿಯಿಂದ. ವಾಲ್ಮೀಕಿ ರಾಮಾಯಣದ ಬಗ್ಗೆ ಶಂಭುಕನ ಬಗ್ಗೆ ಮಾತನಾಡುತ್ತೀಯಾ?

ರಾಜಕೀಯಕ್ಕೆ ರಾಮಾಯಣ ತರುತ್ತೀಯಾ? ಈ ಬಗ್ಗೆ ನಿನಗೆ ಮಾತನಾಡಲು ಯೋಗ್ಯತೆ ಇಲ್ಲ. ಶಂಭುಕನ ಹತ್ಯೆ ಯಾಕೆ ಆಯ್ತು ನಿನಗೆ ಗೊತ್ತಾ? ದಲಿತ ಚಂದ್ರಶೇಖರ್ ಅವರನ್ನು ನೇರವಾಗಿ ಹತ್ಯೆ ಮಾಡಿದ್ದು ನೀವು. ಚಂದ್ರಶೇಖರ್ ಆತ್ಮಹತ್ಯೆಗೆ ಕಾರಣವಾಗಿದ್ದು ನೀನು. ಬಿಜೆಪಿ ಎಂಎಲ್‌ಎ ಇದ್ದಾಗ ನಿನಗೆ ಮನುವಾದ ಗೊತ್ತಿರಲಿಲ್ವ ಎಂದು ಪ್ರಶ್ನಿಸಿದರು.

ನಾವೆಲ್ಲ ರಿಜೆಕ್ಟೆಡ್ ಪೀಸಾ? ಕಲಬುರಗಿಯಲ್ಲಿ ಹೀನಾಯ ಸೋಲನ್ನು ಕಂಡ ಮಲ್ಲಿಕಾರ್ಜುನ ಖರ್ಗೆಯವರನ್ನು ನೀವು ಇವತ್ತು ನಿಮ್ಮ ಎಐಸಿಸಿ ಅಧ್ಯಕ್ಷ ಮಾಡಿದ್ದೀರಿ. ಹಾಗಿದ್ರೆ ಅವರು ರಿಜಕ್ಟೆಡ್ ಪೀಸಾ? ಮಾತನಾಡುವ ಮೊದಲು ತಲೆಯಲ್ಲಿ ಸ್ವಲ್ಪ ಬುದ್ಧಿ ಇರಬೇಕು. ರಾಜಕೀಯದಲ್ಲಿ ಸೋಲು-ಗೆಲುವು ಎನ್ನುವುದು ಸರ್ವೇ ಸಾಮಾನ್ಯ.

ವಾಲ್ಮೀಕಿ ನಿಗಮದ ದುಡ್ಡಿನಲ್ಲಿ ತುಕಾರಾಂ ಗೆದ್ದಿದ್ದಾನೆ.ತುಕಾರಾಂ ಕೂಡ ರಾಜೀನಾಮೆ ಕೊಡಬೇಕಿತ್ತು. ನಾಗೇಂದ್ರ ನಿನಗೆ ನಿನ್ನ ಪಕ್ಷಕ್ಕೆ ತಾಕತ್ತು ಇದ್ರೆ ತುಕಾರಾಂ ಸೇರಿ ಹತ್ತು ಶಾಸಕರಿಗೆ ರಾಜೀನಾಮೆ ಕೊಡಿಸಿ. ನಾಳೆಯೇ ಚುನಾವಣೆಗೆ ನಾವು ರೆಡಿ ಎಂದು ರೆಡ್ಡಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರವಾಹದ ರೌದ್ರಾವತಾರ: ನೇಪಾಳದಿಂದ ಕೊಚ್ಚಿಬಂದ ಮತ್ತಷ್ಟು ಶವಗಳು, ಗಂಡಕ್ ನದಿಯಲ್ಲಿ 3, ಮಹಾರಾಜ್‌ಗಂಜ್‌ನಲ್ಲಿ 4 ಮೃತದೇಹ ಪತ್ತೆ!

ಟಿ20 ವಿಶ್ವಕಪ್ ಗೆದ್ದ ನಂತರ ಎರಡೇ ತಿಂಗಳಲ್ಲಿ ತಂಡದಿಂದ ಕೈಬಿಟ್ಟಿದ್ದಕ್ಕೆ ಅರಗಿಸಿಕೊಳ್ಳಲು ಆಗಲಿಲ್ಲ: ಕೊನೆಗೂ ಮೌನ ಮುರಿದ ಸೂರ್ಯಕುಮಾರ್ ಯಾದವ್

ನೇಪಾಳದಲ್ಲಿ ವಿನಾಶಕಾರಿ ಪ್ರವಾಹ: ಹೆಚ್ಚುತ್ತಲೇ ಇದೆ ಸಾವಿನ ಸಂಖ್ಯೆ; 626 ಮೃತದೇಹ ಪತ್ತೆ, 2000ಕ್ಕೂ ಹೆಚ್ಚು ಜನ ನಾಪತ್ತೆ

ಸ್ಯಾಟಲೈಟ್ ಚಿತ್ರಗಳಲ್ಲಿ ಭೀಕರ ದೃಶ್ಯ: ಹಿಮಾಲಯದ ಪ್ರವಾಹಕ್ಕೆ ನೇಪಾಳ-ಚೀನಾ ಗಡಿ ಮಾರ್ಗವೇ ಮಾಯ, ಸಾವಿನ ಸಂಖ್ಯೆ 623ಕ್ಕೇರಿಕೆ!

ನೇಪಾಳ ಪ್ರವಾಹ: ಇನ್ಫೋಸಿಸ್ ಪಬ್ಲಿಕ್ ಸರ್ವಿಸಸ್ CEO ನಾಪತ್ತೆ