ಡಿಕೆ.ಶಿವಕುಮಾರ್  
ರಾಜಕೀಯ

ನಿಮ್ಮ ಶಿಷ್ಯ ಇಕ್ಬಾಲ್ ಹುಸೇನ್, ಉಗ್ರಪ್ಪನಿಗೆ ನೋಟಿಸ್ ಕೊಡುವಾಗ ಇರುವ ನಿಮ್ಮ 'ಪೌರುಷ' ಯತೀಂದ್ರಗೆ ನೋಟಿಸ್ ನೀಡಲು ಯಾಕಿಲ್ಲ?

ನಿಮ್ಮ ʼಕೈʼಕಮಾಂಡ್ ಸಮ್ಮುಖದಲ್ಲೇ ಅಧಿಕಾರ ಹಂಚಿಕೆ ಮಾತುಕತೆಯಾಗಿದೆ ಅಂತೀರ, ಆದರೆ ದಿನಬೆಳಗಾದರೆ ಕುರ್ಚಿ ಬಗ್ಗೆ ಕಿತ್ತಾಡ್ತೀರ. ಈಗ ಸಿದ್ದರಾಮಯ್ಯ ನವರ ಪುತ್ರನ ಹೇಳಿಕೆ ಯಾರ ಬಲದಿಂದ ಬಂದಿದೆ ಎಂದು ನಿಮಗೆ ತಿಳಿಯದೇ ಡಿಕೆ.ಶಿವಕುಮಾರ್ ಅವರೇ?

ಬೆಂಗಳೂರು: ನಿಮ್ಮ ಶಿಷ್ಯ ಇಕ್ಬಾಲ್ ಹುಸೇನ್ ಮತ್ತು ಉಗ್ರಪ್ಪನಿಗೆ ನೋಟಿಸ್ ಕೊಡುವಾಗ ಇರುವ ನಿಮ್ಮ 'ಪೌರುಷ' ಯತೀಂದ್ರ ಅವರಿಗೆ ನೋಟಿಸ್ ನೀಡಲು ಯಾಕಿಲ್ಲ? ಅಷ್ಟು ಅಸಹಾಯಕತೆಯೇ? ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರಿಗೆ ಬಿಜೆಪಿ ಪ್ರಶ್ನೆ ಮಾಡಿದೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪೂರ್ವ-ಬಜೆಟ್ ಸಭೆಗಳನ್ನು ಕೈಬಿಟ್ಟು ದೆಹಲಿಗೆ ತೆರಳಿರುವಿ ಹಿನ್ನೆಲೆಯಲ್ಲಿ ಬಿಜೆಪಿ ತೀವ್ರ ಮಾಡಿದೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ರಾಜ್ಯ ಬಜೆಟ್ ಸಿದ್ಧತೆಗೆ ಗಮನ ನೀಡುವ ಬದಲು ಶಿವಕುಮಾರ್ ಅವರು “ಹೈಕಮಾಂಡ್ ಹಾಗೂ ದೆಹಲಿ ಭೇಟಿಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಒಂದು ಕಡೆ ಖಾಲಿ ಖಜಾನೆ, ಮತ್ತೊಂದು ಕಡೆ ಕಾಂಗ್ರೆಸ್ ನಾಯಕರ ನಡುವೆ ಬೀದಿ ಜಗಳ. ಶಾಸಕ ಇಕ್ಬಾಲ್ ಹುಸೇನ್ ಹಾಗೂ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ನಡುವಿನ ಸಾರ್ವಜನಿಕ ಜಗಳಗಳು ಹಾಗೂ ಪಕ್ಷ ಆಂತರಿಕ ಕಲಹಗಳು ಆಡಳಿತ ವ್ಯವಸ್ಥೆಯ ಕುಸಿಯುವಂತೆ ಮಾಡುತ್ತಿದೆ ಎಂದು ಟೀಕಿಸಿದೆ.

ಇದೇ ವೇಳೆ ನಿಮ್ಮ ʼಕೈʼಕಮಾಂಡ್ ಸಮ್ಮುಖದಲ್ಲೇ ಅಧಿಕಾರ ಹಂಚಿಕೆ ಮಾತುಕತೆಯಾಗಿದೆ ಅಂತೀರ, ಆದರೆ ದಿನಬೆಳಗಾದರೆ ಕುರ್ಚಿ ಬಗ್ಗೆ ಕಿತ್ತಾಡ್ತೀರ. ಈಗ ಸಿದ್ದರಾಮಯ್ಯ ನವರ ಪುತ್ರನ ಹೇಳಿಕೆ ಯಾರ ಬಲದಿಂದ ಬಂದಿದೆ ಎಂದು ನಿಮಗೆ ತಿಳಿಯದೇ ಡಿಕೆ.ಶಿವಕುಮಾರ್ ಅವರೇ? ಎಂದು ಪ್ರಶ್ನಿಸಿದೆ.

ಮತ್ತೊಂದು ಟ್ವೀಟ್ ನಲ್ಲಿ ಭೂಮಿ ಮೇಲೆ 'ಸ್ಕೈಡೆಕ್' ಕಟ್ಟುವ, ಪಾತಾಳದಲ್ಲಿ 'ಟನಲ್ ರೋಡ್' ಮಾಡುವ ನಿಮ್ಮ ದೊಡ್ಡ ಕನಸುಗಳು ಬದಿಗಿಡಿ. ಮೊದಲು ಲಕ್ಷಾಂತರ ಜನ ಓಡಾಡುವ ರಾಜಧಾನಿಯ ಹೆಬ್ಬಾಗಿಲಾದ ಮೆಜೆಸ್ಟಿಕ್ ಸಬ್‌ವೇಯನ್ನು ಸ್ವಚ್ಛವಾಗಿಡಿ. ಜನರು ಇಲ್ಲಿ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಇದೇನಾ ನೀವು ಜಗತ್ತಿಗೆ ತೋರಿಸಲು ಹೊರಟಿರುವ 'ಬ್ರ್ಯಾಂಡ್ ಬೆಂಗಳೂರು'? 'ಗಬ್ಬು ನಾರುವ ಬೆಂಗಳೂರು' ಎಂಬ ಹೊಸ ಟ್ಯಾಗ್ ಲೈನ್ ಬೇಕೇ? ಎಂದು ಟೀಕಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಲೋಕಸಭೆ ವಿಪಕ್ಷ ನಾಯಕನ ಸ್ಥಾನಕ್ಕೆ ಹೊಂದುವ ಜವಾಬ್ದಾರಿಯುತ ವ್ಯಕ್ತಿ ದೇಶದಲ್ಲಿಲ್ಲದಿರುವುದು ದುರದೃಷ್ಟಕರ'

Thai school shooting: ಶಾಲೆ ಮೇಲೆ ಗುಂಡಿನ ಮಳೆ, 22 ಮಕ್ಕಳು ಸೇರಿ ಕನಿಷ್ಟ 34 ಸಾವು, ದಾಳಿಕೋರ ಪೊಲೀಸ್ ವಶಕ್ಕೆ!

ನರವಾಣೆ ಪುಸ್ತಕ ವಿವಾದ: 'ನಂಬರ್ ಒನ್' ಶಂಕಿತ, ಪೆಂಗ್ವಿನ್ ಪಬ್ಲಿಕೇಷನ್ಸ್‌ಗೆ ನೋಟಿಸ್ ಜಾರಿ ಮಾಡಿದ ದೆಹಲಿ ಪೊಲೀಸರು!

ಬೇಸಿಗೆ ಎದುರಿಸಲು ಸಿದ್ಧತೆ: ಬೆಂಗಳೂರಿನ ಆಯ್ದ ಪ್ರದೇಶಗಳಲ್ಲಿ ಮಿನಿ ವಾಟರ್ ಟ್ಯಾಂಕ್‌ ಸ್ಥಾಪನೆ: BWSSB ಮಹತ್ವದ ನಡೆ!

ಬೆಂಗಳೂರಿನಲ್ಲಿ ದಾರುಣ ಘಟನೆ: ಶಾಲಾ ಬಸ್ ಹರಿದು ತಂದೆಯ ಕಣ್ಣೆದುರೇ ವಿಲವಿಲ ಒದ್ದಾಡಿ ಪ್ರಾಣಬಿಟ್ಟ ಕಂದಮ್ಮಗಳು! Video

SCROLL FOR NEXT