ಬೆಂಗಳೂರು: ನಾನು ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ, ಪದೇ ಪದೇ ಅದೇ ಪ್ರಶ್ನೆ ಕೇಳಬೇಡಿ ಎಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಸಿಎಂ ಸಿದ್ದರಾಮಯ್ಯ ಗರಂ ಆದ ಪ್ರಸಂಗ ನಡೆಯಿತು.
ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಏನು ಹೇಳುತ್ತಾರೆ ಅದನ್ನು ಕೇಳುತ್ತೇನೆ, ನೀವು ಪದೇ ಪದೇ ಅದನ್ನೇ ಏಕೆ ಕೇಳುತ್ತೀರಿ, ನಿಮಗೆ ಅದು ಬಿಟ್ಟು ಬೇರೆ ವಿಷಯ ಇಲ್ಲವೇ, 3 ತಿಂಗಳಿಂದ ಇದೇ ವಿಷಯ ಆಯ್ತು ಆ ಬಗ್ಗೆ ಬೇರೆಯವರು ಮಾತನಾಡಿದರೆ ಅವರನ್ನೇ ಕೇಳಿ ಎಂದು ಸಿಡಿಮಿಡಿಯಿಂದ ಉತ್ತರಿಸಿದರು.
ಹೈಕಮಾಂಡ್ ಹೇಳಿದಂತೆ ನಾನು, ಡಿ ಕೆ ಶಿವಕುಮಾರ್ ನಡೆದುಕೊಳ್ಳಬೇಕು, ನನ್ನನ್ನು ಈ ಬಗ್ಗೆ ಪದೇ ಪದೇ ಕೇಳಬೇಡಿ, ಯಾರು ಮಾತನಾಡುತ್ತಾರೋ ಅವರನ್ನೇ ಕೇಳಿ ಎಂದರು. ಶಾಸಕರು ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುತ್ತಿದ್ದಾರೆ ಎಂದಾಗ ಅವರ ಸ್ವಂತ ಹಣದಲ್ಲಿ ಹೋಗೋದಿದ್ದರೆ ಬೇಡ ಎನ್ನಲು ಆಗುತ್ತದೆಯೇ ಎಂದು ಕೇಳಿದರು.
ಇನ್ನು ಇನ್ನೊಂದೆಡೆ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿ ಕೆ ಸುರೇಶ್, ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸ, ಭರವಸೆ ನನಗೆ ಈಗಲೂ ಇದೆ ಎಂದರು.