ಸಿಟಿ ರವಿ 
ರಾಜಕೀಯ

ಸಿ.ಟಿ ರವಿ ಮತ್ತೊಂದು ಎಡವಟ್ಟು: NEET ಪ್ರತಿಭಟನೆಯ ವಿಡಿಯೋ ಅಂತ ಬಿಹಾರದ Video ತೋರಿಸಿದ MLC!

ನೀಟ್ ಪ್ರತಿಭಟನೆಯ ಸಂದರ್ಭದ ವಿಡಿಯೋ ಎಂದು ಹೇಳಿ ಬಿಹಾರದ ರಸ್ತೆ ಅಪಘಾತದ ವಿಡಿಯೋ ತೋರಿಸುವ ಮೂಲಕ ಬಿಜೆಪಿ MLC ಸಿ.ಟಿ ರವಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ನೀಟ್ ಗೂ ಮುಲ್ಲಾಗಳಿಗೂ ಏನು ಸಂಬಂಧ?...

ಚಿಕ್ಕಮಗಳೂರು: ನೀಟ್ ಪ್ರತಿಭಟನೆಯ ಸಂದರ್ಭದ ವಿಡಿಯೋ ಎಂದು ಹೇಳಿ ಬಿಹಾರದ ರಸ್ತೆ ಅಪಘಾತದ ವಿಡಿಯೋ ತೋರಿಸುವ ಮೂಲಕ ಬಿಜೆಪಿ MLC ಸಿ.ಟಿ ರವಿ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ನೀಟ್ ಗೂ ಮುಲ್ಲಾಗಳಿಗೂ ಏನು ಸಂಬಂಧ? ಎದೆ ಸೀಳಿದರೆ ಮೂರು ಅಕ್ಷರವಿಲ್ಲದ ಮುಲ್ಲಾಗಳು ನೀಟ್ ಪ್ರತಿಭಟನೆಯಲ್ಲಿ ಭಾಗಿಯಾಗುವುದಂತೆ, ಪ್ರಧಾನ್ ರಾಜೀನಾಮೆ ಕೇಳುವುದಂತೆ… ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದರು.

ಈ ಸಂಬಂಧ ಸಿ.ಟಿ ರವಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಇಂದು ಚಿಕ್ಕಮಗಳೂರು ಪೊಲೀಸರು ಸಿಟಿ ರವಿ ಅವರ ಬಸವನಹಳ್ಳಿಯಲ್ಲಿರುವ ನಿವಾಸಕ್ಕೆ ತೆರಳಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ತೆರಳಿದ್ದರು. ನೋಟಿಸ್ ಸ್ವೀಕರಿಸದ ಸಿ.ಟಿ ರವಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಇನ್ನು ಪೊಲೀಸರು ಅಂಟಿಸುತ್ತಿದ್ದಂತೆ ನೋಟಿಸ್ ಅನ್ನು ಅವರ ಬೆಂಬಲಿಗರು ಕಿತ್ತು ಬಿಸಾಕಿ ಪೊಲೀಸರ ವಿರುದ್ಧವೇ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಘಟನೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿ.ಟಿ ರವಿ, ನಾನು ಮುಸ್ಲಿಂ ಸಮುದಾಯದ ಬಗ್ಗೆ ಮಾತನಾಡಿಲ್ಲ. ನೀಟ್ ಪ್ರತಿಭಟನೆ ವೇಳೆ ವಾಹನಕ್ಕೆ ಬೆಂಕಿ ಹಚ್ಚಲು ಉದ್ರಿಕ್ತರು ಯತ್ನಿಸಿದ್ದರು. ಮುಲ್ಲಾ ಓರ್ವ ವಾಹನಕ್ಕೆ ಬೆಂಕಿ ಹಚ್ಚಲು ಯತ್ನಿಸಿದ್ದಾನೆ ಎಂದು ಹೇಳಿ ಬಿಹಾರದಲ್ಲಿ ವಾರದ ಹಿಂದೆ ನಡೆದಿದ್ದ ರಸ್ತೆ ಅಪಘಾತದ ವಿಡಿಯೋವೊಂದನ್ನು ತೋರಿಸಿದ್ದರು. ಇದು ವೈರಲ್ ಆಗುತ್ತಿದ್ದಂತೆ ಒಬ್ಬ ಜನಪ್ರತಿನಿಧಿಯಾಗಿ ವೈರಲ್ ವಿಡಿಯೋದ ಸತ್ಯಾಸತ್ಯತೆ ತಿಳಿಯದೆ ತೋರಿಸಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BRICS 2026: ಬ್ರಿಕ್ಸ್‌ ಶೃಂಗಸಭೆಗೆ ದೆಹಲಿಗೆ ಬಂದಿಳಿದ ಕ್ಸಿ ಜಿನ್‌ಪಿಂಗ್; ಕುತೂಹಲ ಕೆರಳಿಸಿದ ಭಾರತ-ಚೀನಾ ಮಾತುಕತೆ

ಕ್ಯಾಲಿಫೋರ್ನಿಯಾದ ರೆಸ್ಟೋರೆಂಟ್ ಹೊರಗೆ ಭಾರತೀಯ ಮೂಲದ ಮಹಿಳೆಗೆ ಗುಂಡಿಕ್ಕಿ ಹತ್ಯೆ, ಆರೋಪಿ ಆತ್ಮಹತ್ಯೆ!

ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗುವಂತಿಲ್ಲ, ಪಟಾಕಿ ಸಿಡಿಸಿದ್ರೆ ಗ್ರಹಚಾರ ಬಿಡಿಸ್ತೇನೆ: ಇನ್ಸ್​​ಪೆಕ್ಟರ್ ಧನಂಜಯ್ ಗೆ ಪ್ರತಾಪ್ ಸಿಂಹ ವಾರ್ನಿಂಗ್!

Non Committal?: 'ಎಷ್ಟು ರಿಹರ್ಸಲ್ ಮಾಡಿಸ್ತೀರೋ.. ಆದ್ರೆ ಬರ್ತಾ ಇದೀನಿ'!, ಅಗರ್ಕರ್, ಗಂಭೀರ್ ರೋಸ್ಟ್ ಮಾಡಿದ್ರಾ Rohit Sharma?

Ganesh Chaturthi: ಬೆಂಗಳೂರಿನಲ್ಲಿ ಈ ದಿನ ಮಾಂಸ ಮಾರಾಟ, ಪ್ರಾಣಿವಧೆ ಸಂಪೂರ್ಣ ನಿಷೇಧ! ಕಸಾಯಿಖಾನೆಗಳು ಬಂದ್