ಸಿದ್ದರಾಮಯ್ಯ ಮತ್ತು ಬಿ.ಕೆ ಹರಿಪ್ರಸಾದ್ 
ರಾಜಕೀಯ

ರಾಜಕೀಯ ಕ್ಷೇತ್ರ ಕಲುಷಿತ, ಹಣ-ತೋಲ್ಬಳದ ಪ್ರಾಬಲ್ಯ: ಸಿದ್ದರಾಮಯ್ಯ ಹೇಳಿಕೆಗೆ ದನಿಗೂಡಿಸಿದ ಹರಿಪ್ರಸಾದ್! Video

1990 ರ ದಶಕಕ್ಕೂ ಮೊದಲು ರಾಜಕೀಯ ಕ್ಷೇತ್ರ ಈ ರೀತಿ ಇರಲಿಲ್ಲ. ಹದಗೆಡುತ್ತಿರುವ ರಾಜಕೀಯ ವಾತಾವರಣದ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ತಾವು ಬೆಂಬಲಿಸುತ್ತಿರುವುದಾಗಿ ಹೇಳಿದರು.

ಬೆಂಗಳೂರು: ರಾಜಕೀಯ ಕ್ಷೇತ್ರ ಕಲುಷಿತಗೊಂಡಿರುವ ಬಗ್ಗೆಕಳವಳ ವ್ಯಕ್ತ ಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸದ್ಯದ ರಾಜಕೀಯವು ಹಣ ಮತ್ತು ತೋಳ್ಬಲದಿಂದ ಪ್ರಾಬಲ್ಯ ಹೊಂದಿದೆ ಎಂದಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಯ್ಯ ರಾಜಕೀಯ ನಿವೃತ್ತಿ ಬಗ್ಗೆ ಪ್ರತಿಕ್ರಿಯಿಸಿದರು. 1990 ರ ದಶಕಕ್ಕೂ ಮೊದಲು ರಾಜಕೀಯ ಕ್ಷೇತ್ರ ಈ ರೀತಿ ಇರಲಿಲ್ಲ. ಹದಗೆಡುತ್ತಿರುವ ರಾಜಕೀಯ ವಾತಾವರಣದ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ತಾವು ಬೆಂಬಲಿಸುತ್ತಿರುವುದಾಗಿ ಹೇಳಿದರು.

ಸಿದ್ದರಾಮಯ್ಯ ಅವರು ಚುನಾವಣೆಯಲ್ಲಿ ಸ್ಪರ್ಧಿಸದಿರುವ ಅಥವಾ ಸ್ಪರ್ಧಿಸುವ ಬಗ್ಗೆ ನನಗೆ ತಿಳಿದಿಲ್ಲ. ಅದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಆದರೆ ಅವರು ಹೇಳಿದಂತೆ ದೇಶದಲ್ಲಿ ರಾಜಕೀಯ ಕಲುಷಿತಗೊಂಡಿರುವುದು- ನಿಜ. ಇದಲ್ಲದೆ, ರಾಜಕೀಯವು ಹಣ ಮತ್ತು ತೋಳ್ಬಲದಿಂದ ತುಂಬಿದೆ, 90ರ ದಶಕದಲ್ಲಿ ಈ ರೀತಿ ಇರಲಿಲ್ಲ ಎಂದು ಹರಿಪ್ರಸಾದ್ ಹೇಳಿದರು.

ರಾಜಕೀಯವು ಕಲುಷಿತಗೊಂಡಿದೆ. ಅಧಿಕಾರವನ್ನು ಉಳಿಸಿಕೊಳ್ಳಲು ಜನರು ಹಣ, ಧರ್ಮ, ಜಾತಿ ಅಥವಾ ಭಾಷೆಯನ್ನು ಬಳಸುತ್ತಿದ್ದಾರೆ. ದೇಶದಲ್ಲಿ ಮತ್ತು ವಿಶೇಷವಾಗಿ ಕರ್ನಾಟಕದಲ್ಲಿ ಇದು ತುಂಬಾ ದುರದೃಷ್ಟಕರ" ಎಂದು ಅವರು ಹೇಳಿದರು. ಸಿದ್ದರಾಮಯ್ಯ ಅವರ ಭವಿಷ್ಯದ ಪಾತ್ರವನ್ನು ಸ್ಪಷ್ಟಪಡಿಸಿದ ಹರಿಪ್ರಸಾದ್, ಅವರಿಗೆ ಜನರಿಂದ ದೂರವಾಗುವ ಯಾವುದೇ ಉದ್ದೇಶವಿಲ್ಲ ಎಂದು ಒತ್ತಿ ಹೇಳಿದರು. "ಅವರು ರಾಜಕೀಯವನ್ನು ತ್ಯಜಿಸುವುದಿಲ್ಲ. ಅವರು ಸಾರ್ವಜನಿಕ ಜೀವನದಲ್ಲಿರುತ್ತಾರೆ. ಅವರು ಜನರ ಹಿತಕ್ಕಾಗಿ ಹೋರಾಡುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ SIR: ವಿದೇಶಾಂಗ ಸಚಿವ ಜೈಶಂಕರ್, ಎಲ್.ಕೆ ಅಡ್ವಾಣಿ ಸೇರಿದಂತೆ ಹಲವು ಮತದಾರರಿಗೆ ನೋಟಿಸ್; CEO ಕೊಟ್ಟ ಸ್ಪಷ್ಟನೆ ಏನು?

ಇದು ಎಂತಹ ವಿಶೇಷ ತೀವ್ರ ಪರಿಷ್ಕರಣೆ? ಅರ್ಹರನ್ನು ಕಿತ್ತುಹಾಕಿ, ಅನರ್ಹರನ್ನು ಸೇರಿಸುವುದೇ SIR: ಕಪಿಲ್ ಸಿಬಲ್ ಕಿಡಿ!

ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಮರುನೇಮಕ ಪ್ರಶ್ನಿಸಿದ ಟಾಟಾ ಟ್ರಸ್ಟ್ಸ್!

ಸಿಎಂ ಡಿಕೆ ಶಿವಕುಮಾರ್‌ ನೂರು ದಿನಗಳ ಆಡಳಿತಕ್ಕೆ ಬಿಜೆಪಿ ನಾಯಕ ಫಿದಾ! ಏನಂದ್ರು ಗೊತ್ತಾ?

ಅಂತಹ ಮನಸ್ಥಿತಿ ಇದ್ದಾಗ ಮೊದಲೇ ಅದರಿಂದ ದೂರ ಇರಬೇಕಿತ್ತು: ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಹದೇವಪ್ಪ ಟಾಂಗ್!