ಎಚ್.ಸಿ ಬಾಲಕೃಷ್ಣ 
ರಾಜಕೀಯ

JDS ನಿಂದಲೇ ಕಾಂಗ್ರೆಸ್ ಗೆ ಪ್ರಬಲ ಪೈಪೋಟಿ: ದಳಪತಿಗಳ ಕೈಯ್ಯಲ್ಲಿ BJP ಜುಟ್ಟು; ಉಪ ಚುನಾವಣೆ ಮಾಡೋದ್ರಲ್ಲಿ HDK ಎತ್ತಿದ ಕೈ!

ಕಾಂಗ್ರೆಸ್ ಗೆ ಜೆಡಿಎಸ್ ನಿಂದ ಪ್ರಬಲ ಪೈಪೋಟಿಯಿದೆ, ಪ್ರಬಲ ಪೈಪೋಟಿ ಇರುವ ಕಡೆ ಹೆಚ್ಚಿನ ಒತ್ತು ಕೊಟ್ಟು ಮಂತ್ರಿಗಳನ್ನು ಮಾಡಬೇಕು. ಬಿಜೆಪಿಯವರು ಎಲ್ಲವನ್ನು ಜೆಡಿಎಸ್ ನಾಯಕರಿಗೆ ಬಿಟ್ಟುಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಬೆಂಗಳೂರು: ಬಿಜೆಪಿಗರು ಎಲ್ಲವನ್ನೂ ಜೆಡಿಎಸ್ ಕೈಗೆ ಬಿಟ್ಟುಕೊಟ್ಟಿದ್ದಾರೆ. ಹಾಗಾಗಿ ಕಾಂಗ್ರೆಸ್‌ಗೆ ಬಿಜೆಪಿಗಿಂತಲೂ ದಳದಿಂದಲೇ ಪ್ರಬಲ ಪೈಪೋಟಿ ವ್ಯಕ್ತವಾಗಲಿದೆ ಎಂದು ಕಾಂಗ್ರೆಸ್ ಶಾಸಕ ಎಚ್‌ಸಿ ಬಾಲಕೃಷ್ಣ ವ್ಯಾಖ್ಯಾನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗೆ ಜೆಡಿಎಸ್ ನಿಂದ ಪ್ರಬಲ ಪೈಪೋಟಿಯಿದೆ, ಪ್ರಬಲ ಪೈಪೋಟಿ ಇರುವ ಕಡೆ ಹೆಚ್ಚಿನ ಒತ್ತು ಕೊಟ್ಟು ಮಂತ್ರಿಗಳನ್ನು ಮಾಡಬೇಕು. ಬಿಜೆಪಿಯವರು ಎಲ್ಲವನ್ನು ಜೆಡಿಎಸ್ ನಾಯಕರಿಗೆ ಬಿಟ್ಟುಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಕುಮಾರಸ್ವಾಮಿಯವರು ರಾಜ್ಯ ರಾಜಕೀಯಕ್ಕೆ ಬರಲಿ ಎಂದು ರವೀಂದ್ರ ಶ್ರೀಕಂಠಯ್ಯ ಹೇಳಿದ್ದಾರೆ. ಅಂದರೆ ಬಿಜೆಪಿಯವರು ಎಲ್ಲವನ್ನು ಜೆಡಿಸ್ ಕೈ ಬಿಟ್ಟು ಬಿಟ್ಟಿದ್ದಾರೆ ಎಂದರು.

ಹಿರಿಯೂರು ಕ್ಷೇತ್ರದಿಂದ ಕುಮಾರಸ್ವಾಮಿ ಸ್ಪರ್ಧಿಸುತ್ತಾರೆ ಎಂಬ ವಿಷಯ ಮಾಧ್ಯಮಗಳಿಂದ ತಿಳಿದುಕೊಂಡಿದ್ದೇನೆ. ಹಲವು ಸಂದರ್ಭಗಳಲ್ಲಿ ಅವರು ಉಪ ಚುನಾವಣೆ ನಡೆಸಿದ್ದಾರೆ, ಉಪ ಚುನಾವಣೆ ಮಾಡೋದ್ರಲ್ಲಿ ಕುಮಾರಸ್ವಾಮಿ ಎತ್ತಿದ ಕೈ ಎಂದು ವ್ಯಂಗ್ಯವಾಡಿದರು.

ಸಿಟಿ ರವಿ ಇರಲಾರದೆ ಇರುವೆ ಬಿಟ್ಟುಕೊಳ್ಳುತ್ತಾರೆ. ಪ್ರತಿ ಹಂತದಲ್ಲಿ, ಪ್ರತಿ ವಿಷಯದಲ್ಲೂ ಮುಸ್ಲಿಮರನ್ನು ಎಳೆದು ತರುತ್ತಾರೆ. ಆ ಮೂಲಕ ಕೇಂದ್ರ ಬಿಜೆಪಿ ನಾಯಕರ ಗಮನ ಸೆಳೆಯಲು ಹೋಗುತ್ತಾರೆ ಎಂದು ಟೀಕಿಸಿದರು.

ಸಿದ್ದರಾಮಯ್ಯ ಇಲ್ಲದಿದ್ದರೇ ಕಾಂಗ್ರೆಸ್ ಇರಲು ಸಾಧ್ಯವಿಲ್ಲ, ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸದಿದ್ದರೂ ಪರವಾಗಿಲ್ಲ. ಪಕ್ಷ ಸಂಘಟನೆಗೆ ಅವರು ಇರಲೇ ಬೇಕು.. ಕಾಂಗ್ರೆಸ್ ಶಕ್ತಿಯುತವಾಗಿರಬೇಕು ಎಂದರೆ ಅವರ ಆಶೀರ್ವಾದ ಇರಲೇಬೇಕು ಎಂದಿದ್ದಾರೆ. ಅವರಿಲ್ಲದಿದ್ದರೇ ಪಕ್ಷಕ್ಕೆ ಕಷ್ಟವಾಗುತ್ತದೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೇಕೆದಾಟು ಯೋಜನೆಗೆ ಸಿಕ್ಕಿತು ಕೇಂದ್ರದ ಬಲ; ಕರ್ನಾಟಕಕ್ಕೆ ಕಾನೂನುಬದ್ಧ ಹಕ್ಕಿದೆ, ತಮಿಳುನಾಡಿನ ಸಮ್ಮತಿ ಅಗತ್ಯವೇ ಇಲ್ಲ ಎಂದ ಜಲಶಕ್ತಿ ಸಚಿವಾಲಯ

ಮರಳು ಮಾಫಿಯಾ ಹೆಡೆಮುರಿ ಕಟ್ಟಲು ಸರ್ಕಾರ ನಿರ್ಧಾರ; ಗೂಂಡಾ ಕಾಯ್ದೆ ಅಸ್ತ್ರ ಪ್ರಯೋಗಕ್ಕೆ ಮುಂದು, ಕಣ್ಮುಚ್ಚಿ ಕೂರುವ ಪೊಲೀಸರಿಗೂ ತಟ್ಟಲಿದೆ ಬಿಸಿ..!

VB-G RAM G ಯೋಜನೆಗೆ ಹಣದ ಕೊರತೆಯೇ ಇಲ್ಲ, ಗ್ರಾಮೀಣ ಉದ್ಯೋಗಕ್ಕೆ 2,900 ಕೋಟಿ ರೂ. ಬಿಡುಗಡೆ: ರಾಜ್ಯ ಸರ್ಕಾರ

ಮೇಕೆದಾಟು ಯೋಜನೆಗೆ ಸಮ್ಮತಿ ಅಗತ್ಯವೇ ಇಲ್ಲ: ಕರ್ನಾಟಕದ ಹಕ್ಕು ಪುನರುಚ್ಚರಿಸಿದ ಕೇಂದ್ರ ಸರ್ಕಾರ ಡಿಕೆಶಿ ಧನ್ಯವಾದ

ತಮಿಳುನಾಡಿಗೆ ಹೆಚ್ಚುವರಿ ನೀರು ಬಿಡುಗಡೆ; ಕಾಂಗ್ರೆಸ್ ಸರ್ಕಾರ ಕರ್ನಾಟಕಕ್ಕೆ ದ್ರೋಹ ಮಾಡಿದೆ: ಆರ್. ಅಶೋಕ್ ಆರೋಪ