ಜಿ.ಟಿ ದೇವೇಗೌಡ ಮತದಾನ 
ರಾಜಕೀಯ

ಪರಿಷತ್‌ ಚುನಾವಣೆ: ಅಡ್ಡ ಮತದಾನ ಮಾಡಿಬಿಟ್ರಾ ಜಿ.ಟಿ ದೇವೇಗೌಡ? ಜೆಡಿಎಸ್ ಗೆ 'ಕೈ' ಕೊಟ್ರಾ GTD!

ಮುನಿಸಿಕೊಂಡಿರೋ ಶಾಸಕ ಜಿಟಿ ದೇವೇಗೌಡ್ರು ಮಾತ್ರ ರೆಸಾರ್ಟ್​ಗೆ ತೆರಳಿಲ್ಲ. ಬದಲಾಗಿ ಒಂಟಿಯಾಗಿ ಬಂದು ಮತಚಲಾಯಿಸಿದ್ದಾರೆ. ಜೆಡಿಎಸ್​ಗೆ ಜಿಟಿ ದೇವೇಗೌಡ ಕೈ ಕೊಟ್ರಾ ಎನ್ನುವ ಪ್ರಶ್ನೆ ಇದೀಗ ಮೂಡಿದೆ.

ಬೆಂಗಳೂರು: ರಾಜ್ಯದಲ್ಲಿ ವಿಧಾನಪರಿಷತ್‌ನ 7 ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. 8 ಅಭ್ಯರ್ಥಿಗಳು ಕಣದಲ್ಲಿದ್ದು, ಕಾಂಗ್ರೆಸ್ 4 ಅಭ್ಯರ್ಥಿಗಳ ಆಯ್ಕೆ ದಾರಿ ಸಲೀಸಾಗಿದೆ.

ಆದರೆ, ಐದನೇ ಅಭ್ಯರ್ಥಿಯ ಗೆಲುವಿನ ರಾಜಕೀಯ ಲೆಕ್ಕಾಚಾರಗಳು ಜೋರಾಗಿವೆ. ಈ ಮಧ್ಯೆ ಜೆಡಿಎಸ್‌ ಶಾಸಕ ಜಿ.ಟಿ ದೇವೇಗೌಡ ಅವರು ಪಕ್ಷಕ್ಕೆ ಶಾಕ್‌ ಕೊಟ್ಟಿದ್ದಾರೆ. ಜೆಡಿಎಸ್​ನ ಬಹುತೇಕ ಶಾಸಕರು ರೆಸಾರ್ಟ್​ಗೆ ಶಿಫ್ಟ್​ ಆಗಿದ್ದಾರೆ.

ಮುನಿಸಿಕೊಂಡಿರೋ ಶಾಸಕ ಜಿಟಿ ದೇವೇಗೌಡ್ರು ಮಾತ್ರ ರೆಸಾರ್ಟ್​ಗೆ ತೆರಳಿಲ್ಲ. ಬದಲಾಗಿ ಒಂಟಿಯಾಗಿ ಬಂದು ಮತಚಲಾಯಿಸಿದ್ದಾರೆ. ಜೆಡಿಎಸ್​ಗೆ ಜಿಟಿ ದೇವೇಗೌಡ ಕೈ ಕೊಟ್ರಾ ಎನ್ನುವ ಪ್ರಶ್ನೆ ಇದೀಗ ಮೂಡಿದೆ.

ಏಜೆಂಟ್‌ಗಳಿಗೆ ಖಾಲಿ ಮತಪೆಟ್ಟಿಗೆ ತೋರಿಸಿ ಪ್ರಕ್ರಿಯೆ ಪೂರ್ಣಗೊಳಿಸುತ್ತಿದ್ದಂತೆ ಶಾಸಕ ಜಿ.ಟಿ ದೇವೇಗೌಡ ಅವರು ಮತ ಚಲಾಯಿಸಿದರು. ಬಳಿಕ ವೇದವ್ಯಾಸ ಕಾಮತ್‌, ಎಸ್‌.ಆರ್‌ ವಿಶ್ವನಾಥ್‌ ಸೇರಿದಂತೆ ಬಿಜೆಪಿ ಶಾಸಕರು ಮತ ಚಲಾಯಿಸಲು ಶುರು ಮಾಡಿದ್ದಾರೆ.

ಜೆಡಿಎಸ್ ವರಿಷ್ಠ ನಡೆಯಿಂದ ನೊಂದು ಪಕ್ಷದ ಚಟುವಟಿಕೆಯಿಂದಲೇ ದೂರ ಸರಿದಿರುವ ಜಿಟಿ ದೇವೇಗೌಡ ಅವರು ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿರುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಈ ಬಗ್ಗೆ ಮೂಲಗಳಿಂದ ಮಾಹಿತಿ ಕೂಡ ಬಂದಿದ್ದು, ಜಿಟಿಡಿ ಜೆಡಿಎಸ್​ಗೆ ಕೈ ಕೊಟ್ರು ಎನ್ನುವ ಚರ್ಚೆ ಜೋರಾಗಿದೆ. ಹೀಗಾಗಿ ಜೆಡಿಎಸ್ ಪಕ್ಷದಿಂದ ಜಿ.ಟಿ ದೇವೇಗೌಡ ಅವರನ್ನು ಉಚ್ಚಾಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೀದಿ ಬಣಕ್ಕೆ ಫುಟ್‌ಬಾಲ್, ಬಂಡಾಯಗಾರರಿಗೆ ಲಕೋಟೆ: ಟಿಎಂಸಿ ಚಿಹ್ನೆ ಫ್ರೀಜ್ ಬೆನ್ನಲ್ಲೇ ಚುನಾವಣಾ ಆಯೋಗದಿಂದ ಮಹತ್ವದ ಆದೇಶ!

ಮಮತಾ ಬಣಕ್ಕೆ ಮತ್ತೊಂದು ಆಘಾತ; ನಾಮಪತ್ರ ವಾಪಸ್ ಪಡೆದ ನಂದಿಗ್ರಾಮ ಅಭ್ಯರ್ಥಿ!

ಬೆಂಗಳೂರು: ಫೋನ್‌ ರಿಸೀವ್‌ ಮಾಡ್ಲಿಲ್ಲ ಅಂತ ಪತ್ನಿ ಕೊಲೆ; ಆರೋಪಿ ಪತಿ ಬಂಧನ! ಅಪ್ಪ, ಅಮ್ಮ ಇಲ್ಲದೆ ಅನಾಥರಾದ ಮಕ್ಕಳು

ಪಾಕಿಸ್ತಾನ: ಖೈಬರ್ ಪಖ್ತುಂಕ್ವಾದ ಪೊಲೀಸ್ ಕೇಂದ್ರದ ಬಳಿ ಕಾರು ಬಾಂಬ್ ಸ್ಫೋಟ; 16 ಮಂದಿ ಸಾವು

ಶೀಘ್ರದಲ್ಲೇ ನಂದಿನಿ ಹಾಲಿನ ದರ ಹೆಚ್ಚಳ? ಲೀಟರ್‌ ಹಾಲಿಗೆ ₹8 ಏರಿಕೆಗೆ ಒಕ್ಕೂಟಗಳ ಪ್ರಸ್ತಾವನೆ!