ಗೃಹ ಸಚಿವ ಪ್ರಿಯಾಂಕ್ ಖರ್ಗೆ  
ರಾಜಕೀಯ

ದಾಖಲೆ ಇದ್ದರೆ ED ಭಯ ಯಾಕೆ? ಲೆಕ್ಕ ಕೊಡಿ, ಗೃಹ ಸಚಿವರಿಗೂ ಹೊಣೆಗಾರಿಕೆ ಬೇಕಲ್ಲವೇ?: ಪ್ರಿಯಾಂಕ್ ಖರ್ಗೆಗೆ BJP ಸವಾಲು

ಎಲ್ಲದಕ್ಕೂ ದಾಖಲೆ ಕೇಳುವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಕುಟುಂಬದ ಭೂ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಾರ್ವಜನಿಕರ ಮುಂದೆ ಇಡಲು ಏಕೆ ಹಿಂದೇಟು ಹಾಕುತ್ತಿದ್ದಾರೆ?

ಬೆಂಗಳೂರು: ಭೂ ಅವ್ಯವಹಾರಕ್ಕೆ ಸಂಬಂಧಿಸಿದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದ್ದು, ಎಲ್ಲ ವಿಚಾರಗಳಲ್ಲೂ ದಾಖಲೆಗಳನ್ನು ಕೇಳುವ ಖರ್ಗೆ ಅವರು ಈಗ ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಭೂ ವ್ಯವಹಾರಗಳ ದಾಖಲೆಗಳನ್ನು ಬಹಿರಂಗಪಡಿಸಲು ಹಿಂಜರಿಯುತ್ತಿದ್ದಾರೆ ಎಂದು ಆರೋಪಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿರುವ ಬಿಜೆಪಿ, ಬೆಂಗಳೂರು, ಕಲಬುರಗಿ ಹಾಗೂ ಬನಶಂಕರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಏರೋಸ್ಪೇಸ್, ರಕ್ಷಣಾ ಕ್ಷೇತ್ರ, ಪಾಲಿ ಸಂಶೋಧನೆ ಸೇರಿದಂತೆ ವಿವಿಧ ಉದ್ದೇಶಗಳನ್ನು ಉಲ್ಲೇಖಿಸಿ, ಟ್ರಸ್ಟ್ ಹಲವು ಎಕರೆ ಮೌಲ್ಯಯುತ ಸರ್ಕಾರಿ ಹಾಗೂ ಕೈಗಾರಿಕಾ ಭೂಮಿಯನ್ನು ಪಡೆದುಕೊಂಡಿದೆ. ಈ ಭೂ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಅನುಮಾನಗಳಿದ್ದು, ಈ ಕುರಿತು ತನಿಖೆ ನಡೆಯಬೇಕು ಎಂದು ಒತ್ತಾಯಿಸಿದೆ.

"ಎಲ್ಲದಕ್ಕೂ ದಾಖಲೆ ಕೇಳುವ ಪ್ರಿಯಾಂಕ್ ಖರ್ಗೆ ಅವರು ತಮ್ಮ ಕುಟುಂಬದ ಭೂ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಾರ್ವಜನಿಕರ ಮುಂದೆ ಇಡಲು ಏಕೆ ಹಿಂದೇಟು ಹಾಕುತ್ತಿದ್ದಾರೆ?" ಎಂದು ಪ್ರಶ್ನಿಸಿದೆ.

ಅದೇ ವೇಳೆ, ಜಾರಿ ನಿರ್ದೇಶನಾಲಯ (ED) ತನಿಖೆ ಎದುರಿಸುವ ವಿಚಾರದಲ್ಲೂ ಬಿಜೆಪಿ ಖರ್ಗೆ ಅವರನ್ನು ಗುರಿಯಾಗಿಸಿಕೊಂಡಿದೆ. "ದಾಖಲೆಗಳು ಸರಿಯಾಗಿದ್ದರೆ ಇಡಿ ಬಗ್ಗೆ ಭಯ ಏಕೆ? ಲೆಕ್ಕ ಕೊಡಿ. ರಾಜ್ಯದ ಗೃಹ ಸಚಿವರಾಗಿರುವ ನಿಮಗೂ ಸಾರ್ವಜನಿಕರ ಮುಂದೆ ಹೊಣೆಗಾರಿಕೆ ಇರಬೇಕಲ್ಲವೇ?" ಎಂದು ತೀವ್ರವಾಗಿ ಟೀಕಿಸಿದೆ.

ಭ್ರಷ್ಟಾಚಾರದ ಆರೋಪಗಳಿಂದ ಪಾರದರ್ಶಕವಾಗಿ ಹೊರಬರಲು ಪ್ರಿಯಾಂಕ್ ಖರ್ಗೆ ಅವರು ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಬಹಿರಂಗಪಡಿಸಬೇಕು ಎಂದೂ ಇದೇ ವೇಳೆ ಆಗ್ರಹಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಡಿಕೆಶಿ ಜೊತೆ ಯಾವುದೇ ವ್ಯವಹಾರಿಕ, ಆತ್ಮೀಯತೆಯಿಲ್ಲ, ಅಪಪ್ರಚಾರ ಮಾಡುವವರಿಗೆ ದೇವರೇ ಬುದ್ಧಿ ಕೊಡಲಿ: ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ

ರಾಮ ಮಂದಿರ ದೇಣಿಗೆ ಲೂಟಿ ಪ್ರಕರಣ: SIT ತನಿಖೆ ವಿರುದ್ಧ ಅಯೋಧ್ಯೆ ಅರ್ಚಕರು ಆಕ್ರೋಶ; ಸಿಎಂ ಯೋಗಿಗೆ ಹೇಳಿದ್ದೇನು?

ಪ್ರಧಾನಿ ಮೋದಿ ಬಳಿಕ ರಾಷ್ಟ್ರಪತಿಗಳ ಭೇಟಿಯಾದ ಅಮಿತ್ ಶಾ; ಹೆಚ್ಚಿದ ಕುತೂಹಲ, ಕೇಂದ್ರ ಸಚಿವ ಸಂಪುಟದಲ್ಲಿ ಮೇಜರ್ ಸರ್ಜರಿ?

ಶತಮಾನದ ಭೀಕರ ಭೂಕಂಪಕ್ಕೆ ನಲುಗಿದ Venezuela: 235 ಮಂದಿ ಸಾವು; ಸಾವಿರಾರು ಜನರು ನಾಪತ್ತೆ, ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ಯುದ್ಧದಲ್ಲೂ ಮಕ್ಕಳ ರಕ್ಷಣೆ ಅಗತ್ಯ, ಶಾಲೆಗಳ ಗುರಿಯಾಗಿಸುವವರ ವಿರುದ್ಧ ಇಡೀ ವಿಶ್ವ ಒಗ್ಗೂಡಲಿ: ವಿಶ್ವಸಂಸ್ಥೆಯಲ್ಲಿ ಭಾರತದ ಆಗ್ರಹ..!