ಡಿ ಕೆ ಶಿವಕುಮಾರ್  
ರಾಜಕೀಯ

ಸಿಎಂ ಕುರ್ಚಿ ಕದನ ಮಧ್ಯೆ ಡಿಕೆಶಿಯಿಂದ ಮಾ.10ಕ್ಕೆ ಡಿನ್ನರ್ ಪಾರ್ಟಿ: ಕೆಪಿಸಿಸಿ ಅಧ್ಯಕ್ಷ ಸ್ಥಾನ ತ್ಯಜಿಸುತ್ತಾರಾ ಡಿಸಿಎಂ?

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಎರಡೂ ಬಣದ ನಾಯಕರು ಸಭೆ, ಮಾತುಕತೆ ನಡೆಸುತ್ತಲೇ ಇದ್ದಾರೆ, ಹೈಕಮಾಂಡ್ ಮೇಲೆ ಯಾವ ರೀತಿ ಒತ್ತಡ ಹೇರಬೇಕೆಂದು ಡಿ ಕೆ ಶಿವಕುಮಾರ್ ಬಣದ ನಾಯಕರು ತಂತ್ರಗಾರಿಕೆ ಹೆಣೆಯುತ್ತಿದ್ದಾರೆ.

ಬೆಂಗಳೂರು: ಒಂದೆಡೆ ನಾಳೆ ಶುಕ್ರವಾರ ಸಿಎಂ ಸಿದ್ದರಾಮಯ್ಯ 2026ನೇ ಸಾಲಿನ ರಾಜ್ಯ ಬಜೆಟ್ ಮಂಡಿಸುತ್ತಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿ ಕದನಕ್ಕೆ ಬ್ರೇಕ್ ಬಿದ್ದಿಲ್ಲ. ನಾಯಕರು ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಲೇ ಇದ್ದಾರೆ,

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಎರಡೂ ಬಣದ ನಾಯಕರು ಸಭೆ, ಮಾತುಕತೆ ನಡೆಸುತ್ತಲೇ ಇದ್ದಾರೆ, ಹೈಕಮಾಂಡ್ ಮೇಲೆ ಯಾವ ರೀತಿ ಒತ್ತಡ ಹೇರಬೇಕೆಂದು ಡಿ ಕೆ ಶಿವಕುಮಾರ್ ಬಣದ ನಾಯಕರು ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಅಧಿಕಾರ ಹಂಚಿಕೆ ಬಿಕ್ಕಟ್ಟಿಗೆ ಹೈಕಮಾಂಡ್ ತೆರೆ ಎಳೆಯಬೇಕೆಂದು ಕೈ ನಾಯಕರು ಪಟ್ಟು ಹಿಡಿದಿದ್ದಾರೆ.

ಕುತೂಹಲ ಮೂಡಿಸಿದ ಡಿಸಿಎಂ ಡಿನ್ನರ್ ಮೀಟಿಂಗ್

ಇವೆಲ್ಲವುಗಳ ಮಧ್ಯೆ ಡಿಸಿಎಂ ಡಿಕೆ ಶಿವಕುಮಾರ್ ಡಿನ್ನರ್​ ಮೀಟಿಂಗ್ ಕರೆದಿದ್ದಾರೆ. ಇದೇ ಮಾರ್ಚ್ 10ರಂದು ಖಾಸಗಿ ಹೋಟೆಲ್​ನಲ್ಲಿ ಔತಣಕೂಟ ಆಯೋಜಿಸಿದ್ದಾರೆ. ನಾಳೆ ಮಾರ್ಚ್ 6ಕ್ಕೆ ಡಿ.ಕೆ.ಶಿವಕುಮಾರ್​ ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರ್ಣಗೊಳಿಸುತ್ತಿರುವುದರಿಂದ ಈ ಡಿನ್ನರ್ ಪಾರ್ಟಿ ನೀಡಲಾಗುತ್ತಿದೆ.

ಈ ಔತಣಕೂಟಕ್ಕೆ ಸಿಎಂ ಸಿದ್ದರಾಮಯ್ಯ, ಸಂಪುಟ ಸಚಿವರು, ಶಾಸಕರು, ಪರಿಷತ್‌ ಸದಸ್ಯರು ಹಾಗೂ ಕೆಲವು ಹಿರಿಯ ನಾಯಕರಿಗೂ ಆಹ್ವಾನ ನೀಡಲಾಗಿದೆ.

ಕೆಲವು ದಿನಗಳ ಹಿಂದೆ ಮಾಧ್ಯಮಗಳ ಮುಂದೆ ಮಾತನಾಡುವ ವೇಳೆ ಡಿ ಕೆ ಶಿವಕುಮಾರ್ ಪಕ್ಷದಲ್ಲಿ ಹೊಸ ಮುಖಗಳು, ಹೊಸ ನಾಯಕತ್ವ ಬರಬೇಕು, ನಾವು ಹಳಬರನ್ನೇ ನಂಬಿಕೊಂಡು ಪಕ್ಷ ಇರಬಾರದು ಎಂದು ಹೇಳಿದ್ದರು. 6 ವರ್ಷ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್‌ಗೆ ಹೊರ ರಕ್ತ ಬರಬೇಕು. ಹೊಸಬರಿಗೆ ಅವಕಾಶ ಸಿಗಬೇಕು. ನಾನು ಸ್ಟ್ರೀಟ್ ಫೈಟರ್ ಎಂದು ಡಿ ಕೆ ಶಿವಕುಮಾರ್ ಹೇಳಿದ್ದರು.

ಈ ಔತಣ ಕೂಟದ ಮೂಲಕ ಡಿ ಕೆ ಶಿವಕುಮಾರ್ ಶಾಸಕರು, ಪರಿಷತ್ ಸದಸ್ಯರು ಹಾಗೂ ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಇದಾಗಿದೆ ಎಂದು ವಿಶ್ಷೇಷಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಮಧ್ಯಪ್ರಾಚ್ಯ ಸಂಘರ್ಷ: ಇರಾನ್ ಯುದ್ಧಕ್ಕೆ ನಾನು 10ಕ್ಕೆ 15 ಅಂಕ ಕೊಡುತ್ತೇನೆ, ಅಮೆರಿಕಾ ಈಗ ಅತ್ಯಂತ ಬಲಿಷ್ಠ ಸ್ಥಿತಿಯಲ್ಲಿದೆ': Donald Trump

ರಾಜ್ಯ ಬಜೆಟ್ 2026-27: ಮದ್ಯ ತೆರಿಗೆಯಿಂದ ರಾಜ್ಯಕ್ಕೆ ಭಾರೀ ಆದಾಯ, ಆದಾಯ ಗುರಿ 45,000 ಕೋಟಿ ರೂ.ಗೆ ಹೆಚ್ಚಿಸಲು ಸರ್ಕಾರ ಚಿಂತನೆ..!

'ಮಧ್ಯಪ್ರಾಚ್ಯ ಸಂಘರ್ಷ ಎಫೆಕ್ಟ್: ಇಂಧನ ಬೆಲೆ ಬೆಲೆ ಏರಿಕೆ ಭೀತಿ, ಪೆಟ್ರೋಲ್ ಬಂಕ್‌'ಗಳಿಗೆ ಮುಗಿಬಿದ್ದ ಜನ..!

CM-ಪ್ರಧಾನಿ ಹುದ್ದೆಗೇರಿದವರು ಯಾವ ಸಾಕ್ಷಿಗುಡ್ಡೆಗಳನ್ನು ಬಿಟ್ಟು ಹೋಗಿದ್ದಾರೆ: JDSಗೆ ಡಿಕೆಶಿ ಸವಾಲು

Video: ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆ ಮೇಲೆ ಅಮೆರಿಕ ದಾಳಿ; ಕನಿಷ್ಠ 87 ನಾವಿಕರು ಸಾವು

SCROLL FOR NEXT