ಡಿಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ 
ರಾಜಕೀಯ

ಒಳ ಮೀಸಲಾತಿ ಸಂಕಷ್ಟ: ಸ್ವಪಕ್ಷದಲ್ಲೇ ಭಿನ್ನಾಭಿಪ್ರಾಯ ಸ್ಫೋಟ, ಸಮತೋಲನ ಸಾಧಿಸಲು ಸಿದ್ದು–ಡಿಕೆಶಿಗೆ ಕಸರತ್ತು..!

ಮೀಸಲಾತಿ ವಿಚಾರ ಸಂಬಂಧ ಸ್ವಪಕ್ಷದಲ್ಲೇ ಭಿನ್ನಾಭಿಪ್ರಾಯಗಳು ಮೂಡಿವೆ. ಜೊತೆಗೆ ನ್ಯಾಯಾಲಯದಲ್ಲೂ ಪ್ರಕರಣಗಳು ಬಾಕಿಯಿರುವುದರಿಂದ ಸರ್ಕಾರಕ್ಕೆ ನಿರ್ಧಾರ ಕೈಗೊಳ್ಳುವುದು ಸುಲಭವಿಲ್ಲದ ಪರಿಸ್ಥಿತಿ ಉಂಟಾಗಿದೆ.

ಬೆಂಗಳೂರು: (ಎಸ್‌ಸಿ) ಒಳ ಮೀಸಲಾತಿ ವಿಚಾರ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ‘ತೂಗು ಕತ್ತಿ’ಯಂತೆ ಪರಿಣಮಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರಿಗೆ ಈ ವಿಷಯದಲ್ಲಿ ರಾಜಕೀಯ ಹಾಗೂ ಕಾನೂನು ಸವಾಲುಗಳು ಎದುರಾಗಿವೆ.

ಮೀಸಲಾತಿ ವಿಚಾರ ಸಂಬಂಧ ಸ್ವಪಕ್ಷದಲ್ಲೇ ಭಿನ್ನಾಭಿಪ್ರಾಯಗಳು ಮೂಡಿವೆ. ಜೊತೆಗೆ ನ್ಯಾಯಾಲಯದಲ್ಲೂ ಪ್ರಕರಣಗಳು ಬಾಕಿಯಿರುವುದರಿಂದ ಸರ್ಕಾರಕ್ಕೆ ನಿರ್ಧಾರ ಕೈಗೊಳ್ಳುವುದು ಸುಲಭವಿಲ್ಲದ ಪರಿಸ್ಥಿತಿ ಉಂಟಾಗಿದೆ.

ಈ ಸಮಸ್ಯೆ ಪರಿಹಾರವಾಗದಿದ್ದರೆ 2028ರ ವಿಧಾನಸಭಾ ಚುನಾವಣೆಯವರೆಗೂ ರಾಜಕೀಯ ಪರಿಣಾಮ ಎದುರಾಗುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

ಎಸ್‌ಸಿ ಒಳ ಮೀಸಲಾತಿ ಆಯೋಗದ ಅಧ್ಯಕ್ಷ ನಾಗಮೋಹನ್ ದಾಸ್ ಅವರು ಎಸ್‌ಸಿ ಸಮುದಾಯಕ್ಕೆ ಒಟ್ಟು ಶೇ.17ರಷ್ಟು ಒಳ ಮೀಸಲಾತಿ ನೀಡುವಂತೆ ಶಿಫಾರಸು ಮಾಡಿದ್ದರು.

ಶನಿವಾರ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು, ಭೇಟಿ ವೇಳೆ ಸರ್ಕಾರಿ ಇಲಾಖೆಗಳಲ್ಲಿನ 56,432 ಖಾಲಿ ಹುದ್ದೆಗಳನ್ನು ಈ ಮೀಸಲಾತಿ ಅನ್ವಯ ಭರ್ತಿ ಮಾಡುವ ಬಗ್ಗೆ ಚರ್ಚೆ ನಡೆದಿರಬಹುದು ಎಂಬ ಊಹಾಪೋಹಗಳು ವ್ಯಕ್ತವಾಗಿದ್ದವು. ಆದರೆ, ಇದನ್ನು ನಾಗಮೋಹನ್ ದಾಸ್ ಅವರು ನಿರಾಕರಿಸಿದ್ದಾರೆ.

ಸಚಿವ ಸಂಪುಟ ಡಿಕೆ ಶಿವಕುಮಾರ್ ಒಳ ಮೀಸಲಾತಿಗೆ ಬೆಂಬಲ ವ್ಯಕ್ತಪಡಿಸಿದ್ದರೆಂದು ಮೂಲಗಳು ತಿಳಿಸಿವೆ. ಈ ಮಧ್ಯೆ ಎಸ್‌ಸಿ ಎಡಪಂಥದ ನಾಯಕರು ಆಗಿರುವ ಸಚಿವರಾದ ಕೆ.ಹೆಚ್. ಮುನಿಯಪ್ಪ ಹಾಗೂ ಆರ್.ಬಿ. ತಿಮ್ಮಾಪುರ ಅವರು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ, ಒಳ ಮೀಸಲಾತಿ ಜಾರಿಗೆ ತಂದು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಮನವಿ ಮಾಡಿದ್ದಾರೆ.

ಆದರೆ ಬೋವಿ ಮತ್ತು ಲಂಬಾಣಿ ಸೇರಿದಂತೆ ಕಾಂಗ್ರೆಸ್‌ನೊಳಗಿನ ಎಸ್‌ಸಿ ಬಲಪಂಥೀಯ ಸಮುದಾಯದ ಕೆಲವು ನಾಯಕರು, ಕಾನೂನು ಸವಾಲುಗಳಿಗೆ ಹೆದರಿ ಸರ್ಕಾರವು ಶೇ.50 ಮೀಸಲಾತಿಗೆ ಮರಳುತ್ತಿರುವುದರಿಂದ ಶೇ.15 ಮೀಸಲಾತಿಯೊಳಗೆ ಒಳ ಮೀಸಲಾತಿಯನ್ನು ಜಾರಿಗೆ ತರಲು ಸಾಧ್ಯವಿಲ್ಲ ಎಂದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗೃಹ ಸಚಿವ ಪರಮೇಶ್ವರ್ ಮತ್ತು ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಕೂಡ ಈ ವಿಷಯದಲ್ಲಿ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದು, ಅವರು ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದೀಗ ಕರ್ನಾಟಕದಲ್ಲಿ ಎಸ್‌ಸಿ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹಾಗೂ ಎಸ್‌ಟಿ ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಹೆಚ್ಚಿಸಲಾಗಿದ್ದು, ಇತರ ಹಿಂದುಳಿದ ವರ್ಗಗಳಿಗೆ ಶೇ,32 ಮೀಸಲಾತಿ ಇರುವುದರಿಂದ ಒಟ್ಟು ಮೀಸಲಾತಿ ಪ್ರಮಾಣ ಶೇ.56ಕ್ಕೆ ತಲುಪಿದೆ. ಇದು ಸಂವಿಧಾನದಲ್ಲಿ ನಿಗದಿಪಡಿಸಿರುವ ಶೇ.50 ಮಿತಿಯನ್ನು ಮೀರುವ ಕಾರಣ ಕಾನೂನು ಸವಾಲು ಎದುರಾಗುವ ಸಾಧ್ಯತೆ ಇದೆ.

ಆದರೆ ರಾಜ್ಯಪಾಲ ಧಾವರ್ ಚಂದ್ ಗೆಹ್ಲೋಟ್ ಅವರು ಇತ್ತೀಚೆಗೆ ಈ ಮಸೂದೆಗೆ ಒಪ್ಪಿಗೆ ನೀಡಿರುವುದರಿಂದ, ಸರ್ಕಾರವು ಶೇ.15 ಮೀಸಲಾತಿಯೊಳಗೆ ಒಳ ಮೀಸಲಾತಿ ಜಾರಿಗೆ ತರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia conflict: ಇರಾನ್‌ನ ಪ್ರಮುಖ ತೈಲ ಶುದ್ಧೀಕರಣ ಘಟಕ ಮೇಲೆ ಇಸ್ರೇಲ್ ದಾಳಿ, ಗಲ್ಫ್ ರಾಷ್ಟ್ರಗಳ ಮೇಲೆ ಟೆಹ್ರಾನ್ ಯುದ್ಧ-Video

ಪತ್ನಿಯಿಂದ ವಿಚ್ಛೇದನ ಸುದ್ದಿ ಬೆನ್ನಲ್ಲೇ ತಮಿಳು ನಾಡು ಮಹಿಳೆಯರಿಗೆ TVK ಮುಖ್ಯಸ್ಥ ವಿಜಯ್ ಭರಪೂರ ಘೋಷಣೆ: ಅಧಿಕಾರಕ್ಕೆ ಬಂದರೆ ಏನೇನು ಕೊಡ್ತಾರಂತೆ ನೋಡಿ!-Video

ಬೆಂಗಳೂರಿನಲ್ಲಿ ತಾಪಮಾನ ಏರಿಕೆ: ಬಿಸಿಲ ಝಳಕ್ಕೆ ಜನತೆ ತತ್ತರ, ‘AC City’ ಹೆಗ್ಗಳಿಕೆಗೆ ದಕ್ಕೆ..!

ಅಲೆಗಳಿಗೇ ಸವಾಲು; ಪುರುಷರ ವೃತ್ತಿಯಲ್ಲಿ ಮಂಗಳೂರು ಯುವತಿ ದಿಟ್ಟ ಹೆಜ್ಜೆ: ಆಳ ಸಮುದ್ರ ಮೀನುಗಾರಿಕೆಯಲ್ಲಿ ಪ್ರಾಪ್ತಿ ಮೆಂಡನ್ ಸಾಧನೆ

ಅರ್ಧ ದಿನ ಆತಂಕ ಸೃಷ್ಟಿಸಿದ ಬಾಲಕ: ಕಾಣೆಯಾದ ಪೋರನಿಗಾಗಿ ಇಡೀ ಊರಿಗೆ ಊರೇ ಹುಡುಕಾಟ-ಆತಂಕ; ಕೊನೆಗೆ ಮನೆಯಲ್ಲೇ ನಿದ್ರಿಸುತ್ತಿದ್ದ ಸ್ಥಿತಿಯಲ್ಲಿ ಪತ್ತೆ..!

SCROLL FOR NEXT