ಡಿ ಕೆ ಶಿವಕುಮಾರ್  
ರಾಜಕೀಯ

'ಇದು ದೊಡ್ಡ ಸಂಚು; ಡಿ.ಎನ್ ಜೀವರಾಜ್ ಪಿತೂರಿ ನಡೆಸಿದ್ದಾರೆ, ಕಾನೂನು ಹೋರಾಟ ಮಾಡುತ್ತೇವೆ': ಡಿ.ಕೆ ಶಿವಕುಮಾರ್; Video

ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿನ್ನೆಯಿಂದ ನಡೆದ ಬೆಳವಣಿಗೆ ಬಗ್ಗೆ ನನಗೆ ವರದಿ ಬಂದಿದೆ, ನಾನು ಪರಿಶೀಲನೆ ಮಾಡುತ್ತಿದ್ದೇನೆ ಎಂದರು.

ಬೆಂಗಳೂರು: ಶೃಂಗೇರಿ ಕ್ಷೇತ್ರದ ಮತ ಎಣಿಕೆ ದೊಡ್ಡ ಪಿತೂರಿ, ಇಡೀ ದೇಶಕ್ಕೆ ಇಂತಹ ಕ್ರಿಮಿನಲ್ ಚಟುವಟಿಕೆ ಮಾಡುತ್ತಾರೆ ಎಂದು ಊಹಿಸಲೂ ಸಾಧ್ಯವಿಲ್ಲ. ಮಾಜಿ ಶಾಸಕ ಡಿ.ಎನ್ ಜೀವರಾಜ್ ಅವರು ಯಾವ ರೀತಿ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡು ಪಿತೂರಿ ನಡೆಸಿದ್ದಾರೆ ಎಂಬುದಕ್ಕೆ ಶೃಂಗೇರಿ ಕ್ಷೇತ್ರದ ಅಂಚೆ ಮತ ಎಣಿಕೆ ದೊಡ್ಡ ಸಾಕ್ಷಿ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿನ್ನೆಯಿಂದ ನಡೆದ ಬೆಳವಣಿಗೆ ಬಗ್ಗೆ ನನಗೆ ವರದಿ ಬಂದಿದೆ, ನಾನು ಪರಿಶೀಲನೆ ಮಾಡುತ್ತಿದ್ದೇನೆ, ಬ್ಯಾಲೆಟ್ ಬಾಕ್ಸ್ ನ್ನು ತೆರೆಸಿ ಏನೆಲ್ಲಾ ಅಕ್ರಮ ಮಾಡಬಹುದು, ಕೋರ್ಟ್ ಗೆ ಹೋಗಿ ಬರೀ ಅಂಚೆ ಮತಎಣಿಕೆಯನ್ನು ಮಾತ್ರ ಮತ್ತೆ ಎಣಿಕೆ ಮಾಡಿಸಿರುವುದು, ಅವರ ಏಜೆಂಟ್ ಸಹಿ ಮಾಡಿದ್ದನ್ನು ತಿರುಚಿದ್ದು ಇಡೀ ದೇಶಕ್ಕೆ ವ್ಯವಸ್ಥಿತ ಅಪರಾಧವಿದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನಗೆ ಬಂದಿರುವ ವರದಿ ನೋಡಿಕೊಂಡು ಕಾನೂನುಪ್ರಕಾರ ಹೋರಾಟ ಮಾಡುತ್ತೇವೆ, ಸರ್ಕಾರದ ಮಟ್ಟದಲ್ಲಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಮುಂದುವರಿಯುತ್ತೇವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವರ್ತನೆ ಬದಲಿಸಿಕೊಳ್ಳಿ, ಒಪ್ಪಂದ ಸಂಪೂರ್ಣವಾಗಿ ಪಾಲಿಸಬೇಕು: ಇರಾನ್‌ಗೆ JD ವ್ಯಾನ್ಸ್ ಎಚ್ಚರಿಕೆ

ಕರ್ನಾಟಕ ವಿಧಾನ ಪರಿಷತ್ ಚುನಾವಣೆ: 7ರಲ್ಲಿ 5 ಸ್ಥಾನ ಕಾಂಗ್ರೆಸ್ ಪಾಲು, ಬಿಜೆಪಿಗೆ 2, ಜೆಡಿಎಸ್‌ಗೆ ಅಡ್ಡ ಮತದಾನದ ಆಘಾತ

ಪರಿಷತ್ ಚುನಾವಣೆ: ಬಿಜೆಪಿಯ 3 ಶಾಸಕರಿಂದ ಅಡ್ಡಮತದಾನ, ಸಿಕ್ಕೇ ಸಿಗ್ತಾರೆ.. ಶಿಸ್ತುಕ್ರಮ ಗ್ಯಾರಂಟಿ: R Ashok

BJP-JDS ಅಡ್ಡ ಮತದಾನದಿಂದ Congress 5ನೇ ಅಭ್ಯರ್ಥಿ ಜಯ; ಇದು ಪ್ರಜಾಪ್ರಭುತ್ವದ ಗೆಲುವು: ಸುರ್ಜೇವಾಲಾ

Bihar Horror: ಯಜಮಾನನ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ, ಗುಪ್ತಾಂಗದಲ್ಲಿ ಜೀವಂತ ಬುಲೆಟ್, ಕಲ್ಲು, ಮರದ ತುಂಡು ಪತ್ತೆ!

SCROLL FOR NEXT