ಜಿಎಸ್ ನಾಗರಾಜ್ 
ರಾಜಕೀಯ

ತಮಿಳುನಾಡು, ಕರ್ನಾಟಕ ಕಾಂಗ್ರೆಸ್ ಸಮಿತಿಗೆ ಪ್ರಮುಖ ನೇಮಕಾತಿ; ಜಿಎಚ್ ನಾಗರಾಜ್ KPCC ನೂತನ ಖಜಾಂಚಿ!

ಆರ್ ಎಲ್ ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷರಾಗಿರುವ ಚಿಕ್ಕಬಳ್ಳಾಪುರದ ಹಿರಿಯ ಕಾಂಗ್ರೆಸ್ ನಾಯಕ ನಾಗರಾಜ್ ಅವರ ನೇಮಕಾತಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅನುಮೋದನೆ ನೀಡಿದ್ದಾರೆ.

ನವದೆಹಲಿ: ಕಾಂಗ್ರೆಸ್ ಕರ್ನಾಟಕ ಘಟಕಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಂಸ್ಥಿಕ ನೇಮಕಾತಿಯನ್ನು ಘೋಷಿಸಿದ್ದು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಖಜಾಂಚಿಯಾಗಿ ಹಿರಿಯ ನಾಯಕ ಜಿ. ಎಚ್. ನಾಗರಾಜ್ ಅವರನ್ನು ನೇಮಕ ಮಾಡಲಾಗಿದೆ.

ಆರ್ ಎಲ್ ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷರಾಗಿರುವ ಚಿಕ್ಕಬಳ್ಳಾಪುರದ ಹಿರಿಯ ಕಾಂಗ್ರೆಸ್ ನಾಯಕ ನಾಗರಾಜ್ ಅವರ ನೇಮಕಾತಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅನುಮೋದನೆ ನೀಡಿದ್ದಾರೆ. ಈ ನೇಮಕಾತಿಯು ತಕ್ಷಣದಿಂದಲೇ ಜಾರಿಗೆ ಬರಲಿದೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನು ತಮಿಳುನಾಡು ಪ್ರದೇಶ ಕಾಂಗ್ರೆಸ್ ಸಮಿತಿಯ(ಟಿಎನ್‌ಪಿಸಿಸಿ) ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷರಾಗಿ ಆನಂದ್ ಶ್ರೀನಿವಾಸನ್ ಅವರನ್ನು ನೇಮಕ ಮಾಡಲಾಗಿದೆ.

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ(ಎಐಸಿಸಿ) ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಈ ನೇಮಕಾತಿ ಪ್ರಸ್ತಾವನೆಗಳಿಗೆ ಕಾಂಗ್ರೆಸ್ ಅಧ್ಯಕ್ಷರು ಅನುಮೋದನೆ ನೀಡಿದ್ದು, ಇವು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗಾಗಿ ಕಾಂಗ್ರೆಸ್ ಪಕ್ಷವು 'ಸ್ಕ್ರೀನಿಂಗ್ ಸಮಿತಿ'ಗಳನ್ನು(ಪರಿಶೀಲನಾ ಸಮಿತಿಗಳು) ರಚಿಸಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ.

ಸಂಬಂಧಿತ ರಾಜ್ಯಗಳಿಗೆ ಈ ಸಮಿತಿಗಳನ್ನು ರಚಿಸಲು ಕಾಂಗ್ರೆಸ್ ಅಧ್ಯಕ್ಷರು ಅನುಮೋದನೆ ನೀಡಿದ್ದು, ಇವು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಉತ್ತರಾಖಂಡಕ್ಕೆ ದೀಪಾ ದಾಸ್‌ಮುನ್ಸಿ ಅವರನ್ನು ಸ್ಕ್ರೀನಿಂಗ್ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ; ಅನಿಲ್ ಚೌಧರಿ ಮತ್ತು ಪಾಲ್ ಭಾಯ್ ಅಂಬಾಲಿಯಾ ಅವರು ಈ ಸಮಿತಿಯ ಸದಸ್ಯರಾಗಿರುತ್ತಾರೆ.

ಉತ್ತರ ಪ್ರದೇಶಕ್ಕೆ ಅಜಯ್ ಮಾಕೆನ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಅಸ್ಲಾಂ ಶೇಖ್ ಮತ್ತು ಬಿ.ವಿ. ಶ್ರೀನಿವಾಸ್ ಅವರು ಸದಸ್ಯರಾಗಿರುತ್ತಾರೆ. ಪಂಜಾಬ್‌ಗೆ ಸಿರಿವೆಲ್ಲಾ ಪ್ರಸಾದ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಸಚಿನ್ ಸಾವಂತ್ ಮತ್ತು ನಿವೇದಿತ್ ಆಳ್ವ ಅವರು ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಗೋವಾಗೆ ಕೆ.ಜೆ. ಜಾರ್ಜ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಸತೇಜ್ ಡಿ. ಪಾಟೀಲ್ ಮತ್ತು ಶಫಿ ಪರಂಬಿಲ್ ಅವರು ಸದಸ್ಯರಾಗಿರುತ್ತಾರೆ. ಹಾಗೆಯೇ, ಮಣಿಪುರಕ್ಕೆ ಬಿ.ಎಂ. ಸಂದೀಪ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಹಿಬಿ ಈಡನ್ ಮತ್ತು ರಾಜೇಶ್ ಠಾಕೂರ್ ಅವರು ಸದಸ್ಯರಾಗಿರುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮತದಾರರ ಧರ್ಮದ ಬಗ್ಗೆ ಯಾವುದೇ ಡೇಟಾ ಇಲ್ಲ: ಹಿಂದೂಗಳು ನಾಪತ್ತೆ ಎಂದ CM ಯೋಗಿಗೆ CEO ಕೌಂಟರ್‌!

'ಚಿಕ್ಕ ವಯಸ್ಸಿನಲ್ಲಿ ದೊಡ್ಡ ತಪ್ಪು ಮಾಡಿದೆ': ಕಿಸ್ ಬೆಡಗಿ ಶ್ರೀಲೀಲಾ ಶಾಕಿಂಗ್ ತಪ್ಪೊಪ್ಪಿಗೆ!

ಮನಿಲಾದಲ್ಲಿ ಕ್ವಾಡ್ ಶೃಂಗಸಭೆ 2026: ಪ್ರಧಾನಿ ಮೋದಿ ಗ್ರೇಟ್ ಲೀಡರ್, 'ವೆರಿ ಟಫ್ ಮ್ಯಾನ್' ಎಂದ ಡೊನಾಲ್ಡ್ ಟ್ರಂಪ್! Video

IPL 2027: ಜೇಕಬ್‌ ಬೆಥೆಲ್‌ ಸೇರಿ ಆರು ಆಟಗಾರರಿಗೆ RCB ಗೇಟ್ ಪಾಸ್! ಉಳಿದುಕೊಂಡವರ ಸಂಪೂರ್ಣ ಪಟ್ಟಿ!

ಚಿನ್ನದ ಬೆಲೆ ಭಾರೀ ಕುಸಿತ: ಕಳೆದ 10 ತಿಂಗಳಲ್ಲಿ ₹42 ಸಾವಿರ ಇಳಿಕೆ; ಇನ್ನೂ ಕಮ್ಮಿ ಆಗುತ್ತಾ ಬಂಗಾರ?