ತನ್ವೀರ್ ಸೇಠ್ 
ರಾಜಕೀಯ

CM ರಾಜಕೀಯ ಕಾರ್ಯದರ್ಶಿ ಹುದ್ದೆ ಬೇಡ; ಅದು ನನ್ನ ಹಿರಿತನಕ್ಕೆ ತಕ್ಕುದಲ್ಲ: ತನ್ವೀರ್ ಸೇಠ್ ಆಕ್ರೋಶ

ಇಂದು ಒಟ್ಟು 12 ಶಾಸಕರು ಹಾಗೂ ಮೂವರು ಪಕ್ಷದ ಮುಖಂಡರಿಗೆ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆ ನೀಡಲಾಗಿದೆ. ಶಾಸಕ ತನ್ವೀರ್ ಸೇಠ್ ಅವರನ್ನು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಮೈಸೂರು: ರಾಜ್ಯ ಸರ್ಕಾರ ಖಾಲಿ ಇರುವ ವಿವಿಧ ನಿಗಮ-ಮಂಡಳಿ ಹಾಗೂ ಕೆಲವು ಆಯಕಟ್ಟಿನ ಹುದ್ದೆಗಳಿಗೆ ಹಿರಿಯ ಶಾಸಕರನ್ನು ನೇಮಕ ಮಾಡಿದ ಬೆನ್ನಲ್ಲೇ ಅಸಮಾಧಾನದ ಸ್ಫೋಟಗೊಂಡಿದೆ.

ಇಂದು ಒಟ್ಟು 12 ಶಾಸಕರು ಹಾಗೂ ಮೂವರು ಪಕ್ಷದ ಮುಖಂಡರಿಗೆ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆ ನೀಡಲಾಗಿದೆ. ಶಾಸಕ ತನ್ವೀರ್ ಸೇಠ್ ಅವರನ್ನು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಆದರೆ ತನ್ವೀರ್ ಸೇಠ್ ಅವರು ತಮಗೆ ನೀಡಿದ ಹುದ್ದೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆ ನನ್ನ ಹಿರಿತನಕ್ಕೆ ತಕ್ಕುದಲ್ಲ. ಅದು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವ ಹುದ್ದೆಯಲ್ಲ. ಈ ಹುದ್ದೆಯಿಂದ ನನಗೆ ತೃಪ್ತಿಯಿಲ್ಲ ಎಂದು ಮೈಸೂರಿನಲ್ಲಿ ಹೇಳಿದ್ದಾರೆ.

ನನಗೆ ಈ ಹುದ್ದೆ ಬೇಡ

ನನಗೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ಬೇಡ ಎಂದು ನಾನು ಹಿಂದಿನಿಂದಲೂ ಹೇಳಿಕೊಂಡೇ ಬಂದಿದ್ದೇನೆ. ಮುಖ್ಯಮಂತ್ರಿ ಅವರಿಗೆ ರಾಜಕೀಯವಾಗಿ ಶಕ್ತಿ ತುಂಬುವ ಕೆಲಸವನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದೇವೆ. ನನ್ನ ಹಿರಿತನಕ್ಕೆ ತಕ್ಕ ಸ್ಥಾನವನ್ನು ಕಲ್ಪಿಸುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ ಎಂಬ ಮಾಹಿತಿ ಬಂದಿದೆ. ಆದರೆ ಈ ಹುದ್ದೆ ನನಗೆ ಸೂಕ್ತವಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೇಶದ ಅತಿ ಉದ್ದದ ನದಿ ಸೇತುವೆ, ಆರು ಪಥದ 'ನಿತೀಶ್​​ ಸೇತು' ಉದ್ಘಾಟಿಸಿದ ಪ್ರಧಾನಿ ಮೋದಿ

ಬೈಕ್ ಟ್ಯಾಕ್ಸಿಗೆ ಸುಪ್ರೀಂ ಗ್ರೀನ್ ಸಿಗ್ನಲ್: ಕಠಿಣ ನಿಯಮ ಜಾರಿಗೆ ಸರ್ಕಾರ ಸಿದ್ಧತೆ; ಯೆಲ್ಲೋ ಬೋರ್ಡ್, ವಿಮೆ, GPS ಕಡ್ಡಾಯ?

‘50% Owner Of Maruti’: ಸೋನಿಯಾ ಗಾಂಧಿಯೇ 'ಮಾರುತಿ ಕಂಪನಿಯ ನಿಜವಾದ ಮಾಲೀಕರು'; ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆರೋಪಗಳ ಸುರಿಮಳೆ! Video

ನಿಲ್ಲಿಸಿದ್ದ ರೈಲಿನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ; ಗೋಲ್ಡ್ ರಿಂಗ್ ಕ್ಲೂ; ಪೊಲೀಸರು ಪ್ರಕರಣ ಭೇದಿಸಿದ್ದೆ ರೋಚಕ!

ಹಾವೇರಿ: ಮಧ್ಯರಾತ್ರಿ ಆಸ್ಪತ್ರೆ ವಾರ್ಡ್ ಗೆ ನುಗ್ಗಿದ ಕಾಮುಕ, ಮಹಿಳೆಯ ಬ್ಲೌಸ್ ಒಳಗೆ ಕೈ ಹಾಕಿ ಮೊಬೈಲ್, ಪರ್ಸ್ ಕದಿಯಲು ಯತ್ನ, CCTVಯಲ್ಲಿ ಕಳ್ಳಾಟ ಸೆರೆ!