ಶಿವಗಂಗಾ ಬಸವರಾಜ್  
ರಾಜಕೀಯ

ನಾನು ಕೂಡ ಮಾಡಾಳ್‌ ವಿರೂಪಾಕ್ಷಪ್ಪ ಕಾಲಿಗೆ ಬಿದ್ದು, ರಾಜಕೀಯ ಗುರುಗಳು ಅವರೇ ಎಂದರೆ ಅದು ಹೊಂದಾಣಿಕೆ ರಾಜಕೀಯವೇ?: ಶಿವಗಂಗಾ ಬಸವರಾಜ್‌

ಪರಿಷತ್ ಅಭ್ಯರ್ಥಿ ಕೆಎಂ ಸುರೇಶ್, ನಾನು ಹಾಗೂ ಸಚಿವರು ಪರಿಚಯಸ್ಥರು. ಹಿರಿಯರು ಎಂದು ಕಾಲಿಗೆ ಬೀಳುವುದು ಸಹಜ. ಆ ವಿಡಿಯೋ ವೈರಲ್ ಮಾಡುವು ಸರಿಯಲ್ಲ ಎಂದರು.

ದಾವಣಗೆರೆ: ನಾನು ಕೂಡ ಬಿಜೆಪಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಕಾಲಿಗೆ ಬೀಳುತ್ತೇನೆ. ನನ್ನ ರಾಜಕೀಯ ಗುರುಗಳು ಅವರೇ ಎಂದು ಹೇಳುತ್ತೇನೆ. ಹಾಗೆ ಮಾಡಿದ ಮಾತ್ರಕ್ಕೆ ಇದು ಹೊಂದಾಣಿಕೆ ರಾಜಕೀಯವಾಗುತ್ತದೆಯೇ ಎಂದು ಶಾಸಕ ಶಿವಗಂಗಾ ಬಸವರಾಜ್‌ ಮಂಗಳವಾರ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಅವರ ಕಾಲಿಗೆ ಬಿಜೆಪಿ ಅಭ್ಯರ್ಥಿ ನಮಸ್ಕರಿಸಿದ ವಿಡಿಯೋ ವೈರಲ್‌ ಆಗುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು.

ಪರಿಷತ್ ಅಭ್ಯರ್ಥಿ ಕೆಎಂ ಸುರೇಶ್, ನಾನು ಹಾಗೂ ಸಚಿವರು ಪರಿಚಯಸ್ಥರು. ಹಿರಿಯರು ಎಂದು ಕಾಲಿಗೆ ಬೀಳುವುದು ಸಹಜ. ಆ ವಿಡಿಯೋ ವೈರಲ್ ಮಾಡುವು ಸರಿಯಲ್ಲ. ಹಿಂದೂ ಸಂಪ್ರದಾಯದಲ್ಲಿ ಹಿರಿಯರ ಕಾಲಿಗೆ ಬೀಳುವುದು ಸಾಮಾನ್ಯ ಸಂಗತಿ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಇಸ್ಪೀಟ್, ಮಟ್ಕಾ ದಂಧೆ ಹೆಚ್ಚಾಗಿದೆ ಎಂದು ಗೃಹ ಸಚಿವರಿಗೆ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪತ್ರ ಬರೆದಿದ್ದೇನೆ ಆದರೆ ಸಹಿ ಹಾಕಿ ಕಳಿಸಿಲ್ಲ. ಚನ್ನಗಿರಿ ಅಷ್ಟೇ ಅಲ್ಲ, ಇಡೀ ಜಿಲ್ಲೆಯಲ್ಲಿ ಇಸ್ಪೀಟ್, ಮಟ್ಕಾ ದಂಧೆ ಜಾಸ್ತಿಯಾಗಿದೆ. ಇದರಿಂದ ಮನೆ ಮಕ್ಕಳು ಹಾಳಾಗುತ್ತಿದ್ದಾರೆ. ಅರ್ಥಿಕ ಪರಿಸ್ಥಿತಿ ಕೆಡುತ್ತಿದೆ ಎಂದು ಜನರು ನನ್ನ ಬಳಿ ಹೇಳುತ್ತಿದ್ದಾರೆ. ಇದರ ಬಗ್ಗೆ ಎಸ್‌ಪಿಯಿಂದ ಹಿಡಿದು ಡಿಜಿ ಸಲೀಂ ಅವರಿಗೂ ಮನವಿ ಮಾಡಿದರೂ ಕೂಡ ಕಡಿಮೆಯಾಗಿಲ್ಲ ಎಂದರು.

ನಮ್ಮ ಜಿಲ್ಲೆಯ ಎಸ್‌ಪಿ ಹಾಗೂ ಪೂರ್ವ ವಲಯ ಐಜಿಪಿಯವರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಸಿಎಂ ಹಾಗೂ ಗೃಹ ಸಚಿವರಿಗೆ ಮನವಿ ಮಾಡುತ್ತೇನೆ. ಇಲ್ಲ ಸಿಎಂ ಹಾಗೂ ಗೃಹ ಸಚಿವರೇ ಬಂದು ಅಕ್ರಮ ಚಟುವಟಿಕೆ ನಿಲ್ಲಿಸಬೇಕು. ಇದನ್ನು ಕಡಿಮೆ ಮಾಡದಿದ್ದರೆ ನಾನೇ ಹೋರಾಟಕ್ಕೆ ಇಳಿಯುತ್ತೇನೆ ಎಂದು ಎಚ್ಚರಿಸಿದರು.

ಗೃಹಲಕ್ಷ್ಮಿ ಹಣವನ್ನು ಹೆಣ್ಣು ಮಕ್ಕಳಿಂದ ಕಸಿದುಕೊಂಡು ಹೋಗುವ ಪ್ರಕರಣಗಳಿವೆ. ಮಗಳ ಮದುವೆಗೆ ಇಟ್ಟಿದ್ದ ಒಡವೆಗಳನ್ನು ಅಡವಿಟ್ಟು ಜೂಜಾಡಿದ್ದಾರೆ. ಇನ್ನೊಂದು ವಿಡಿಯೋ ಬಂದರೆ ನಾನೇ ಎಸ್‌ಪಿ ಅಫೀಸ್ ಮುಂದೆ ಕೂರುತ್ತೇನೆ. ಇಂದು ಸಿಎಂ ಹಾಗೂ ಗೃಹ ಸಚಿವರಿಗೆ ಪತ್ರ ನೀಡುತ್ತೇನೆ. ನಾನು ಹೇಳಿದ ತಕ್ಷಣ ಅಲ್ಲೊಂದು ಇಲ್ಲೊಂದು ಸಣ್ಣ ಪ್ರಮಾಣದ ದಾಳಿ ನಡೆಸಿದ್ದಾರೆ. ಅದ್ದರಿಂದ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯಲು ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕದ ಅಂತಿಮ ಮತದಾರರ ಪಟ್ಟಿ ಪ್ರಕಟ; ಒಟ್ಟು ಮತದಾರರು 4.55 ಕೋಟಿ, 99 ಲಕ್ಷಕ್ಕೂ ಹೆಚ್ಚು ಹೆಸರು ಡಿಲೀಟ್!

35 ಎಸೆತಗಳಲ್ಲಿ 100 ರನ್: T20 ಕ್ರಿಕೆಟ್‌ನಲ್ಲಿ ಮತ್ತೊಂದು ದಾಖಲೆ ಬರೆದ ಅಭಿಷೇಕ್ ಶರ್ಮಾ!

'ಬಟ್ಟೆ ಹರಿದಿತ್ತು, ರಕ್ತಸ್ರಾವವಾಗುತ್ತಿತ್ತು': ಮಾಜಿ ಮಿಸ್ ಸ್ವಿಟ್ಜರ್ಲ್ಯಾಂಡ್ ಮೇಲೆ ಡೊನಾಲ್ಡ್ ಟ್ರಂಪ್ 'ಕ್ರೂರ' ಅತ್ಯಾಚಾರ!

ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ: ಮಾತು ಮರೆತ ಸರ್ಕಾರ; ಮಸೂದೆ ಮಂಡಿಸಲು ಹಿಂದೇಟು

ಡಿಸಿಎಂ ಪರಮೇಶ್ವರ್ ಆರೋಗ್ಯದಲ್ಲಿ ಏರುಪೇರು: ಸಿಎಂ ಸೇರಿದಂತೆ ಹಲವು ಸಚಿವರು ಆಸ್ಪತ್ರೆಗೆ ದೌಡು!