ನಿಖಿಲ್ ಕುಮಾರಸ್ವಾಮಿ 
ರಾಜಕೀಯ

ಸುಶಿಕ್ಷಿತ ಶಿಕ್ಷಕರಿಂದ ಬ್ಯಾಲಟ್ ಮೂಲಕ ಮತ ಚಲಾವಣೆ: ಈಗ ಬ್ಯಾಲಟ್ ಪೇಪರ್ ಹ್ಯಾಕ್ ಅಂತೀರಾ? ರಾಹುಲ್ ಗೆ ನಿಖಿಲ್ ಪ್ರಶ್ನೆ

ಪ್ರಿಯ ರಾಹುಲ್ ಗಾಂಧಿಯವರೇ, ದೂಷಿಸಲು ಇವಿಎಂ ಇಲ್ಲ, ಸರ್ಕಾರಿ ಯಂತ್ರ ನಿಮ್ಮ ಪಾರ್ಟಿಯ ಕೈಯಲ್ಲೇ ಇತ್ತು. ಚುನಾವಣೆಯು ಬ್ಯಾಲಟ್ ಪೇಪರ್’ಮೂಲಕವೇ ನಡೆಯಿತು.

ಬೆಂಗಳೂರು : ಕರ್ನಾಟಕದ ನಾಲ್ಕು ವಿಧಾನ ಪರಿಷತ್ ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ NDA ಮೈತ್ರಿಕೂಟದ ಅಭ್ಯರ್ಥಿ ಎಪಿ ರಂಗನಾಥ್ ಗೆಲುವನ್ನು ಸಾಧಿಸಿದ್ದಾರೆ. ಇದರ ಬೆನ್ನಲ್ಲೇ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟ್ವೀಟ್ (ಎಕ್ಸ್) ಮಾಡಿದ್ದಾರೆ.

ಇದು ಬ್ಯಾಲಟ್ ಪೇಪರ್ ನಲ್ಲಿ ನಡೆದ ಚುನಾವಣೆ ಎಂದು ನಿಖಿಲ್ ಕುಮಾರಸ್ವಾಮಿ ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ. ಆಮೂಲಕ, ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಇವಿಎಂ ಹ್ಯಾಕ್, ಜ್ಞಾನೇಶ್ ಕುಮಾರ್ ವಜಾಗೆ ಆಗ್ರಹಿಸುತ್ತಿರುವ ವಿಪಕ್ಷಗಳಿಗೆ ಪರೋಕ್ಷವಾಗಿ ನಿಖಿಲ್, ಟಾಂಗ್ ಕೊಟ್ಟಿದ್ದಾರೆ

ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಎಪಿ ರಂಗನಾಥ್ ಗೆದ್ದ ಬೆನ್ನಲ್ಲೇ ರಾಹುಲ್ ಗಾಂಧಿ ಅವರನ್ನು ಸಂಬೋಧಿಸಿ ಟ್ವೀಟ್ ಮಾಡಿದ್ದಾರೆ. "ಪ್ರಿಯ ರಾಹುಲ್ ಗಾಂಧಿಯವರೇ, ದೂಷಿಸಲು ಇವಿಎಂ ಇಲ್ಲ, ಸರ್ಕಾರಿ ಯಂತ್ರ ನಿಮ್ಮ ಪಾರ್ಟಿಯ ಕೈಯಲ್ಲೇ ಇತ್ತು. ಚುನಾವಣೆಯು ಬ್ಯಾಲಟ್ ಪೇಪರ್’ಮೂಲಕವೇ ನಡೆಯಿತು.

ಆದರೂ, ಬೆಂಗಳೂರು ಶಿಕ್ಷಕ ಕ್ಷೇತ್ರದ MLC ಚುನಾವಣೆಯಲ್ಲಿ NDA ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ನಿಮ್ಮದೇ ಸರ್ಕಾರದ ಮೂಗಿನ ಕೆಳಗೆ, ಸುಶಿಕ್ಷಿತ ಶಿಕ್ಷಕರು ಬ್ಯಾಲಟ್ ಪೇಪರ್ ನಲ್ಲೇ ಮತ ಚಲಾಯಿಸಿರುವಾಗ, ಇವತ್ತಿನ ನೆಪವೇನು, ಬ್ಯಾಲಟ್ ಪೇಪರ್ ಕಳ್ಳತನವೇ ಎಂದು ನಿಖಿಲ್ ಪ್ರಶ್ನಿಸಿದ್ದಾರೆ.

ಈ ಐತಿಹಾಸಿಕ ಗೆಲುವಿಗಾಗಿ ಅಹೋರಾತ್ರಿ ಶ್ರಮಿಸಿದ ಮೈತ್ರಿಕೂಟದ ಎರಡೂ ಪಕ್ಷಗಳ ಮುಖಂಡರು, ಪದಾಧಿಕಾರಿಗಳು ಹಾಗೂ ಮುಖ್ಯವಾಗಿ NDA ಮೈತ್ರಿಕೂಟದ ಮೇಲೆ ನಂಬಿಕೆಯಿಟ್ಟು ಮತ ನೀಡಿದ ಗೌರವಾನ್ವಿತ ಶಿಕ್ಷಕರ ಸಮುದಾಯಕ್ಕೆ ನನ್ನ ಧನ್ಯವಾದಗಳು. ವಿಶೇಷವಾಗಿ, ಎರಡೂ ಪಕ್ಷಗಳ ಪ್ರತಿಯೊಬ್ಬ ಕಾರ್ಯಕರ್ತ ಬಂಧುಗಳಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ನಾವು ಎರಡೂ ಪಕ್ಷಗಳು ಒಂದಾಗಿ, ಹೆಗಲಿಗೆ ಹೆಗಲು ಕೊಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಿದ್ದಕ್ಕೆ ಈ ಫಲಿತಾಂಶ ಲಭಿಸಿದೆ. ಕಾರ್ಯಕರ್ತರ ಈ ಅಪಾರ ಶ್ರಮ ಮತ್ತು ಒಗ್ಗಟ್ಟೇ ನಮ್ಮ ಗೆಲುವಿನ ನೈಜ ಶಕ್ತಿ ಎಂದು ನಿಖಿಲ್ ಕುಮಾರಸ್ವಾಮಿ ಖುಷಿ ವ್ಯಕ್ತ ಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cyclone Arnab: ಆಂಧ್ರಪ್ರದೇಶ ಕರಾವಳಿಗೆ ಅಪ್ಪಳಿಸಿದ 'ಅರ್ನಬ್' ಚಂಡಮಾರುತ; ಗಂಟೆಗೆ 150 ಕಿಮೀ ವೇಗದಲ್ಲಿ ಬಿರುಗಾಳಿ; Video

ಆಂಧ್ರ, ಒಡಿಶಾಗೆ 'Cyclone Arnab' ಅಬ್ಬರದ ಭೀತಿ; 50 ರೈಲು, 21 ವಿಮಾನಗಳ ಹಾರಾಟ ಸ್ಥಗಿತ, 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ!

Cyclone Arnab: ಪಶ್ಚಿಮ ಬಂಗಾಳ, ಜಾರ್ಖಂಡ್‌ಗೂ ಮಳೆ ಎಚ್ಚರಿಕೆ, 600 ಕಿ.ಮೀ ರೈಲು ಹಳಿಗಳ ಮೇಲೆ ತೀವ್ರ ನಿಗಾ

INDvsNZ: 'ಇವರ ತಡೆಯಲು ಹೊಸ ತಂತ್ರವೇ ಬೇಕು': ಅಸಹಾಯಕತೆ ತೋಡಿಕೊಂಡ ಕಿವೀಸ್ ನಾಯಕ! ಹೇಳಿದ್ದೇನು?

ಸುನಾಮಿ ಅಲ್ಲ ಸೈಕ್ಲೋನ್: Arnab ಚಂಡಮಾರುತ ಅಬ್ಬರ, ಚೆನ್ನೈ ಕಡಲತೀರಕ್ಕೆ ಅಪ್ಪಳಿಸಿದ ರಕ್ಕಸ ಅಲೆಗಳು, ಕಟ್ಟೆಚ್ಚರ! Video