ಸಿದ್ದರಾಮಯ್ಯ ಮತ್ತು ಮಹಾದೇವಪ್ಪ 
ರಾಜಕೀಯ

ಸಂವಿಧಾನ ದಿನಾಚರಣೆ: ಮಹದೇವಪ್ಪ ವಿರುದ್ದ ಮಾಜಿ ಸಿಎಂ ಮೆಗಾ ಫೈಟ್; ಸಿದ್ದರಾಮಯ್ಯ ನಿವಾಸದಲ್ಲಿ ಅಹಿಂದ ನಾಯಕರ ಬ್ರೇಕ್ ಫಾಸ್ಟ್ ಮೀಟ್!

ಮೈಸೂರಲ್ಲಿ ಆಯೋಜನೆ ಮಾಡಲು ಉದ್ದೇಶಿಸಿರುವ ಸಂವಿಧಾನ ದಿನ ಆಚರಣೆ ಕುರಿತಾಗಿ ಮಹದೇವಪ್ಪ ಮತ್ತು ಸಿದ್ದರಾಮಯ್ಯ ನಡುವೆ ಮೆಗಾ ಫೈಟ್ ನಡೆಯುತ್ತಿದೆ.

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಎಚ್‌ಸಿ ಮಹದೇವಪ್ಪ ನಡುವೆ ಭಿನ್ನಮತ ಸೃಷ್ಟಿಯಾಗಿದೆ ಎಂಬ ವಿಚಾರ ಇದೀಗ ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಯ ಕೇಂದ್ರ ಬಿಂದುವಾಗಿದೆ.

ಮೈಸೂರಲ್ಲಿ ಆಯೋಜನೆ ಮಾಡಲು ಉದ್ದೇಶಿಸಿರುವ ಸಂವಿಧಾನ ದಿನ ಆಚರಣೆ ಕುರಿತಾಗಿ ಮಹದೇವಪ್ಪ ಮತ್ತು ಸಿದ್ದರಾಮಯ್ಯ ನಡುವೆ ಮೆಗಾ ಫೈಟ್ ನಡೆಯುತ್ತಿದೆ.

ಮೈಸೂರಲ್ಲಿ ಸಂವಿಧಾನ ಆಚರಣೆ ಕಾರ್ಯಕ್ರಮನಡೆಸಲು ಮಹದೇವಪ್ಪ ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ, ಸಿದ್ದರಾಮಯ್ಯ ಕೂಡ ಸರ್ಕಾರದ ವತಿಯಿಂದ ಮೈಸೂರಲ್ಲೇ ಸಂವಿಧಾನ ಆಚರಣೆ ಆಗಲಿ ಎಂದು ಚೆಕ್‌ಮೇಟ್ ನೀಡಿದ್ದು ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲೇ ನಡೆದ ಸಚಿವರು, ಶಾಸಕರ ಸಭೆ ನಡೆಸಲಾಗಿದೆ.

ನವೆಂಬರ್ 26 ರಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ‘ರಾಜ್ಯ ಮಟ್ಟದ ಸಂವಿಧಾನ ದಿನ’ವನ್ನು ಆಯೋಜಿಸಲು ನಿರ್ಧರಿಸಲಾಗಿದ್ದು, ಈ ಕುರಿತು ಗುರುವಾರ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ. ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಂಡು, ಸಲಹೆ ನೀಡಿದ್ದಾರೆ.

ಈ ಸಭೆಯಲ್ಲಿ ಸಚಿವರಾದ ಕೆ.ಎಚ್.ಮುನಿಯಪ್ಪ, ಯು.ಟಿ.ಖಾದರ್, ಎನ್.ಚಲುವರಾಯಸ್ವಾಮಿ, ಪುಟ್ಟರಂಗಶೆಟ್ಟಿ, ಪಿ.ಎಂ. ನರೇಂದ್ರಸ್ವಾಮಿ ಮೈಸೂರು ಭಾಗದ ಸಚಿವರು, ಶಾಸಕರು, ಹಿರಿಯ ರಾಜಕೀಯ ನಾಯಕರು ಉಪಸ್ಥಿತರಿದ್ದರು. ಆದರೆ ಡಾ. ಎಚ್‌ಸಿ ಮಹದೇವಪ್ಪ ಮಾತ್ರ ಸಭೆಗೆ ಗೈರಾಗಿದ್ದರು.

ಸಭೆಯ ಕುರಿತಾಗಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿಲ್ಲ. ನವೆಂಬರ್ 26 ಸಂವಿಧಾನ ದಿನಾಚರಣೆ ಸರ್ಕಾರದಿಂದ ನಡೆಯಲಿದೆ. ಹಾಗಾಗಿ ಸರ್ಕಾರದ ವತಿಯಿಂದ ಸಭೆ ಕರೆದಿದ್ದು, ಚರ್ಚೆ ಮಾಡಿದ್ದೇವೆ ಎಂದರು.

ಇದರ ನಡುವೆಯೇ ಮೈಸೂರು ಜಿಲ್ಲೆಯಲ್ಲಿ ಸಂವಿಧಾನ ದಿನ ರಾಜಕೀಯ ಸಂಘರ್ಷಕ್ಕೆ ಕಾರಣವಾಗುತ್ತಾ ಎನ್ನುವ ಚರ್ಚೆ ಜೋರಾಗಿದೆ. ಮಾಜಿ ಸಚಿವ ಮಹದೇವಪ್ಪ V/S ಸಚಿವ ಯತೀಂದ್ರ ನಡುವೆ ಮತ್ತೊಂದು ರಾಜಕೀಯ ಸಂಘರ್ಷಕ್ಕೆ ಸಂವಿಧಾನ ದಿನ ಕಾರ್ಯಕ್ರಮ ದಾರಿ ಮಾಡಿಕೊಡುತ್ತಾ ಎನ್ನುವ ಪ್ರಶ್ನೆ ಮೂಡಿದೆ.

ನವೆಂಬರ್ 26ಕ್ಕೆ ಸಂವಿಧಾನ ದಿನಚಾರಣೆಗೆ ಬೃಹತ್ ಕಾರ್ಯಕ್ರಮ ಮಾಡಲು ಮಹದೇವಪ್ಪ ಮುಂದಾಗಿದ್ದು, ಅಕ್ಟೋಬರ್ 26ರಂದೇ ಸಭೆ ನಡೆಸಿದ್ರು. ದಲಿತ ಸಂಘಟನೆಗಳ ಜೊತೆಗೂಡಿ ಕಾರ್ಯಕ್ರಮ ಮಾಡಲು ತಯಾರಿ ಮಾಡಿದ್ದ ಮಹಾದೇವಪ್ಪ ಅವರು ಈಗಾಗಲೇ ಪೂರ್ವಭಾವಿ ಸಭೆ ನಡೆಸಿ ಸಮಿತಿ ಕೂಡ ಮಾಡಿದ್ದಾರೆ

ಇದೇ ಸಂದರ್ಭದಲ್ಲಿ ಮೈಸೂರಿನಲ್ಲಿ ಅದೇ ದಿನ ಡಾ. ಎಚ್ ಸಿ ಮಹದೇವಪ್ಪ ಅವರು ಹಮ್ಮಿಕೊಂಡಿರುವ ಕಾರ್ಯಕ್ರಮದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಯತೀಂದ್ರ ಹೇಳಿದ್ದಾರೆ. ಮಹದೇವಪ್ಪ ಅವರ ಸಂವಿಧಾನದ ದಿನದ ಆಚರಣೆ ಕಾರ್ಯಕ್ರಮ ನಮಗೆ ಗೊತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಜ್ಞಾನೇಶ್ ಕುಮಾರ್ ವಿರುದ್ಧ INDIA ಒಕ್ಕೂಟ ಹೊಸ ಅಸ್ತ್ರ; ‘ಸಾರ್ವಜನಿಕ ದೋಷಾರೋಪಣೆ’ಗೆ ಸಜ್ಜು; ಇಂದು ಖರ್ಗೆ ನಿವಾಸದಲ್ಲಿ ಮಹತ್ವದ ಸಭೆ

ನೀರಿಗೇ ರೂ.30-35 ಕೊಡ್ತೀರಿ, ಹಾಲಿನ ಬೆಲೆ ಹೆಚ್ಚಾದರೆ ವಿರೋಧವೇಕೆ?: ದರ ಏರಿಕೆ ಸಮರ್ಥಿಸಿಕೊಂಡ ಸಿಎಂ ಡಿ.ಕೆ. ಶಿವಕುಮಾರ್

'ನೋಡಲು ಅಸಹ್ಯವಾಗಿದ್ದೀಯ, ಮೊದಲು ದೇಹದ ಆಕಾರ ಸರಿಪಡಿಸಿಕೋ': ಆರೋಗ್ಯದ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತನಿಗೆ ಟ್ರಂಪ್ ಅವಮಾನ..!

ರಾಜಮನೆತನದ ವಿರುದ್ಧ ಹೇಳಿಕೆ: ಮೈಸೂರಿನಲ್ಲಿ ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಭುಗಿಲೆದ್ದ ತೀವ್ರ ಪ್ರತಿಭಟನೆ..!

ದೇಶದಲ್ಲಿ ಅರಾಜಕತೆ ಸೃಷ್ಟಿಸಲು I.N.D.I.A ಒಕ್ಕೂಟ ಯತ್ನ: ಶೋಭಾ ಕರಂದ್ಲಾಜೆ ಆರೋಪ