ಕೆಎಂ ಶಿವಲಿಂಗೇಗೌಡ 
ರಾಜಕೀಯ

ಗೌರವಯುತವಾಗಿ ನಡೆದುಕೊಳ್ಳಿ ಅಂದಿದ್ದು, ದುಡ್ಡು ಕೊಡಿ ಎಂದಿಲ್ಲ: 'ಗೌರವಯುತ ಲಂಚ'ದ ಹೇಳಿಕೆಗೆ ಶಿವಲಿಂಗೇಗೌಡ ಸ್ಪಷ್ಟನೆ

‘ಅಧಿಕಾರಿಗಳೊಂದಿಗೆ ಗೌರವಯುತವಾಗಿ ನಡೆದುಕೊಂಡು, ಕೆಲಸವಾದ ಮೇಲೆ ಕೃತಜ್ಞತೆ ಸಲ್ಲಿಸುವುದು ನಮ್ಮ ಧರ್ಮ’ ಎಂದು ಹೇಳಿದ್ದೆ ಅಷ್ಟೆ. ಈ ಮಾತನ್ನು ಲಂಚ ನೀಡಿ ಎಂಬ ಅರ್ಥದಲ್ಲಿ ಬಿಂಬಿಸಲಾಗಿದೆ ಎಂದರು.

ಬೆಂಗಳೂರು: ಲಂಚದ ವಿಷಯವಾಗಿ ಅಧಿಕಾರಿಗಳಿಗೆ ಗೌರವಯುತವಾಗಿ ಕೊಡೋದು ನಿಮ್ಮ ಧರ್ಮ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಸಚಿವ ಶಿವಲಿಂಗೇಗೌಡ ಅವರು ಬುಧವಾರ ಸ್ಪಷ್ಟನೆ ನೀಡಿದ್ದು, ನಾನು ಅಧಿಕಾರಿಗಳೊಂದಿಗೆ ಗೌರವಯುತವಾಗಿ ನಡೆದುಕೊಳ್ಳಿ ಎಂದು ಹೇಳಿದ್ದೇನೆ. ದುಡ್ಡು ಕೊಡಿ ಎಂದು ಹೇಳಿಲ್ಲ ಎಂದಿದ್ದಾರೆ.

ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಶಿವಲಿಂಗೇಗೌಡ ಅವರು, ಪ್ರಜಾಸೇವಾ ಆಂದೋಲನದ ವೇಳೆ ಸರ್ವೇಯರ್‌ಗಳು ಲಂಚ ಕೇಳುತ್ತಿದ್ದಾರೆ ಎಂದು ಹಲವು ರೈತರು ಆರೋಪಿಸಿದ್ದರು. ಆ ಸಂದರ್ಭದಲ್ಲಿ, ‘ಅಧಿಕಾರಿಗಳೊಂದಿಗೆ ಗೌರವಯುತವಾಗಿ ನಡೆದುಕೊಂಡು, ಕೆಲಸವಾದ ಮೇಲೆ ಕೃತಜ್ಞತೆ ಸಲ್ಲಿಸುವುದು ನಮ್ಮ ಧರ್ಮ’ ಎಂದು ಹೇಳಿದ್ದೆ ಅಷ್ಟೆ. ಈ ಮಾತನ್ನು ಲಂಚ ನೀಡಿ ಎಂಬ ಅರ್ಥದಲ್ಲಿ ಬಿಂಬಿಸಲಾಗಿದೆ ಎಂದರು.

‘ನಾನು ಯಾರ ಬಳಿಯೂ ಹಣ ಕೊಡಲು ಹೇಳಿಲ್ಲ. ಯಾವುದೇ ಅಧಿಕಾರಿಗೆ 10 ರೂಪಾಯಿ ಕೂಡ ಕೊಡಬೇಕಾಗಿಲ್ಲ. ನನ್ನ ಉದ್ದೇಶ ಅಧಿಕಾರಿಗಳ ಜೊತೆ ಸೌಹಾರ್ದಯುತವಾಗಿ ನಡೆದುಕೊಂಡು, ಅವರ ಕೆಲಸಕ್ಕೆ ಧನ್ಯವಾದ ಸಲ್ಲಿಸುವುದು ಅಷ್ಟೇ. ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುವ ಪ್ರಸ್ತಾಪ ಇರಲಿಲ್ಲ’ ಎಂದು ಶಿವಲಿಂಗೇಗೌಡರು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ ಲಂಚ ಪಡೆದ ಆರೋಪಗಳ ಬಗ್ಗೆ ತನಿಖೆ ನಡೆಸಿ ಆ ಹಣ ವಾಪಸ್ ಕೊಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿರುವುದಾಗಿ ಸಚಿವರು ತಿಳಿಸಿದ್ದಾರೆ.

ಹಾಸನ‌ ಜಿಲ್ಲೆಯ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ ಸಚಿವ ಶಿವಲಿಂಗೇಗೌಡ ಅವರು ಲಂಚದ ವಿಚಾರಕ್ಕೆ ಎಡವಟ್ಟು ಹೇಳಿಕೆ ನೀಡಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ವಿಪಕ್ಷಗಳಿಗೆ ಇದೇ ಅಸ್ತ್ರವಾಗಿದೆ.

ಇನ್ನು ಮೈಸೂರಿನ ವಾಯ್ಸ್ ಆಫ್ ಪೀಪಲ್ ಸಂಸ್ಥೆಯಿಂದ ಸಚಿವ ಶಿವಲಿಂಗೇಗೌಡ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಹ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಆಂತರಿಕ ಆಕ್ಷೇಪಗಳು ಸಹಜ ಪ್ರಕ್ರಿಯೆಯ ಭಾಗ: ಕಾರ್ಯವೈಖರಿ ಕುರಿತ ಪ್ರಶ್ನೆ ತಳ್ಳಿಹಾಕಿದ EC

ಸುಮ್ಮನೆ ಫೋಟೋ ಹಿಡಿದುಕೊಂಡು ತಿರುಗಾಡೋರೆಲ್ಲಾ ಅಂಬೇಡ್ಕರ್ ವಾದಿಗಳಾಗಲ್ಲ: ಚೇತನ್ ಅಹಿಂಸಾ ಆಕ್ರೋಶ

'ಆಜ್ಞೆ ಮಾಡುವಂತಿಲ್ಲ': ಮುಸ್ಲಿಂ ವ್ಯಕ್ತಿ ಮದುವೆಯಾಗಿದ್ದಕ್ಕೆ ಮಗಳನ್ನು ಗೃಹ ಬಂಧನದಲ್ಲಿರಿಸಿದ್ದ ತಂದೆಗೆ ಹೈಕೋರ್ಟ್ ತರಾಟೆ; ಪತಿಯೊಂದಿಗೆ ವಾಸಿಸಲು ಅನುಮತಿ

ತಮಿಳುನಾಡು ಸರ್ಕಾರಿ ಹಾಸ್ಟೆಲ್​ಗಳ ಮೆನುವಿನಲ್ಲಿ ಗೋಮಾಂಸ ಸೇರ್ಪಡೆ?: ವಿದ್ಯಾರ್ಥಿಗಳ ಮನವಿ ಕುರಿತು ಶೀಘ್ರ ನಿರ್ಧಾರ ಎಂದ ಸಚಿವ!

‘ವೋಟ್ ಚೋರಿ’ ಸಂವಿಧಾನದ ಮೇಲಿನ ನೇರ ದಾಳಿ; BJP, RSS, ECಯಿಂದ ದೇಶದ್ರೋಹ, ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ರಾಹುಲ್ ಗಾಂಧಿ