ನಿರ್ದೇಶಕ ನಾಗಾಭರಣ (ಸಂಗ್ರಹ ಚಿತ್ರ) 
ವಿಶೇಷ-ವೈವಿಧ್ಯ

ರಿಮೇಕ್‍ ಗೆ ಅಸಮಾಧಾನ, ಸ್ವಮೇಕ್ ಗೆ ಆಹ್ವಾನ

ಚಲನಚಿತ್ರದಲ್ಲಿ ಹೊಸ ಸ್ವರೂಪ ಇದ್ದಾಗ ಜನ ಸಿನಿಮಾಗಳನ್ನು ನೋಡುತ್ತಾರೆ. ಇಲ್ಲವಾದಲ್ಲಿ ಅಂತಹ ಸಿನಿಮಾಗಳನ್ನು ತಿರಸ್ಕರಿಸುತ್ತಾರೆ ಎಂದು ನಿರ್ದೇಶಕ ನಾಗಾಭರಣ ಹೇಳಿದರು.

ಶ್ರವಣಬೆಳಗೊಳ: 81ನೇ ಕನ್ನಡ ಸಾಹಿತ್ಯ ಸಮ್ಮೇಳದ ಅಂತಿಮ ದಿನದಂದು ನಡೆದ ಚಲನಚಿತ್ರ ಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡಿದ ನಿರ್ದೇಶಕ ನಾಗಾಭರಣ ಅವರು, ಚಲನಚಿತ್ರದಲ್ಲಿ ಹೊಸ ಸ್ವರೂಪ ಇದ್ದಾಗ ಜನ ಸಿನಿಮಾಗಳನ್ನು ನೋಡುತ್ತಾರೆ. ಇಲ್ಲವಾದಲ್ಲಿ ಅಂತಹ ಸಿನಿಮಾಗಳನ್ನು ತಿರಸ್ಕರಿಸುತ್ತಾರೆ ಎಂದು ಹೇಳಿದರು.

ತೆಲುಗು ಮತ್ತು ಮಲೆಯಾಳಿ ಸಿನಿಮಾಗಳನ್ನು ಕನ್ನಡಕ್ಕೆ ತಂದಾಗ ಅಲ್ಲಿ ಎಲ್ಲವೂ ಅವಲಂಬಿತವಾಗಿರುತ್ತವೆ. ಆಗ ಸೃಜನಶೀಲತೆಗೆ ಅವಕಾಶ ಇರೋದಿಲ್ಲ. ಕೇವಲ ನಟ-ನಟಿಯರು ಮಾತ್ರ ಕನ್ನಡದವರಾಗಿರುತ್ತಾರೆ. ಉಳಿದ ತಂತ್ರಜ್ಞಾನವರೆಲ್ಲ ಅಲ್ಲಿಯವರೇ ಆಗಿರುತ್ತಾರೆ. ಇದರಿಂದ ಸೃಜನಶೀಲತೆ ನಿಧಾನವಾಗಿ ನಶಿಸಿ ಹೋಗುತ್ತವೆ. ಜೊತೆಗೆ ಕನ್ನಡತನವು ಸಹ ನಿಧಾನವಾಗಿ ನಶಿಸಿ ಹೋಗುತ್ತವೆ. ತನ್ನದ್ದಲ್ಲವನ್ನು ಒತ್ತಡದಿಂದ ಹೇರುವಂತಹ ಪ್ರವೃತ್ತಿ ನಿರ್ಮಾಣವಾಗುತ್ತದೆ. ರಿಮೇಕ್ ಮಾಡಿದರೆ ಮಾರುಕಟ್ಟೆ ವಿಸ್ತರಣೆಯಾಗಲು ಸಾಧ್ಯವಿಲ್ಲ. ಆದ್ದರಿಂದ ರಿಮೇಕ್ ಉದ್ದಿಮೆ ತೊರೆಯಬೇಕಾದ ಅನಿವಾರ್ಯವಾಗಿದೆ.

ಇತ್ತೀಚೆಗೆ ಹೊಸ ನಿರ್ದೇಶಕರಿಂದ ಹೊಸ ಆವಿಷ್ಕಾರಗಳು ಮೂಡಿ ಬಂದು ಯಶಸ್ಸು ಕಂಡಿವೆ. ಆದ್ದರಿಂದ ರಿಮೇಕ್‍ನ್ನು ನಾವು ಒಪ್ಪುವುದಿಲ್ಲ. ನಮ್ಮನ್ನು ನಾವು ಏನೂ ಎಂಬುದನ್ನು ಸಾಬೀತುಪಡಿಸಿಕೊಳ್ಳಲು ಸ್ವಮೇಕ್ ಅನ್ನು ಮೈಗೂಡಿಸಿಕೊಳ್ಳಬೇಕು ಎಂದರು. ಚಿತ್ರ ಸಾಹಿತ್ಯ ಕುರಿತು ವಿಷಯ ಮಂಡನೆ ಮಾಡಿದ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ, ಸಾಹಿತ್ಯ ಮತ್ತು ಸಿನಿಮಾ ಮಾಧ್ಯಮ ಒಗ್ಗೂಡಿದರೆ ಹೊಸ ಪ್ರಯತ್ನಗಳನ್ನು ನೀಡುವ ಮೂಲಕ ಕನ್ನಡ ಸಿನಿಮಾಗಳನ್ನು ಉಳಿಸಿ ಬೆಳೆಸಬಹುದು. ಹಿಂದೆ ಕಾದಂಬರಿ ಆಧಾರಿತ ಸಿನಿಮಾಗಳು ಹೆಚ್ಚಾಗಿ ಮೂಡಿಬರುತ್ತಿದ್ದವು.

ಆದರೆ ಇತ್ತೀಚೆಗೆ ಕಾದಂಬರಿಗಳನ್ನು ಓದುವ ಹವ್ಯಾಸವೇ ಕಡಿಮೆಯಾಗಿದೆ. ಸಾಹಿತ್ಯದ ನೆರವಿನಿಂದ ಸಿನಿಮಾದ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯ ಎಂದರು. ಕನ್ನಡ ಚಿತ್ರರಂಗ-ಸ್ಥಿತ್ಯಂತರದ ನೆಲೆಯಲ್ಲಿ ಕುರಿತು ಮಾತನಾಡಿದ ಡಿ.ಸುಮನಾ ಕಿತ್ತೂರು, 80 ವರ್ಷಗಳ ಇತಿಹಾಸವುಳ್ಳ ಕನ್ನಡ ಸಿನಿಮಾರಂಗದಲ್ಲಿ ಪ್ರಾರಂಭದ 25 ವರ್ಷಗಳ ಕಾಲಘಟ್ಟ ಮತ್ತು ನಂತರ ಕಾಲಘಟ್ಟಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪ್ರಸ್ತುತ ಸಿನಿಮಾದಲ್ಲಿ ಹಳೇ ಜಾಡು ಇಲ್ಲ, ಹೊಸದಾಗಿ ಎಲ್ಲವನ್ನು ಅಳವಡಿಸಿಕೊಂಡಿಲ್ಲ ಎನ್ನುವಂತಹ ಸನ್ನಿವೇಶದಲ್ಲಿ ಸಮಾಜ, ರಾಜಕೀಯ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಹೆಚ್ಚು ಸಿನಿಮಾಗಳು ಮೂಡಿಬರುತ್ತಿವೆ.

ಓಂ ಸಿನಿಮಾ ಬಂದಾಗ ಕೇವಲ ಲಾಂಗು, ಮಚ್ಚು ಅನ್ನೋ ಸಂಸ್ಕೃತಿಯನ್ನು ಮೂಡಿಸಿತ್ತು. ಆದರೆ ಅಂಡರ್‍ವರ್ಲ್ಡ್ ಅಂದ್ರೆ ಕೇವಲ ಲಾಂಗು, ಮಚ್ಚು ಅಲ್ಲದೆ ಬೇರೆ ಜಗತ್ತೇ ಇದೆ ಅನ್ನೋದನ್ನು ಮನಗಾಣಬೇಕು ಎಂದರು. ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಎನ್.ಆರ್ .ನಂಜುಂಡೇಗೌಡ, ವೈಜನಾಥ ಬಿರಾದಾರ,ಮಂಜುನಾಥ ಅದ್ದೆ, ಶಿವಾನಂದ ತಗಡೂರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್