ನವದೆಹಲಿ: ಅಂತರ್ಜಾಲ ತಟಸ್ಥ ನೀತಿ (ನೆಟ್ ನ್ಯೂಟ್ರಾಲಿಟಿ) ಗೆ ಸಂಬಂಧಿಸಿ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿರುವ ಕೇಂದ್ರ ಸರ್ಕಾರ ಈ ಗಡುವನ್ನು ಆ.20ರವರೆಗೆ ವಿಸ್ತರಿಸಿದೆ. ನೀತಿಯ ಕುರಿತ ಸಾರ್ವಜನಿಕ ಸಲಹೆಗಳು ದಿಢೀರ್ ಏರಿಕೆ ಕಂಡ ಹಿನ್ನೆಲೆಯಲ್ಲಿ ಈ ಹಿಂದೆ ನಿಗದಿಯಾಗಿದ್ದ ಆ.14ರ ಗಡುವನ್ನು ವಿಸ್ತರಿಸಿ ಸರ್ಕಾರ, 6ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಿದೆ. ಅಂತರ್ಜಾಲ ತಟಸ್ಥ ನೀತಿ ರೂಪಿಸುವ ನಿಟ್ಟಿನಲ್ಲಿ ನೇಮಕವಾಗಿದ್ದ ಸಮಿತಿ ಸಲಹೆಗಳಿಗೆ ಸರ್ಕಾರದ ಚರ್ಚಾ ಫೋರಂ MyGov.in ಮೂಲಕ ಸಾರ್ವಜನಿಕ ಪ್ರತಿಕ್ರಿಯೆಗೆ ಅವಕಾಶ ಕಲ್ಪಿಸಿತ್ತು. ಆ.14ರಂದು 700 ಪ್ರತಿಕ್ರಿಯೆ ಪಡೆದಿದ್ದ ಫೋರಂ, ಕೆಲವು ಆನ್‍ಲೈನ್ ಗ್ರೂಪ್ ಗಳ ಆಂದೋಲನದ ಪರಿಣಾಮ ಶನಿವಾರ ದಿಡಿsೀರನೆ 33,600 ಪ್ರತಿಕ್ರಿಯೆ ಪಡೆದಿದೆ.