ಟ್ವಿಟರ್ (ಸಂಗ್ರಹ ಚಿತ್ರ) 
ವಿಜ್ಞಾನ-ತಂತ್ರಜ್ಞಾನ

ಶೀಘ್ರವೇ ಟ್ವಿಟರ್ ನಲ್ಲಿ ಬಿಲ್ ಪಾವತಿ ಮಾಡುವ ಸೌಲಭ್ಯ ಜಾರಿ

ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿರುವ ಟ್ವಿಟರ್, ಇನ್ನು ಮುಂದೆ ಭಾರತದ ಗ್ರಾಹಕರಿಗೆ ಟ್ವಿಟರ್ ಮೂಲಕವೇ ಬಿಲ್ ಪಾವತಿ ಮಾಡುವ ಸೌಲಭ್ಯ ಒದಗಿಸಲಿದೆ.

ನ್ಯೂಯಾರ್ಕ್: ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿರುವ ಟ್ವಿಟರ್, ಇನ್ನು ಮುಂದೆ ಭಾರತದ ಗ್ರಾಹಕರಿಗೆ ಟ್ವಿಟರ್ ಮೂಲಕವೇ ಬಿಲ್ ಪಾವತಿ ಮಾಡುವ ಸೌಲಭ್ಯ ಒದಗಿಸಲಿದೆ.
ಶೀಘ್ರವೇ ಈ ಸೌಲಭ್ಯ ಜಾರಿಗೆ ಬರಲಿದ್ದು, ಇದಕ್ಕಾಗಿ ಭಾರತದ ಸ್ಟಾರ್ಟ್ ಅಪ್ ಒಂದರ ಜೊತೆ ಒಪ್ಪಂದ ಮಾಡಿಕೊಂಡಿದೆ. ಟ್ವಿಟರ್ ಮೂಲಕ ಬಿಲ್ ಪಾವತಿ ಮಾಡುವುದಷ್ಟೇ ಅಲ್ಲದೇ ಅಪಾಯಿಂಟ್ಮೆಂಟ್ ನಿಗದಿ ಮಾಡುವುದು, ವಹಿವಾಟು ನಡೆಸುವ ಸೌಲಭ್ಯವನ್ನು ಕಲ್ಪಿಸಲು ಟ್ವಿಟರ್ ಮುಂದಾಗಿದೆ. 
ಟ್ವಿಟರ್ ನಲ್ಲಿ ವ್ಯಾಪಾರಿಗಳು ಮತ್ತು ಗ್ರಾಹಕರು ನೇರ ಸಂದೇಶ ಕಳಿಸಬಹುದಾಗಿದೆ. ಪ್ರಸ್ತುತ ಟ್ವಿಟರ್ ಮೂಲಕ ಖರೀದಿ ಮಾಡುವ ಸೌಲಭ್ಯ ಒದಗಿಸಲಾಗಿದೆ. ಇನ್ನು ಮುಂದೆ ಪರಿಚಯಿಸಲಿರುವ ಸೌಲಭ್ಯದಲ್ಲಿ ಖರೀದಿ ಹಾಗೂ ಪಾವತಿಯನ್ನು ಟ್ವಿಟರ್ ನಲ್ಲೇ ಮಾಡಬಹುದಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

'ಅಭಿವೃದ್ಧಿಶೀಲ ರಾಷ್ಟ್ರಗಳ ಕೈಕಟ್ಟಬೇಡಿ, ಡಂಪಿಂಗ್ ವಿರುದ್ಧ ಸಾಕ್ಷ್ಯಾಧಾರಿತ ಕ್ರಮ ಕೈಗೊಳ್ಳಿ': G20 ಸಭೆಯಲ್ಲಿ ಭಾರತ ಕೆಂಡ

ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಅಪಾಯಕ್ಕೆ ಸಿಲುಕಿದ ಪ್ರಯಾಣಿಕ, ಕ್ಷಣಮಾತ್ರದಲ್ಲಿ ಎಚ್ಚೆತ್ತ RPF ಕಾನ್‌ಸ್ಟೆಬಲ್, ರಕ್ಷಣೆ-Video

ಏಷ್ಯನ್ ಗೇಮ್ಸ್ 2026 ಫೈನಲ್: ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಭರ್ಜರಿ ಅರ್ಧ ಶತಕ, ಪಾಕ್ ಗೆಲ್ಲಲು 212 ರನ್ ಗಳ ಗುರಿ ನೀಡಿದ ಭಾರತ!

'ಅವನು ಆಡಿದ್ರೂ, ಆಡದಿದ್ದರೂ ಏನೂ ವ್ಯತ್ಯಾಸವಾಗಲ್ಲ’: ಭಾರತದ ಯುವ ಆಟಗಾರನ ಕುರಿತು ಕಡ್ಡಿ ಮುರಿದಂತೆ ಹೇಳಿದ Ajinkya Rahane!