ಪುನರ್ಬಳಕೆ ಉಡಾವಣಾ ವಾಹಕದ ಮಾದರಿ (ಸಂಗ್ರಹ ಚಿತ್ರ) 
ವಿಜ್ಞಾನ-ತಂತ್ರಜ್ಞಾನ

2015ರಲ್ಲಿ ಇಸ್ರೋದಿಂದ ಪುನರ್ಬಳಕೆ ವಾಹಕ ಉಡಾವಣೆ

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ 2015ರ ಮಧ್ಯದಲ್ಲಿ ವಿನೂತನ ಪುನರ್ಬಳಕೆ ಮಾಡಬಲ್ಲ ಉಡಾವಣಾ ವಾಹಕವನ್ನು ಉಡಾಯಿಸಲು ಸಜ್ಜಾಗಿದೆ...

ಕೋವಲಂ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ 2015ರ ಮಧ್ಯದಲ್ಲಿ ವಿನೂತನ ಪುನರ್ಬಳಕೆ ಮಾಡಬಲ್ಲ ಉಡಾವಣಾ ವಾಹಕವನ್ನು ಉಡಾಯಿಸಲು ಸಜ್ಜಾಗಿದೆ.

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಈ ಕನಸಿನ ಯೋಜನೆಗೆ ಈಗಾಗಲೇ ಚಾಲನೆ ನೀಡಿದ್ದು, Re-usable Launch Vehicle-Technology Demonstrator (RLV-TD) ಅನ್ನು 2015 ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಉಡಾವಣೆ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿರುವ ಇಸ್ರೋ ಅಧ್ಯಕ್ಷ ಎಎಸ್ ಕಿರಣ್ ಕುಮಾರ್ ಅವರು, ಪುನರ್ಬಳಕೆ ಮಾಡಬಲ್ಲ ಉಡಾವಣಾ ವಾಹಕ ಯೋಜನೆ ಪ್ರಗತಿಯಲ್ಲಿದ್ದು, ಇದೇ ವರ್ಷದ ಜೂನ್ ತಿಂಗಳ ಅಂತ್ಯ ಅಥವಾ ಜುಲೈ ತಿಂಗಳ ಆರಂಭಿಕ ಭಾಗದಲ್ಲಿ ವಾಹಕವನ್ನು ಉಡಾವಣೆ ಮಾಡಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಹವಾಮಾನ ಬದಲಾವಣೆ ಮತ್ತು ವಿಪತ್ತು ನಿರ್ವಹಣೆ ಕುರಿತಂತೆ ಕೇರಳದ ಕೋವಲಂ ನಲ್ಲಿ ನಡೆದ 3 ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ಅವರು ಪಾಲ್ಗೊಂಡಿದ್ದರು. ಈ ವೇಳೆ ಇಸ್ರೋದ ಕನಸಿನ ಯೋಜನೆಯ ಕುರಿತು ಮಾಹಿತಿ ನೀಡಿದ ಅವರು, ಯೋಜನೆ ಕುರಿತಂತೆ ಈ ಉಡಾವಣೆ ಮೊದಲ ಹೆಜ್ಜೆಯಾಗಿದ್ದು, ಸಾಕಷ್ಟು ಪ್ರಕ್ರಿಯೆ ಬಾಕಿ ಇದೆ. ವಿಜ್ಞಾನಿಗಳು ಈ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಹೇಳಿದರು.

ಇದು ಮಾನವ ರಹಿತ, ಉಪಕಕ್ಷೀಯ (unmanned, sub-orbital mission) ಉಡಾವಣೆಯಾಗಿದ್ದು, ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದ ಎರಡನೇ ಲಾಂಚ್ ಪ್ಯಾಡ್ ನಿಂದ ಉಡಾಯಿಸಲಾಗುತ್ತದೆ. ಈ ವೇಳೆ ರಾಕೆಟ್ ರಾಕೆಟ್ನಲ್ಲಿರುವ  ಘನ ಇಂಧನವನ್ನು ಬಳಸಿಕೊಳ್ಳಲ್ಲಿದ್ದು, ಉಡಾವಣಾ ವಾಹಕದ ಮೊದಲ ಭಾಗವು ಭೂಮಿಗೆ ವಾಪಸಾಗಲಿದೆ. ಎರಡನೇ ಭಾಗವು ಉಪಗ್ರಹವನ್ನು ನಿಗದಿತ ಕಕ್ಷೆಗೆ ಸೇರಿಸಿದ ಬಳಿಕ ಅಲ್ಲಿಯೇ ಉರಿದುಹೋಗುತ್ತದೆ.

ಪ್ರಸ್ತುತ ಇಸ್ರೋ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು Polar Satellite Launch Vehicle (PSLV) and the Geosynchronous Satellite Launch Vehicle (GSLV), both expendable vehicles ಗಳನ್ನು ಬಳಕೆ ಮಾಡಲಾಗುತ್ತಿದೆ.

'ಸುದರ್ಶನ'ಕ್ಕೆ ತಯಾರಿ ನಡೆಸುತ್ತಿದೆ ಡಿಆರ್ ಡಿಒ
ಪುನರ್ಬಳಕೆ ಉಡಾವಣಾ ವಾಹಕದಂತೆ ಪುನರ್ಬಳಕೆ ಮಾಡಬಲ್ಲ ಕ್ಷಿಪಣಿ ತಯಾರಿಗೆ ಡಿಆರ್ ಡಿಒ ಸಂಶೋಧನೆ ನಡೆಸುತ್ತಿದ್ದು, ಭಗವದ್ಗೀತೆಯಲ್ಲಿ ಉಲ್ಲೇಖವಾಗುವ ಸುದರ್ಶನ ಆಯುಧದ ಮಾದರಿಯಲ್ಲಿ ಶುತ್ರುಪಾಳಯವನ್ನು ವಿನಾಶ ಮಾಡಿ ಮತ್ತೆ ವಾಪಸ್ ಆಗಬಲ್ಲ ಸುದರ್ಶನ ಕ್ಷಿಪಣಿಗಳನ್ನು ತಯಾರಿಸಲು ಡಿಆರ್ ಡಿಒ ಯೋಜನೆ ರೂಪಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT