ಸಾಂದರ್ಭಿಕ ಚಿತ್ರ 
ವಿಜ್ಞಾನ-ತಂತ್ರಜ್ಞಾನ

ಟಿವಿ ಹೋಯ್ತು ಮೊಬೈಲ್ ಬಂತ್

ಟಿವಿ ಎಲ್ಲಿರುತ್ತದೆ? ಪ್ರಶ್ನೆ ಬಹಳ ಸರಳ, ಉತ್ತರವೂ ಕೂಡ. ಹಾಲ್‍ನಲ್ಲಿ ಎಲ್ಲರ ದೃಷ್ಟಿ ಬೀಳುವಂತೆ ಪ್ರತಿಷ್ಠಾಪಿತವಾಗಿರುತ್ತದೆ....

ಟಿವಿ ಎಲ್ಲಿರುತ್ತದೆ? ಪ್ರಶ್ನೆ ಬಹಳ ಸರಳ, ಉತ್ತರವೂ ಕೂಡ. ಹಾಲ್‍ನಲ್ಲಿ ಎಲ್ಲರ ದೃಷ್ಟಿ ಬೀಳುವಂತೆ ಪ್ರತಿಷ್ಠಾಪಿತವಾಗಿರುತ್ತದೆ. ಈ ಉತ್ತರಕ್ಕೆ ಈಗ ಕೊಂಚ ಟ್ವಿಸ್ಟ್ ಇದೆ. ಟಿವಿ ಹಾಲ್‍ನ ಮೂಲೆಯಲ್ಲಿದೆ ಅಷ್ಟೆ.ವಯಸ್ಸಾದವರು ಸೀರಿಯಲ್ ನೋಡುತ್ತಾರೆ, ವಾರ್ತೆ ನೋಡುತ್ತಾರೆ.ಯುವಕರು ಅದನ್ನೆಲ್ಲ ಮೊಬೈಲ್‍ನಲ್ಲೇ ನೋಡುತ್ತಾರೆ.

ಟಿವಿ ಈಗ ಎಲ್ಲರ ಆಕರ್ಷಣೆಯ ಕೇಂದ್ರವಾಗಿ ಉಳಿದಿಲ್ಲ.ಸ್ಮಾರ್ಟ್ ಫೋನ್‍ಗಳು ಆ ಸ್ಥಾನವನ್ನು ಕಸಿದುಕೊಂಡಿವೆ. ಜನ, ಅದರಲ್ಲೂ ಯುವಜನ ಮೊಬೈಲ್, ಲ್ಯಾಪ್‍ಟಾಪ್, ಪಿಸಿ,ಸ್ಮಾರ್ಟ್ ಫೋನ್‍ಗಳನ್ನು ಹೆಚ್ಚು ಹೆಚ್ಚು ಬಳಸುತ್ತಿರುವ ಕಾರಣ ಟಿವಿ ಅತಿವೇಗವಾಗಿ ಪ್ರೇಕ್ಷಕರನ್ನು ಕಳೆದುಕೊಳ್ಳುತ್ತಿದೆಯಂತೆ. ಇದು ಟೈಟಾನ್ ಐಪ್ಲಸ್ ಸ್ಕ್ರೀನ್ ಜಂಕಿ ಕಂಪನಿಯ ಸಮೀಕ್ಷೆಯಿಂದ ಹೊರಬಿದ್ದ ಸಂಗತಿ. ಇದು ಯುವಕರ ಸ್ಕ್ರೀನ್ ವೀಕ್ಷಣೆಯ ಹವ್ಯಾಸದ ಬಗ್ಗೆ ಆನ್‍ಲೈನ್‍ನಲ್ಲಿ ನಡೆಸಲಾದ ಸಮೀಕ್ಷೆ.

ಮೆಟ್ರೊ, ಮಿನಿ ಮೆಟ್ರೊಗಳಿಂದ 10000ಕ್ಕೂ ಹೆಚ್ಚು ಗ್ರಾಹಕರು ಈ ಸಮೀಕ್ಷೆಗೆ ಒಳಪಟ್ಟಿದ್ದಾರೆ. ಯುವಕರು ವೈಯಕ್ತಿಕವಾಗಿ ಡಿಜಿಟಲ್ ಸ್ಕ್ರೀನ್ ಮುಂದೆ ಹೆಚ್ಚು ಸಮಯ ಕಳೆಯುತ್ತಾರೆ. ಹೀಗೆ ಹೆಚ್ಚಿನ ಸಮಯ ಕಳೆವ ಸಮುದಾಯವನ್ನು `ಸ್ಕ್ರೀನ್‍ಮೇಟ್ಸ್' ಎಂದು ಬಣ್ಣಿಸಲಾಗಿದೆ. ಶೇ.60ರಷ್ಟು ಭಾರತೀಯರು ವಾರದ ದಿನಗಳಲ್ಲಿ 5 ಗಂಟೆಗಿಂತ ಹೆಚ್ಚಿನ ಸಮಯವನ್ನು ಸ್ಕ್ರೀನ್ ಮುಂದೆ ವಿನಿಯೋಗಿಸುತ್ತಾರೆ. ವಾರಾಂತ್ಯದಲ್ಲಿ ಇದೇ ಪ್ರಮಾಣ ಶೇ.74ರಷ್ಟಿದೆ. ಪಿಸಿ, ಲ್ಯಾಪ್‍ಟಾಪ್, ಮೊಬೈಲ್‍ಗಳ ಮೂಲಕ ಟಿವಿ ಸ್ಥಾನವನ್ನು ಆಕ್ರಮಿಸುತ್ತಿರುವವರ ಪೈಕಿ ಹೆಚ್ಚಿನವರು ಭಾರತೀಯರೇ. ಶೇ.42ರಷ್ಟು ಜನರು ಕಂಪ್ಯೂಟರ್‍ಗೆ ಅಡಿಕ್ಟ್ ಆಗಿದ್ದಾರೆ. ಶೇ.31ರಷ್ಟು ಮಂದಿ ಮೊಬೈಲ್‍ಗೆ ಜೋತು ಬಿದ್ದಿದ್ದಾರೆ. ಶೇ.23 ಜನರು ಮಾತ್ರ ಟಿವಿಯ ನಂಟು ಇಟ್ಟುಕೊಂಡಿದ್ದಾರೆ. 55 ವರ್ಷಕ್ಕಿಂತ ಹೆಚ್ಚು ವಯೋಮಾನದವರಲ್ಲಿ ಶೇ.42ರಷ್ಟು ಟಿವಿಗೆ ಅಂಟಿಕೊಂಡಿದ್ದಾರೆ. 25ವರ್ಷದೊಳಗಿನ ಶೇ.10ರಷ್ಟು ಯುವಕರು ಮಾತ್ರ ಟಿವಿ ನೋಡುತ್ತಾರೆ. ಕಂಪ್ಯೂಟರ್ ಶೇ.50, ಮೊಬೈಲ್ ಶೇ.37ರಷ್ಟು ಜನರು ತಮ್ಮ ನೆಚ್ಚಿನ ಸ್ಕ್ರೀನ್‍ನಲ್ಲೇ ಕಳೆಯುತ್ತಾರೆ. ಶೇ.84ರಷ್ಟು ಭಾರತೀಯರು ಹೆಚ್ಚು ಸಮಯವನ್ನು ಒಂದೇ ಸ್ಕ್ರೀನ್ ಮುಂದೆ ಕಳೆಯುತ್ತಾರೆ.

5 ವರ್ಷಗಳ ಹಿಂದಕ್ಕೆ ಹೋಲಿಸಿದರೆ ಮಹಿಳೆಯರ ಸ್ಕ್ರೀನ್ ಅಡಿಕ್ಷನ್ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ. ಶೇ.86ರಷ್ಟು ಮಹಿಳೆಯರು ಸ್ಕ್ರೀನ್ ಮುಂದೆ ಕೂರುತ್ತಾರೆ. ಈ ಪ್ರಮಾಣ ಪುರುಷರಲ್ಲಿ ಶೇ.82 ರಷ್ಟಿದೆ. ಒಟ್ಟಾರೆ ಶೇ.28ರಷ್ಟು ಭಾರತೀಯರು ದಿನದಲ್ಲಿ 8 ಗಂಟೆಗಿಂತ ಹೆಚ್ಚಿನ ಸಮಯವನ್ನು ಒಂದೇ ಸ್ಕ್ರೀನ್ ಮುಂದೆ ಕಳೆಯುತ್ತಾರೆ ಎನ್ನುತ್ತಾರೆ ಸಮೀಕ್ಷೆ ನಡೆಸಿರುವ ಕಂಪನಿಯ ಸಿಇಒ ರವಿಕಾಂತ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪರಿಹಾರಕ್ಕೆ ಯಾವುದೇ ಮಾರ್ಗಸೂಚಿ ಇಲ್ಲ': ಮಣಿಪುರದಲ್ಲಿ ಪ್ರಧಾನಿ ಮೋದಿ ಭಾಷಣದ ಬಗ್ಗೆ ಸ್ಥಳೀಯರ ಅಸಮಾಧಾನ

ಜಾತಿ ರಹಿತ ಸಮಾಜ ನಿರ್ಮಾಣವೇ ಸಂವಿಧಾನದ ಆಶಯ: ಸಿಎಂ ಸಿದ್ದರಾಮಯ್ಯ

ಸಂಚಾರ ದಂಡ ರಿಯಾಯಿತಿಯಿಂದ ಬರೋಬ್ಬರಿ 106 ಕೋಟಿ ಸಂಗ್ರಹ: 37.86 ಲಕ್ಷ ಪ್ರಕರಣ ಇತ್ಯರ್ಥ

AI ವೀಡಿಯೊ ಮೂಲಕ ಪ್ರಧಾನಿ ಮೋದಿ ಮತ್ತು ಅವರ ದಿವಂಗತ ತಾಯಿಯ ತೇಜೋವಧೆ: Congress, ಐಟಿ ಸೆಲ್ ವಿರುದ್ಧ ಎಫ್ಐಆರ್

ಯಾರೂ ಭಾರತ-ಪಾಕ್ ಪಂದ್ಯ ನೋಡಬೇಡಿ, TV ಆಫ್ ಮಾಡಿ: ಪಹಲ್ಗಾಮ್ ಬಲಿಪಶು ಶುಭಂ ದ್ವಿವೇದಿ ಪತ್ನಿ ಕರೆ

SCROLL FOR NEXT