ಭೂಕಂಪಕ್ಕೂ ಹುಣ್ಣಿಮೆಗೂ ಏನು ಸಂಬಂಧ? ಎಂದು ಕೇಳಿದರೆ ಅದಕ್ಕೆ ಉತ್ತರ ಹೌದು. ಜಗತ್ತಿನಲ್ಲಿ ಸಂಭವಿಸುತ್ತಿರುವ ಭೂಕಂಪಗಳಿಗೂ ಹುಣ್ಣಿಮೆ ಮತ್ತು ಅಮಾವಾಸ್ಯೆಯೊಂದಿಗೆ ಸಂಬಂಧವಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ದಕ್ಷಿಣ ಏಷ್ಯಾದಲ್ಲಿ ಸಂಭವಿಸಿದ ಭೂಕಂಪ ಎಂದು ಶಾಸ್ತ್ರಜ್ಞ ಡಾ ರಾಜಗೋಪಾಲ್ ಕಾಮತ್ ಹೇಳಿದ್ದಾರೆ. ಭೂಮಿಯ ಅಂತರ್ಭಾಗವು ದ್ರವರೂಪದಲ್ಲಿದೆ. ಹುಣ್ಣಿಮೆ ಅಥವಾ ಅಮಾವಾಸ್ಯೆಯ ಹೊತ್ತಲ್ಲಿ ಚಂದ್ರನು ಭೂಮಿಯನ್ನು ಹೆಚ್ಚು ಆಕರ್ಷಿಸುವಾಗ ಕಡಲ ಅಲೆಗಳು ಮಾತ್ರವಲ್ಲ ದ್ರವ ರೂಪದಲ್ಲಿರುವ ಭೂಗರ್ಭವೂ ಒತ್ತಡವನ್ನು ಅನುಭವಿಸುತ್ತದೆ.
ಈ ಒತ್ತಡದಿಂದಾಗಿ ಭೂಗರ್ಭದಲ್ಲಿರುವ ದ್ರವರೂಪಿ ಪದರವು ಚಲಿಸುವಾಗ ಭೂಕಂಪನ ಉಂಟಾಗುತ್ತದೆ. ಹುಣ್ಣಿಮೆಯ ಹೊತ್ತು ಇದು ಮತ್ತಷ್ಟು ಉಗ್ರ ರೂಪವನ್ನು ಪಡೆಯುತ್ತದೆ.
ಅಕ್ಟೋಬರ್ 24 ರಂದು ಸೂರ್ಯದಿಂದ ಅತಿ ಪ್ರಬಲವಾದ ಇಲೆಕ್ಟ್ರೋ ಮ್ಯಾಗ್ನೆಟಿಕ್ ವಿಕಿರಣ ಹೊರಸೂಸಲ್ಪಟ್ಟಿತ್ತು. ಈ ವಿಕಿರಣವು ಎರಡು ದಿನಗಳಲ್ಲಿ ಭೂಮಿಗೆ ಸೋಕಲಿದೆ ಎಂದು ತಜ್ಞರು ಹೇಳಿದ್ದರು.
ಆ ವಿಕಿರಣವು ಭೂಮಿಯ ಕೆಲವೊಂದು ಭಾಗಗಳನ್ನು ಸೋಕಿದರ ಫಲವಾಗಿ ಹಿಂದೂಕುಷ್‌ನಲ್ಲಿ ಭೂಕಂಪ ಸಂಭವಿಸಿದೆ ಎಂದು ಡಾ. ಕಾಮತ್ ವಾದಿಸುತ್ತಿದ್ದಾರೆ.