ವೆಬ್‌ಸೈಟ್‌ಗಳಲ್ಲಿ ಅನಿಮೇಷನ್, ಗೇಮ್ಸ್, ವಿಡಿಯೋ, ದನಿ ಎಲ್ಲವನ್ನೂ ಕೇಳಲು ಸಹಾಯವಾಗುವ ಸಾಫ್ಟ್‌ವೇರ್ ಆಗಿದೆ ಫ್ಲಾಶ್. ನಾವು ಬಳಸುವ ವಿವಿಧ ವೆಬ್‌ಸೈಟ್‌ಗಳಲ್ಲಿ ಈ ಫ್ಲಾಶ್ ಸಾನಿಧ್ಯ ಇದ್ದೇ ಇರುತ್ತದೆ. ಆದರೆ ಫ್ಲಾಶ್ ಸಾಫ್ಟ್‌ವೇರ್‌ನ್ನು ಕ್ರೋಮ್ ಬ್ರೌಸರ್‌ನಿಂದಲೇ ದೂರ ಮಾಡಲು ಗೂಗಲ್ ಚಿಂತನೆ ನಡೆಸಿದೆ. ಈ ವರ್ಷಾಂತ್ಯದಲ್ಲಿ ಕ್ರೋಮ್ ನಿಂದ ಫ್ಲಾಶ್ ಪ್ಲೇಯರ್‌ಗೆ ವಿದಾಯ ಹೇಳಲು ಗೂಗಲ್ ಸಿದ್ಧತೆ ನಡೆಸಿದೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.
ಅಂದಹಾಗೆ ಕ್ರೋಮ್ ಬ್ರೌಸರ್ ನಿಂದ ಫ್ಲಾಶ್ ನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ ಎಂದರ್ಥವಲ್ಲ. ಕ್ರೋಮ್‌ನಲ್ಲಿ ಫ್ಲಾಶ್ ಬಳಸಬೇಕಾದರೆ ಬಳಕೆದಾರರ ಅನುಮತಿ ಬೇಕು ಅಷ್ಟೇ. ಅನುಮತಿ ಇಲ್ಲದೆಯೇ ಇದನ್ನು ಬಳಸಲಾಗುವುದಿಲ್ಲ. ಫ್ಲಾಶ್ ಇರುವ ವೆಬ್‌ಸೈಟ್‌ಗಳನ್ನು ಗೂಗಲ್ ಕ್ರೋಮ್ ನಲ್ಲಿ ಓಪನ್ ಮಾಡಿದಾಗ ಅಲ್ಲಿ ಫ್ಲಾಶ್ ಬ್ಲಾಕ್ ಆಗಿರುತ್ತದೆ. ಫ್ಲಾಶ್ ಇನೇಬಲ್ ಮಾಡಿದರೆ ಮಾತ್ರ ಫ್ಲಾಶ್ ನ್ನು ಬಳಸಬಹುದಾಗಿದೆ.
ಹಾಗಾಗಿ ಕ್ರೋಮ್‌ನಲ್ಲಿ ವೆಬ್‌ಸೈಟ್ ಓಪನ್ ಮಾಡುವಾಗ ಫ್ಲಾಶ್ ಇನೇಬಲ್ ಮಾಡಬೇಕೇ? ಬೇಡವೇ? ಎಂಬ ಪ್ರಶ್ನೆಯೊಂದಿಗೆ ಪಾಪ್ ಅಪ್ ತೆರೆದುಕೊಳ್ಳುತ್ತದೆ. ಒಂದ್ಸಾರಿ ಇನೇಬಲ್ ಮಾಡಿದರೆ, ಇನ್ನೊಂದ್ಸಾರಿ ಅದೇ ವೆಬ್‌ಸೈಟ್ ಓಪನ್ ಮಾಡುವಾಗ ಈ ಪೋಪ್ ಅಪ್ ಕಾಣಿಸುವುದಿಲ್ಲ.
ಯೂಟ್ಯೂಬ್, ಫೇಸ್‌ಬುಕ್, ಯಾಹೂ, ಅಮೆಜಾನ್ ಮೊದಲಾದ 10 ಪ್ರಮುಖ ವೆಬ್‌ಸೈಟ್‌ಗಳಲ್ಲಿ ಫ್ಲಾಶ್ ಬ್ಲಾಕ್ ಮಾಡುವುದಕ್ಕೆ ವಿನಾಯಿತಿ ನೀಡಲಾಗಿದೆ. ಈ ಸೈಟ್‌ಗಳಲ್ಲಿ ಪಾಪ್ ಅಪ್ ವೀಡಿಯೋದಿಂದ ಬಳಕೆದಾರರು ಕಿರಿಕಿರಿ ಅನುಭವಿಸದಿರಲು ಈ ವಿನಾಯಿತಿ ನೀಡಲಾಗಿದೆ. ಒಂದು ವರ್ಷ ಮಾತ್ರ ಈ ವಿನಾಯಿತಿ ನೀಡಲಾಗುತ್ತಿದ್ದು, ಈ ಕಾಲಾವಧಿ ಮುಗಿದ ನಂತರ ಫ್ಲಾಶ್ ಬ್ಲಾಕ್ ಮಾಡಲ್ಪಡುವುದು.