ವಿಜ್ಞಾನ-ತಂತ್ರಜ್ಞಾನ

ಫೇಸ್ ಬುಕ್ ಲೈವ್ ವಿಡಿಯೋನಲ್ಲಿ ಆತ್ಮಹತ್ಯೆ ತಡೆಗೆ ಟೂಲ್ಸ್ ಅಳವಡಿಕೆ!

Sumana Upadhyaya
ನ್ಯೂಯಾರ್ಕ್: ಫೇಸ್ಬುಕ್ ಲೈವ್ ವಿಡಿಯೊ ಬಳಸಿಕೊಂಡು ಜನರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಕಂಡುಬಂದರೆ ಅಂತವರನ್ನು ಗುರುತಿಸಿ ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ತಪ್ಪಿಸಲು ಟೂಲ್ ವೊಂದನ್ನು ಫೇಸ್ಬುಕ್ ಕಂಪೆನಿ ಜಾರಿಗೆ ತರಲಿದೆ.
ಫೇಸ್ಬುಕ್ ಬಳಸುತ್ತಿರುವಾಗ ಲೈವ್ ವಿಡಿಯೊ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದವರನ್ನು ಬಳಕೆದಾರರು ಸಂಪರ್ಕಿಸುವ ಹೊಸ ಆಯ್ಕೆಯನ್ನು ನೀಡಲಿದೆ. 
ಎಬಿಸಿ ನ್ಯೂಸ್ ನಲ್ಲಿ ಬಂದಿರುವ ವರದಿ ಪ್ರಕಾರ, ಫೇಸ್ಬುಕ್ ನಲ್ಲಿ ವೈಯಕ್ತಿಕವಾಗಿ ಸಂಪರ್ಕಿಸುವುದು ವಿಶಿಷ್ಟ ವಿಧಾನವಾಗಿದ್ದು, ಒತ್ತಡದಲ್ಲಿ ಸಾಯಲು ಹೊರಟಿರುವ ವ್ಯಕ್ತಿಗಳ ಜೊತೆ ಸಂಪರ್ಕ ಸಾಧಿಸಿ ಅವರನ್ನು ಆ ನಿರ್ಧಾರದಿಂದ ಹೊರಬರಲು ಜನತೆ ಮುಂದಾಗಬಹುದು. 
ಇನ್ನೊಂದು ಪ್ರಯೋಜನವೆಂದರೆ ಲೈವ್ ವಿಡಿಯೊ ಮಾಡುವ ವ್ಯಕ್ತಿಗೆ ಸಹಾಯ ಮಾಡುವ ವ್ಯಕ್ತಿಯ, ಸ್ನೇಹಿತರ ಸಂಪರ್ಕವನ್ನು ನೀಡುವಂತೆ ಫೋನ್ ಸ್ಕ್ರೀನ್ ಮೇಲೆ ಪಾಪ್ ಅಪ್ ಮಾಡಬಹುದು. ಅಥವಾ ತುರ್ತು ಸಹಾಯಕರಿಗೆ ವ್ಯಕ್ತಿಯನ್ನು ಸಂಪರ್ಕಿಸಿ ಕೊಡಬಹುದು. 
ಹೊಸ ಸೌಲಭ್ಯವನ್ನು ಫೇಸ್ ಬುಕ್ ಪೋಸ್ಟ್ ನಲ್ಲಿ ಅಳವಡಿಸಲಾಗುತ್ತಿದ್ದು, ಆತ್ಮಹತ್ಯೆ ಅಥವಾ ಸ್ವ ಗಾಯ ಮಾಡಿಕೊಳ್ಳುವ ವ್ಯಕ್ತಿಯ ಬಗ್ಗೆಯೂ ವರದಿ ನೀಡಲಿದೆ.
ಫೇಸ್ ಬುಕ್ ನ ಮೆಸೆಂಜರ್ ಮೂಲಕ ಒತ್ತಡದಲ್ಲಿರುವ ವ್ಯಕ್ತಿಗಳಿಗೆ ಮಾನಸಿಕ ತಜ್ಞರು, ತುರ್ತು ಸಹಾಯಕರನ್ನು ಸಂಪರ್ಕಿಸಲು ಹೊಸ ಸೌಲಭ್ಯ ನೆರವಾಗಲಿದೆ.
SCROLL FOR NEXT