ಸಂಗ್ರಹ ಚಿತ್ರ 
ವಿಜ್ಞಾನ-ತಂತ್ರಜ್ಞಾನ

ಮಾನವ ಸಹಿತ ಬಾಹ್ಯಾಕಾಶ ನೌಕೆ ಜಿಎಸ್ ಎಲ್ ವಿ ಮಾರ್ಕ್-3 ವಿಶೇಷತೆ!

ಸಂಪೂರ್ಣ ಸ್ವದೇಶಿ ನಿರ್ಮಿತ ಮೊಟ್ಟ ಮೊದಲ ಮಾನವ ಸಹಿತ ಬಾಹ್ಯಾಕಾಶ ನೌಕೆ ಎಂಬ ಕೀರ್ತಿಗೆ ಪಾತ್ರವಾಗಿರುವ ಜಿಎಸ್ಎಲ್ ವಿ ಮಾರ್ಕ್-3 ಬಾಹ್ಯಾಕಾಶ ನೌಕೆ ಹಲವು ವಿಶೇಷತೆ ಹೊಂದಿದ್ದು, ತನ್ನ ಎತ್ತರ ಮತ್ತು ತೂಕದಿಂದಲೇ ಇಡೀ ವಿಶ್ವದ ಗಮನ ಸೆಳೆಯುತ್ತಿದೆ.

ನವದೆಹಲಿ: ಸಂಪೂರ್ಣ ಸ್ವದೇಶಿ ನಿರ್ಮಿತ ಮೊಟ್ಟ ಮೊದಲ ಮಾನವ ಸಹಿತ ಬಾಹ್ಯಾಕಾಶ ನೌಕೆ ಎಂಬ ಕೀರ್ತಿಗೆ ಪಾತ್ರವಾಗಿರುವ ಜಿಎಸ್ಎಲ್ ವಿ ಮಾರ್ಕ್-3 ಬಾಹ್ಯಾಕಾಶ ನೌಕೆ ಹಲವು ವಿಶೇಷತೆ ಹೊಂದಿದ್ದು, ತನ್ನ ಎತ್ತರ ಮತ್ತು  ತೂಕದಿಂದಲೇ ಇಡೀ ವಿಶ್ವದ ಗಮನ ಸೆಳೆಯುತ್ತಿದೆ.

ಇಸ್ರೊ ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಭೂಸ್ಥಿರ ಉಪಗ್ರಹ ಉಡಾವಣಾ ವಾಹನ (ಜಿಎಸ್‌ಎಲ್‌ವಿ) ಮಾರ್ಕ್ 3, ಒಟ್ಟು 640 ಟನ್ ತೂಕವಿದ್ದು, ಅಂದರೆ 200 ಏಷ್ಯಾ ಆನೆಗಳಷ್ಟು (ಏಷ್ಯಾ ಆನೆಗಳ ಸರಾಸರಿ ತೂಕ 3ಟನ್‌) ತೂಕವಿದೆ. ನೌಕೆಯು 43.43 ಮೀಟರ್ ಎತ್ತರವಿದ್ದು, 4.0 ಮೀಟರ್ ಸುತ್ತಳತೆಯನ್ನು ಹೊಂದಿದೆ. ಅಂತೆಯೇ ನೌಕೆಯು ಬರೊಬ್ಬರಿ 4 ಸಾವಿರ ಕಿಲೋ ತೂಕದ ಭಾರ ಹೊರುವ ಸಾಮರ್ಥ್ಯವನ್ನು ಹೊಂದಿದ್ದು, ನೌಕೆಗೆ ಮೂರು ಹಂತದ ಉಡಾವಣಾ ವ್ಯವ್ಯಸ್ಥೆಯನ್ನು ಅಳವಡಿಸಲಾಗಿದ್ದು, ಮೊದಲ ಹಂತದಲ್ಲಿರುವ ಎಸ್ 200 ಸಾಲಿಡ್ ಮೊಟಾರ್ ಮೊದಲ ಹಂತದಲ್ಲಿ ನೌಕೆ ಉಡಾವಣೆಯಾಗಲು ನೆರವಾಗುತ್ತದೆ. ಸುಮಾರು 130 ಸೆಕೆಂಡ್ ಗಳ ಕಾಲ ಈ ಎಂಜಿನ್ ಉರಿಯುತ್ತದೆ. ಎರಡನೇ ಹಂತದಲ್ಲಿ ನೌಕೆ ಎಲ್ 110 ಎಂಜಿನ್ ಅನ್ನು ಬಳಕೆ ಮಾಡಿಕೊಳ್ಳಲಿದ್ದು, ಈ ಎಂಜಿನ್ ಗೆ ಧ್ರವ ರೂಪದ ಇಂಧನವನ್ನು ಅಳವಡಿಸಲಾಗಿರುತ್ತದೆ. ಎಸ್ 200 ಎಂಜಿನ್ ನೌಕೆಯಿಂದ ಬೇರ್ಪಡುವ ಮೊದಲು ಈ ಎಂಜಿನ್ ತನ್ನ ಕೆಲಸ ಆರಂಭಿಸುತ್ತದೆ.

ಮೂರನೇ ಹಂತದಲ್ಲಿ ಸಿ25 ಎಂಜಿನ್ ಅನ್ನು ನೌಕೆ ಬಳಕೆ ಮಾಡಿಕೊಳ್ಳಲ್ಲಿದ್ದು, ಪ್ರಸ್ತುತ ಭಾರತದಲ್ಲಿರುವ ಅತ್ಯಂತ ಶಕ್ತಿಶಾಲಿ ಎಂಜಿನ್ ಇದಾಗಿದೆ. ಸಿ25 ಕ್ರಯೋಜನಿಕ್ ಎಂಜಿನ್ ಆಗಿದ್ದು, 27 ಟನ್ ತೂಕದ ಘನ ಇಂಧನವನ್ನು ಈ ಎಂಜಿನ್ ಬಳಕೆ ಮಾಡಿಕೊಳ್ಳಲಿದೆ. ಇಸ್ರೊದ, ಮಾನವಸಹಿತ ಬಾಹ್ಯಾಕಾಶ ಯಾನದ ಕನಸನ್ನು ನನಸು ಮಾಡುವಲ್ಲಿ ಈ ರಾಕೆಟ್ ಮಹತ್ವದ ಪಾತ್ರ ವಹಿಸಲಿದ್ದು,  ಸುಮಾರು ರು. 25,000 ಕೋಟಿ ವೆಚ್ಚವಾಗುವ ಇಸ್ರೊದ ಸಾಹಸಕ್ಕೆ ಕೇಂದ್ರ ಸರ್ಕಾರ ಇನ್ನಷ್ಟೇ ಒಪ್ಪಿಗೆ ಸೂಚಿಸಬೇಕಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟ ಕೇಂದ್ರದಲ್ಲಿ ಸಜ್ಜುಗೊಂಡಿರುವ ಈ ರಾಕೆಟ್‌ಗೆ ಜಿಎಸ್‌ಎಲ್‌ವಿ ಎಂಕೆ-3 ಎಂದು ಹೆಸರಿಸಲಾಗಿದ್ದು ಭಾರತದಲ್ಲಿ ತಯಾರಾದ ಅತ್ಯಧಿಕ ಭಾರದ ರಾಕೆಟ್ ಇದಾಗಿದೆ. ಇದು ಭಾರೀ ತೂಕದ  ಉಪಗ್ರಹಗಳನ್ನು ಅಂತರಿಕ್ಷಕ್ಕೆ ಕೊಂಡೊಯ್ಯಲು ಸಮರ್ಥವಾಗಿದೆ. ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಕ್ರಯೋಜೆನಿಕ್ ಎಂಜಿನ್ ಇರುವ ಮಾರ್ಕ್‌ 3, ಭೂಸಮನ್ವಯ ಕಕ್ಷೆಗೆ 4 ಟನ್‌ ತೂಕದ ಉಪಗ್ರಹಗಳನ್ನು  ಒಯ್ಯುವ ಸಾಮರ್ಥ್ಯ ಹೊಂದಿದೆ. ಈ ಎಂಜಿನ್‌ ನ ಪರೀಕ್ಷೆ ಈಗಾಗಲೇ ಯಶಸ್ವಿಯಾಗಿ ನಡೆದಿದೆ. ಆದರೆ ಮಾರ್ಕ್‌ 3ನಲ್ಲಿ ಅಳವಡಿಸಿ, ಮತ್ತೊಮ್ಮೆ ಪರೀಕ್ಷೆ ನಡೆಸಬೇಕಿದೆ. ಈ ನೌಕೆ ಮೂಲಕ ಬಿಲಿಯಾಂತರ ಡಾಲರ್ ವ್ಯವಹಾರದ  ವಿಶ್ವ ಉಡ್ಡಯನ ಮಾರುಕಟ್ಟೆಗೆ ಪ್ರವೇಶಿಸುವ ಅಪೂರ್ವ ಅವಕಾಶವನ್ನು ಇಸ್ರೊ ಪಡೆಯಲಿದೆ . ಈ ನಿಟ್ಟಿನಲ್ಲಿ ಪರೀಕ್ಷಾ ಪ್ರಯೋಗದ ಯಶಸ್ಸಿಗಾಗಿ ಸರ್ವ ಸಿದ್ಧತೆಯನ್ನೂ ನಡೆಸಲಾಗುತ್ತಿದೆ ಎಂದು ಇಸ್ರೊ ಅಧ್ಯಕ್ಷ ಎ.ಎಸ್.ಕಿರಣ್  ಕುಮಾರ್ ತಿಳಿಸಿದ್ದಾರೆ.

ಇನ್ನು ಈ ಮಹತ್ವದ ನೌಕೆಯನ್ನು ಜೂನ್‌ ಮೊದಲ ವಾರದಲ್ಲಿ ಪರೀಕ್ಷೆಗೆ ಒಳಪಡಿಸಲಾಗುವುದು. ಅಲ್ಲದೆ ಆರಕ್ಕೂ ಹೆಚ್ಚು ಬಾರಿ ಪರೀಕ್ಷೆ ನಡೆಸಲಾಗುತ್ತದೆ. ಇದು ಯಶಸ್ವಿಯಾದರೆ ಭಾರತದ ನೆಲದಿಂದ ಭಾರತೀಯರನ್ನು  ಅಂತರಿಕ್ಷಕ್ಕೆ ಕೊಂಡೊಯ್ಯಬಲ್ಲ ಭಾರತದಲ್ಲೇ ತಯಾರಾದ ಮೊಟ್ಟ ಮೊದಲ ರಾಕೆಟ್ ಎಂಬ ಕೀರ್ತಿಗೆ ಪಾತ್ರವಾಗಲಿದೆ.

ಪ್ರಯೋಜನಗಳು
ರಾಕೆಟ್‌ ಭಾರಿ ವೆಚ್ಚದ್ದಾಗಿದ್ದರೂ, ಭಾರಿ ತೂಕದ ಸಂಪರ್ಕ ಉಪಗ್ರಹಗಳನ್ನು ಇಸ್ರೊ ಉಡಾವಣೆ ಮಾಡಬಹುದು. ಅಂತೆಯೇ * ಈಗ ಭಾರತದ ಭಾರಿ ತೂಕದ ಉಪಗ್ರಹಗಳನ್ನು ವಿದೇಶಿ ಏರಿಯಾನ್ ರಾಕೆಟ್ ಮೂಲಕ ಉಡಾವಣೆ  ಮಾಡಲಾಗುತ್ತಿದ್ದು, ಜಿಎಸ್ಎಲ್ ವಿ ಮಾರ್ಕ್ 3 ಮೂಲಕ  ಈ ಶುಲ್ಕ ಉಳಿಯುತ್ತದೆ. ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ ಈ ನೌಕೆ ನೆರವಾಗಲಿದ್ದು, ಆ ಮೂಲಕ ರಷ್ಯಾ, ಅಮೆರಿಕ ಮತ್ತು ಚೀನಾಗಳ ಸಾಲಿಗೆ ಭಾರತ ಸೇರಲಿದೆ

15 ವರ್ಷಗಳ ಶ್ರಮ
ಈ ರಾಕೆಟ್‌ನಲ್ಲಿ ಬಳಕೆಯಾಗಲಿರುವ ಕ್ರಯೋಜೆನಿಕ್ ಎಂಜಿನ್‌ ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಯಾದದ್ದು. ಭಾರಿ ತೂಕದ ಉಪಗ್ರಹಗಳನ್ನು ಹೊತ್ತೊಯ್ಯಲು ಈ ಎಂಜಿನ್ ಸಹಕಾರಿ. 1990ರ ದಶಕದಲ್ಲಿ ರಷ್ಯಾ ಈ  ತಂತ್ರಜ್ಞಾನವನ್ನು ಭಾರತಕ್ಕೆ ನೀಡಲು ಒಪ್ಪಿತ್ತು. ಆದರೆ, ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಭಾರತ ಸಹಿ ಮಾಡದ್ದನ್ನು, ನೆಪವಾಗಿಸಿಕೊಂಡು ಇಸ್ರೊಗೆ ಈ ತಂತ್ರಜ್ಞಾನ ದೊರೆಯುವುದನ್ನು ಅಮೆರಿಕ ತಪ್ಪಿಸಿತ್ತು. ಇಂಧನ ಅಥವಾ  ನೋದಕಗಳ ಮಿಶ್ರಣಗಳ ಸಂಕೀರ್ಣ ಸೂತ್ರ ಇರುವ, ಈ ತಂತ್ರಜ್ಞಾನದ ಸಂಶೋಧನೆಯನ್ನು ಇಸ್ರೊ ಎಂಜಿನಿಯರ್‌ಗಳು 2001ರಲ್ಲಿ ಆರಂಭಿಸಿದ್ದರು. 2010ರಲ್ಲಿ ಈ ಎಂಜಿನ್ ಬಳಸಿ ನಡೆಸಿದ್ದ ಉಡಾವಣೆ ವಿಫಲವಾಗಿತ್ತು.  ಆನಂತರ ಈ ಎಂಜಿನ್‌ ಅನ್ನು ಇಸ್ರೊ ಮತ್ತಷ್ಟು ಅಭಿವೃದ್ಧಿಪಡಿಸಿದೆ. 2014ರಲ್ಲಿ ಈ ಎಂಜಿನ್‌ ಇದ್ದ ರಾಕೆಟ್ ಮೂಲಕ ಎರಡು ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದಳಪತಿ ವಿಜಯ್ ಅಭಿನಯದ 'ಜನ ನಾಯಗನ್'

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

SCROLL FOR NEXT