ವಿಜ್ಞಾನ-ತಂತ್ರಜ್ಞಾನ

ಚಂದ್ರಯಾನ-2 ಯೋಜನೆಗೆ 800 ರೂ ಕೋಟಿ ವೆಚ್ಚ!

Srinivas Rao BV
ನವದೆಹಲಿ: ಚಂದ್ರನ ಅಧ್ಯಯನಕ್ಕಾಗಿ ಭಾರತ ಕೈಗೊಂಡಿರುವ ಚಂದ್ರಯಾನ-2 800 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ತಿಳಿಸಿದ್ದಾರೆ. 
ಚಂದ್ರಯಾನ-2 ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಉಡಾವಣೆಯಾಗುವ ನಿರೀಕ್ಷೆ ಇದ್ದು, ಇಸ್ರೋ ಅಧ್ಯಕ್ಷ ಕೆ ಶಿವನ್ ಚಂದ್ರಯಾನಕ್ಕೆ ತಗುಲುವ ವೆಚ್ಚದ ಬಗ್ಗೆ ಮಾಹಿತಿ ನೀಡಿದ್ದಾರೆ.  ಉಪಗ್ರಹಕ್ಕೆ 600 ಕೋಟಿ ರೂಪಾಯಿ ಹಾಗೂ ಉಡಾವಣೆಗೆ 200 ಕೋಟಿ ರೂಪಾಯಿ ಸೇರಿ ಚಂದ್ರಯಾನ-2 ಕ್ಕೆ ಒಟ್ಟಾರೆ 800 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಹೇಳಿದ್ದಾರೆ. 
ಚಂದ್ರನಲ್ಲಿರುವ ಮಣ್ಣಿನ ಬಗ್ಗೆ ಅಧ್ಯಯನ ನಡೆಸುವುದಕ್ಕೆ ಚಂದ್ರಯಾನ-2 ಸಹಕಾರಿಯಾಗಲಿದೆ. ಈ ಬಗ್ಗೆ ಮಾತನಾಡಿರುವ ಸಚಿವ ಜಿತೇಂದ್ರ ಸಿಂಗ್  ಚಂದ್ರಯಾನ-2 ಉಪಕರಣಗಳನ್ನು ಸಂಪೂರ್ಣ ದೇಶಿಯವಾಗಿ ನಿರ್ಮಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. 
SCROLL FOR NEXT