ವಿಜ್ಞಾನ-ತಂತ್ರಜ್ಞಾನ

ಕ್ಲೌಡ್ ಕೃಪೆ: ಅತಿ ಹೆಚ್ಚು ಮೌಲ್ಯಯುತವಾದ ಕಂಪನಿ: ಆಪಲ್ ನ್ನು ಹಿಂದಿಕ್ಕಿದ ಮೈಕ್ರೋಸಾಫ್ಟ್!

Srinivas Rao BV
2013 ರಿಂದ ಪಿಸಿಗಳ ಖರೀದಿ ಕುಸಿದಿದ್ದರ ಪರಿಣಾಮ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಎದುರಿಸಿದ್ದ ಮೈಕ್ರೋಸಾಫ್ಟ್ ಕೌಲ್ಡ್ ಕಂಪ್ಯೂಟಿಂಗ್ ನ ಕೃಪೆಯಿಂದಾಗಿ ಆಪಲ್ ಸಂಸ್ಥೆಯನ್ನು ಹಿಂದಿಕ್ಕಿ ಜಗತ್ತಿನ ಅತಿ ಮೌಲ್ಯಯುತವಾದ ವಹಿವಾಟು ನಡೆಸುತ್ತಿರುವ ಸಂಸ್ಥೆಯಾಗಿ ಹೊರಹೊಮ್ಮಿದೆ. 
ಪರ್ಸನಲ್ ಕಂಪ್ಯೂಟರ್ ಗಳ ಖರೀದಿ ಕುಸಿದಿದ್ದರ ಪರಿಣಾಮವಾಗಿ ಮೈಕ್ರೋಸಾಫ್ಟ್ ನ ಉದ್ಯಮ ಕ್ಷೀಣಿಸಿತ್ತು. ಆದರೆ ಸಿಇಒ ಸತ್ಯ ನಾದೆಳ್ಲ ಅವರ ನೇತೃತ್ವದಲ್ಲಿ ಸ್ಥಿರತೆ ಕಂಡುಕೊಂಡಿದ್ದು, ಸಾಫ್ಟ್ ವೇರ್ ಹಾಗೂ ಸೇವೆಗಳತ್ತ ಹೆಚ್ಚಿನ ಗಮನ ಹರಿಸಿ ದೀರ್ಘಾವಧಿಯ ಉದ್ಯಮ ಗುತ್ತಿಗೆಳನ್ನು ಪಡೆಯುವ ಮೂಲಕ ಆಪಲ್ ಗೆ ಸೆಡ್ಡು ಹೊಡೆದು ನಿಂತಿದೆ. 
ಶುಕ್ರವಾರದಂದು ಆಪಲ್ ಸಂಸ್ಥೆಯ ಮೌಲ್ಯ(847 ಯುಎಸ್ ಡಿ) ವನ್ನು ಹಿಂದಿಕ್ಕಿದ್ದ ಮೈಕ್ರೋಸಾಫ್ಟ್ ಸಂಸ್ಥೆ, 851 ಯುಎಸ್ ಡಿ ಮಾರುಕಟ್ಟೆ ಮೌಲ್ಯ ಹೊಂದಿದೆ. 
SCROLL FOR NEXT