ವಿಜ್ಞಾನ-ತಂತ್ರಜ್ಞಾನ

ಚಂದ್ರಯಾನಕ್ಕೆ 6 ದಶಕಗಳ ಇತಿಹಾಸ, ಸೋಲು ಯಾರನ್ನೂ ಬಿಟ್ಟಿಲ್ಲ ಎನ್ನುತ್ತಿದೆ ನಾಸಾ!

Srinivas Rao BV

ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2ದ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಆದರೇನಂತೆ ಇಸ್ರೋ ಶ್ರಮ ಎಂದಿಗೂ ಹೆಮ್ಮೆ ಪಡುವಂಥದ್ದು. ಚಂದ್ರನ ದಕ್ಷಿಣ ದಿಕ್ಕಿನತ್ತ ಹೊರಟಾಗಲೇ ಇಸ್ರೋ ಒಂದು ಹಂತದ ಯಶಸ್ಸನ್ನು ಗಳಿಸಿಕೊಂಡಿತ್ತು, ಆದರೆ ಕೊನೆಯ ಹಂತದಲ್ಲಿ ಎಲ್ಲವೂ ಅಂದುಕೊಂಡಂತೆ ನಡೆಯಲಿಲ್ಲವಷ್ಟೇ. 

ಜಗತ್ತಿನಲ್ಲಿ ಚಂದ್ರಯಾನದ ಪ್ರಯೋಗಗಳ ಇತಿಹಾಸ ಪುಟಗಳನ್ನು ತಿರುವಿ ಹಾಕಿದರೆ ಸೋಲಿನ ಸುದೀರ್ಘ ಅಧ್ಯಾಯಗಳು ತೆರೆದುಕೊಳ್ಳುತ್ತವೆ. ಭಾರತವಷ್ಟೇ ಅಲ್ಲ ಚಂದ್ರಯಾನವನ್ನು ಕೈಗೊಂಡ ಅನೇಕ ರಾಷ್ಟ್ರಗಳು ಮೊದಲ ಪ್ರಯತ್ನದಲ್ಲೇ ಸಂಭ್ರಮಾಚರಣೆ ಮಾಡಿದ ಉದಾಹರಣೆ ಇಲ್ಲವೇ ಇಲ್ಲ. 

ಲೂನಾರ್ ಮಿಷನ್ ನ ಇತಿಹಾಸವನ್ನು ತಿಳಿದುಕೊಳ್ಳೋಣ 

  1. ಅಮೆರಿಕದ ನಾಸಾದ ಮೂನ್ ಫ್ಯಾಕ್ಟ್ ಶೀಟ್ ನ ಪ್ರಕಾರ 60 ವರ್ಷಗಳಲ್ಲಿ ಕೈಗೊಂಡ ಚಂದ್ರಯಾನಗಳ ಪೈಕಿ ಸಕ್ಸಸ್ ರೇಟ್ ಇರುವುದು ಶೇ.60 ರಷ್ಟು. 6 ದಶಕಗಳಲ್ಲಿ ಕೈಗೊಂಡ 109 ಮಿಷನ್ ಲೂನಾರ್ ಮಿಷನ್ ಗಳ ಪೈಕಿ ಯಶಸ್ಸು ಕಂಡಿದ್ದು 61 ಮಾತ್ರ! ಉಳಿದ 48 ವಿಫಲ! 
  2. ಇಸ್ರೋ ಕೈ ಹಾಕಿದ್ದ ಪ್ರಯತ್ನ ಹಾಗೂ ತೆಗೆದುಕೊಂಡ ರಿಸ್ಕ್ ಸಾಮಾನ್ಯ ಪ್ರಮಾಣದ್ದಾಗಿರಲಿಲ್ಲ. ಇಸ್ರೋ ಯೋಜಿಸಿದ್ದ ಸಾಫ್ಟ್ ಲ್ಯಾಂಡಿಂಗ್ ಸಕ್ಸಸ್ ರೇಟ್ ಇದ್ದದ್ದೇ ಶೇ.37 ರಷ್ಟು!. ಇದಕ್ಕೆ ಪೂರಕವಾಗಿ ಏಪ್ರಿಲ್ ನಲ್ಲಿ ಇಸ್ರೇಲ್ ನ ಬೆರೆಶೀಟ್ ನೌಕೆ ಸಹ ಚಂದ್ರನ ಮೇಲ್ಮೈಗೆ ಅಪ್ಪಳಿಸಿ ಭಾರತ ಇಂದು ಎದುರಿಸಿರುವ ಸವಾಲನ್ನೇ ಎದುರಿಸಿತ್ತು.
  3. 1958-2019 ರ ಅವಧಿಯಲ್ಲಿ ಅಮೆರಿಕ, ಇಂದಿನ ರಷ್ಯಾ (ಅಂದಿನ ಯುಎಸ್ಎಸ್ಆರ್), ಜಪಾನ್ ಯುರೋಪಿಯನ್ ಯೂನಿಯನ್, ಚೀನಾ, ಇಸ್ರೇಲ್ ವಿವಿಧ ಉದ್ದೇಶಗಳನ್ನಿಟ್ಟುಕೊಂಡು ಈ ವರೆಗೂ ಚಂದ್ರಯಾನ ಕೈಗೊಂಡಿವೆ. 
  4. ಚಂದ್ರಯಾನ ಅಥವಾ ಮೊದಲ ಮಿಷನ್ ಮೂನ್ ಕೈಗೊಂಡಿದ್ದು ಅಮೆರಿಕ 1958 ರ ಆಗಸ್ಟ್ 17 ರಂದು, ಆದರೆ  ಅಮೆರಿಕ ಕಳಿಸಿದ್ದ ಪಯೋನಿರ್ 0 ವಿಫಲವಾಗಿತ್ತು. 
  5. ಅಮೆರಿಕ ಬಳಿಕ ಯುಎಸ್ಎಸ್ಆರ್ 1959 ರ ಜ.4 ರಂದು ಲೂನಾ1 ನ್ನು ಚಂದ್ರನತ್ತ ಕಳಿಸಿ ಯಶಸ್ಸು ಸಾಧಿಸಿತ್ತು. ಇದು ಚಂದ್ರನ ಮೇಲೆ ಹಾದುಹೋಗುವ ಬಾಹ್ಯಾಕಾಶ ನೌಕೆ. ಈ ಯಶಸ್ಸು ದೊರೆತಿದ್ದು 6 ನೇ ಮಿಷನ್ ನಲ್ಲಿ!
  6. ಒಂದು ವರ್ಷ 3 ತಿಂಗಳ ಅಂತರ (ಆಗಸ್ಟ್ 1958-ನವೆಂಬರ್ 1959) ದಲ್ಲಿ ಯುಎಸ್-ಯುಎಸ್ಎಸ್ ಆರ್ ಬರೊಬ್ಬರಿ   ಚಂದ್ರನಿಗೆ ಸಂಬಂಧಿಸಿದ 14 ಯಾನಗಳನ್ನು ಕೈಗೊಂಡಿದ್ದವು. ಈ ಪೈಕಿ ಯಶಸ್ಸು ಕಂಡಿದ್ದು ಲೂನಾ 1, ಲೂನಾ 2, ಲೂನಾ 3 ಮಾತ್ರ, ಎಲ್ಲವೂ ಯುಎಸ್ಎಸ್ ಆರ್ ನದ್ದು! 
  7. 1964 ರಲ್ಲಿ ಅಮೆರಿಕದ ರೇಂಜರ್-7 ಮಿಷನ್ ಚಂದ್ರನ ಚಿತ್ರಗಳನ್ನು ಮೊದಲ ಬಾರಿಗೆ ಹತ್ತಿರದಿಂದ ಕ್ಲಿಕ್ಕಿಸಿತ್ತು.
  8. 1966 ರಲ್ಲಿ ಯುಎಸ್ಎಸ್ ಆರ್ ಕಳಿಸಿದ್ದ ಲೂನಾ 9 ನೌಕೆ ಮೊದಲ ಬಾರಿಗೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿ ಚಂದ್ರನ ಮೇಲ್ಮೈ ಚಿತ್ರಗಳನ್ನು ಕ್ಲಿಕ್ಕಿಸಿತ್ತು. ರಷ್ಯಾದ ಯಶಸ್ಸಿನ 5 ತಿಂಗಳ ನಂತರ 1966 ರ ಮೇ ತಿಂಗಳಲ್ಲಿ ಅಮೆರಿಕ ಸರ್ವೇಯರ್-1 ಮೂಲಕ ರಷ್ಯಾ ಮಾದರಿಯ ಸಾಧನೆಯನ್ನೇ ಮಾಡಿತ್ತು. 
  9. 1958-79 ರ ಅವಧಿಯಲ್ಲಿ ಅಮೆರಿಕ ಹಾಗೂ ರಷ್ಯಾ ಚಂದ್ರನಿಗೆ ಸಂಬಂಧಪಟ್ಟ ಬರೊಬ್ಬರಿ 90 ಮಿಷನ್ ಗಳನ್ನು ಕೈಗೊಂಡಿವೆ. ಜಪಾನ್, ಯುರೋಪಿಯನ್ ಯೂನಿಯನ್, ಚೀನಾ, ಭಾರತ, ಇಸ್ರೇಲ್ ನದ್ದು ನಂತರದ ಪ್ರವೇಶ. 
  10. 1990 ರ ಜನವರಿಯಲ್ಲಿ ಜಪಾನ್ ಮೊದಲ ಬಾರಿಗೆ ಚಂದ್ರಯಾನ ಕೈಗೊಂಡಿತ್ತು. ಈ ಬಳಿಕ 2007 ರಲ್ಲಿ ಮತ್ತೊಮ್ಮೆ ಆರ್ಬಿಟರ್ ಮಿಷನ್ ನ್ನು ಕೈಗೊಂಡಿತ್ತು. 
  11. 2000-2009 ರ ಅವಧಿಯಲ್ಲಿ ಯುರೋಪ್( ಸ್ಮಾರ್ಟ್-1), ಜಪಾನ್ (ಸೆಲೀನ್) ಚೀನಾ (ಚಾಂಗ್'ಇ 1) ಭಾರತ (ಚಂದ್ರಯಾನ-1) ಹಾಗೂ ಅಮೆರಿಕ (ಚಂದ್ರ ವಿಚಕ್ಷಣ ಆರ್ಬಿಟರ್ ಹಾಗೂ ಎಲ್ ಸಿಸಿಆರ್ ಒಎಸ್ಎಸ್) ಎಂಬ 6 ಬಾಹ್ಯಾಕಾಶ ಮಿಷನ್ ಗಳು ನಡೆದಿವೆ. 
  12. 2009-19 ರವರೆಗೆ ಚಂದ್ರನಿಗೆ ಸಂಬಂಧಿಸಿದಂತೆ 10 ರಾಕೆಟ್ ಗಳ ಉಡಾವಣೆಯಾಗಿದ್ದು, ಈ ಪೈಕಿ ಭಾರತ 5 ನ್ನು ಕಳಿಸಿದ್ದರೆ 3 ಅಮೆರಿಕದ್ದು, ಈಗ ಇತ್ತೀಚೆಗೆ ಭಾರತ-ಇಸ್ರೇಲ್ ತಲಾ ಒಂದು ಉಡಾವಣೆ ಮಾಡಿವೆ. 
  13. 1990 ರಿಂದ ಅಮೆರಿಕ, ಜಪಾನ್, ಭಾರತ, ಚೀನಾ, ಇಸ್ರೇಲ್, ಯುರೋಪಿಯನ್ ಯೂನಿಯನ್ 19  ಚಂದ್ರಯಾನಗಳನ್ನು ಕೈಗೊಂಡಿವೆ. 
SCROLL FOR NEXT