ವಿಜ್ಞಾನ-ತಂತ್ರಜ್ಞಾನ

ಬಿ-ಸೆಂಟೌರಿ ಸುತ್ತ ಸುತ್ತುತ್ತಿರುವ ಈ ಅತಿದೊಡ್ಡ ಅನ್ಯಗ್ರಹ ಯಾವುದು?: ವಿಜ್ಞಾನಿಗಳಿಗೆ ಹೊಸ ಸವಾಲು

Lingaraj Badiger

ಅತಿದೊಡ್ಡ ಎಕ್ಸೋಪ್ಲಾನೆಟ್(ಅನ್ಯಗ್ರಹ)ವೊಂದು ಪತ್ತೆಯಾಗಿದ್ದು, ಇದು ಇದುವರೆಗೆ ಕಂಡುಹಿಡಿದ ಅತಿ ದೊಡ್ಡ ಅನ್ಯಗ್ರಹವಾಗಿದೆ. ಅಲ್ಲದೇ ಈ ಅತಿದೊಡ್ಡ ಅನ್ಯಗ್ರಹವನ್ನು ಕಂಡು ವಿಜ್ಞಾನಿಗಳೇ ಸ್ವತಃ ಗೊಂದಲಕ್ಕೀಡಾಗಿದ್ದಾರೆ.

ಈ ಬಿ ಸೆಂಟೌರಿಯು ಗ್ರಹಗಳ ದ್ವಿಮಾನ ವ್ಯವಸ್ಥೆಯ ನಕ್ಷತ್ರದ ಸುತ್ತ ಸುತ್ತುತ್ತಿದೆ. ಈ ಅನ್ಯಗ್ರಹವನ್ನು ನೋಡಿದ ವಿಜ್ಞಾನಿಗಳು ಈ ಬಿ-ಸೆಂಟೌರಿ ಗ್ರಹಗಳ ವ್ಯವಸ್ಥೆಯ ಸುತ್ತಲೂ ಅಂತಹ ಗ್ರಹವನ್ನು ಮೊದಲು ನೋಡಿರಲಿಲ್ಲ, ಹಾಗಾದರೆ ಅದು ಹೇಗೆ ಇದ್ದಕ್ಕಿದ್ದಂತೆ ಬಂತು? ಎಂದು ತಲೆಕೆಡಿಸ್ಕೊಂಡಿದ್ದಾರೆ.

ಬಿ ಸೆಂಟೌರಿ ನಮ್ಮ ಸೌರವ್ಯೂಹದಿಂದ 325 ಜ್ಯೋರ್ತಿವರ್ಷಗಳ ದೂರ, ಸೆಂಟಾರಸ್ ನಕ್ಷತ್ರಪುಂಜದಲ್ಲಿದೆ. ಇದರ ಮುಖ್ಯ ನಕ್ಷತ್ರವು ನಮ್ಮ ಸೂರ್ಯನಿಗಿಂತ ಮೂರು ಪಟ್ಟು ಹೆಚ್ಚು ಬಿಸಿಯಾಗಿರುತ್ತೆ‍. ಇದರ ಇತರ ಎರಡು ನಕ್ಷತ್ರಗಳು ನಮ್ಮ ಸೂರ್ಯನಿಗಿಂತ 6 ರಿಂದ 10 ಪಟ್ಟು ತೂಗುತ್ತವೆ. ನಮ್ಮ ಸೂರ್ಯನ ದ್ರವ್ಯರಾಶಿಗಿಂತ ಮೂರು ಪಟ್ಟು ಹೆಚ್ಚು ತೂಕವಿರುವ ಅಂತಹ ಯಾವುದೇ ಗ್ರಹವು ಇಲ್ಲಿಯವರೆಗೆ ಕಂಡುಬಂದಿಲ್ಲ.

ಈ ಹೊಸ ಅನ್ಯಗ್ರಹಕ್ಕೆ “ಬಿ ಸೆಂಟೌರಿ ಬಿ”ಅಂತ ಹೆಸರಿಡಲಾಗಿದೆ. ಇದರ ವಾತಾವರಣದ ಮಿಶ್ರಣವು ಗುರು ಗ್ರಹದಂತೆಯೇ ಇರುತ್ತೆ. ಆದರೆ ಇದು ಗುರು ಗ್ರಹಕ್ಕಿಂತ 10 ಪಟ್ಟು ದೊಡ್ಡದಾಗಿದೆ. ಇದು ವಿಜ್ಞಾನಿಗಳು ಕಂಡುಹಿಡಿದ ಅತಿ ದೊಡ್ಡ ಗ್ರಹವಾಗಿದೆ. ಇದು ತನ್ನ ಮುಖ್ಯ ನಕ್ಷತ್ರದಿಂದ ಸುಮಾರು 8368 ಮಿಲಿಯನ್ ಕಿಲೋಮೀಟರ್ ದೂರದಲ್ಲಿದೆ. ಇದು ತನ್ನ ನಕ್ಷತ್ರದ ಸುತ್ತ ಅತಿ ದೊಡ್ಡ ಕಕ್ಷೆಯಲ್ಲಿ ಸುತ್ತುತ್ತಿದೆ. ಅಷ್ಟು ದೊಡ್ಡ ಕಕ್ಷೆಯನ್ನು ಇನ್ನೂ ಕಂಡುಹಿಡಿಯಲಾಗಿಲ್ಲ.

ಖಗೋಳಶಾಸ್ತ್ರಜ್ಞರು ಚಿಲಿಯಲ್ಲಿರುವ ಯುರೋಪಿಯನ್ ಸದರ್ನ್ ಅಬ್ಸರ್ವೇಟರಿಯ ಅತಿ ದೊಡ್ಡ ದೂರದರ್ಶಕದಿಂದ ಈ ಗ್ರಹದ ಚಿತ್ರವನ್ನು ತೆಗೆದುಕೊಂಡಿದ್ದು, ಇದರ ಅಧ್ಯಯನವನ್ನು ಇತ್ತೀಚೆಗೆ ನೇಚರ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಬಿ ಸೆಂಟೌರಿ ಬಳಿ ಹೊಸ ಗ್ರಹ ಪತ್ತೆಯಾಗಿರುವುದು ಅಚ್ಚರಿ ತಂದಿದೆ ಎಂದು ಸ್ವೀಡನ್‌ನ ಸ್ಟಾಕ್‌ಹೋಮ್ ವಿಶ್ವವಿದ್ಯಾಲಯದ ಖಗೋಳಶಾಸ್ತ್ರಜ್ಞ ಮಾರ್ಕಸ್ ಜಾನ್ಸನ್ ಹೇಳಿದ್ದಾರೆ. ಈ ಬಿ ಸೌಂಟರಿ ಬಿ ಅನ್ಯಗ್ರಹ ದೊಡ್ಡ ನಕ್ಷತ್ರಗಳು ಮತ್ತು ಗ್ರಹಗಳ ಬಗ್ಗೆ ವಿಜ್ಣಾನಿಗಳಿಗೆ ಇದೂವರೆಗಿದ್ದ ಹಳೆಯ ನಂಬಿಕೆಗಳನ್ನು ನಾಶಪಡಿಸುತ್ತೆ ಎಂದಿದ್ದಾರೆ.

ಬಿ ಸೆಂಟೌರಿಯಲ್ಲಿರುವ ಗ್ರಹವು ಸಾಕಷ್ಟು ಚಿಕ್ಕದಾಗಿದೆ. ಇದರ ವಯಸ್ಸು 15 ಮಿಲಿಯನ್ ವರ್ಷಗಳು, ಆದರೆ ನಮ್ಮ ಸೂರ್ಯನ ವಯಸ್ಸು 460 ಮಿಲಿಯನ್ ವರ್ಷಗಳು. ಬಿ ಸೆಂಟೌರಿಯಲ್ಲಿ ಕಂಡುಬರುವ ಈ ಗ್ರಹದ ಜಗತ್ತು ಅನ್ಯಲೋಕದಂತಾಗಬಹುದು ಎಂದು ಸ್ಟಾಕ್ ಹೋಮ್ ವಿಶ್ವವಿದ್ಯಾಲಯದ ಪಿಎಚ್ ಡಿ ಸಂಶೋಧಕಿ ಗಾಯತ್ರಿ ವಿಶ್ವನಾಥ್ ಹೇಳಿದ್ದಾರೆ. ಇದು ಭೂಮಿಗಿಂತ ಅಥವ ಸೌರವ್ಯೂಹದ ಯಾವುದೇ ಗ್ರಹಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಎಂದಿದ್ದಾರೆ.

SCROLL FOR NEXT