ವಿಜ್ಞಾನ-ತಂತ್ರಜ್ಞಾನ

6.6 ಕೋಟಿ ವರ್ಷ ಹಳೆಯ ಡೈನೋಸಾರ್ ಭ್ರೂಣ ಸಂರಕ್ಷಿತ ಸ್ಥಿತಿಯಲ್ಲಿ ಪತ್ತೆ

Harshavardhan M

ವಾಷಿಂಗ್ಟನ್: ಅಮೆರಿಕ ಸಂಶೋಧಕರು ತಾವು ಸಂರಕ್ಷಿತ ಸ್ಥಿತಿಯಲ್ಲಿರುವ ಡೈನೋಸಾರ್(Oviraptorosaurs) ಭ್ರೂಣವನ್ನು ಪತ್ತೆ ಹಚ್ಚಿರುವುದಾಗಿ ತಿಳಿಸಿದ್ದಾರೆ. 

6.6 ಕೋಟಿ ವರ್ಷಗಳ ಹಿಂದೆ ಹಕ್ಕಿ ಪ್ರಭೇದಕ್ಕೆ ಸೇರಿದ ಡೈನೋಸಾರ್ ಮೊಟ್ಟೆ ಇದಾಗಿದೆ. ದಕ್ಷಿಣ ಚೀನಾದ ಗಾಂಜೊ ಪ್ರಾಂತ್ಯದಲ್ಲಿ ಈ ಪಳೆಯುಳಿಕೆ ಸಂಶೋಧಕರಿಗೆ ಲಭ್ಯವಾಗಿದೆ. 

ಇದುವರೆಗೂ ಸಿಕ್ಕ ಪಳೆಯುಳಿಕೆಗಳು ಕಾಲನ ಹೊಡೆತಕ್ಕೆ ಸಿಕ್ಕೋ, ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗಿಯೋ ಘಾಸಿಗೊಂಡಿತ್ತು.  ಇಷ್ಟೊಂದು ಸುಸ್ಥಿತಿಯಲ್ಲಿರುವ ಡೈನೊಸಾರ್ ಭ್ರೂಣ ಪತ್ತೆಯಾಗಿರುವುದು ಜಗತ್ತಿನಲ್ಲಿ ಇದೇ ಮೊದಲನೆಯದು ಎನ್ನಲಾಗಿದೆ. ಭ್ರೂಣದ ಅಳತೆ ಅಡಿಯಿಂದ ಮುಡಿಯವರೆಗೆ 27 ಸೆ.ಮೀ ಇದೆ.

SCROLL FOR NEXT