ವಿಜ್ಞಾನ-ತಂತ್ರಜ್ಞಾನ

ನಾವಿಕ್: ಭಾರತದ ದೇಶೀ ನಿರ್ಮಿತ ನ್ಯಾವಿಗೇಷನ್ ವ್ಯವಸ್ಥೆಯ ಕಡೆಗೊಂದು ನೋಟ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಭಿವೃದ್ಧಿ ಪಡಿಸಿರುವ, ನ್ಯಾವಿಗೇಷನ್ ವಿದ್ ಇಂಡಿಯನ್ ಕಾನ್ಸ್ಟೆಲ್ಲೇಷನ್ ಅಥವಾ ನಾವಿಕ್ ಒಂದು ಸ್ಟ್ಯಾಂಡ್ ಅಲೋನ್ ನ್ಯಾವಿಗೇಷನ್ ಸ್ಯಾಟಲೈಟ್ ವ್ಯವಸ್ಥೆಯಾಗಿದೆ.

- ಗಿರೀಶ್ ಲಿಂಗಣ್ಣ
ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಭಾರತ ಸರ್ಕಾರ ಸ್ಮಾರ್ಟ್ ಫೋನ್ ಉತ್ಪಾದನಾ ಸಂಸ್ಥೆಗಳಿಗೆ ಮುಂದಿನ ವರ್ಷದಿಂದ ಭಾರತದಲ್ಲಿ ಮಾರಾಟವಾಗುವ ಸ್ಮಾರ್ಟ್ ಫೋನಗಳಲ್ಲಿ ಭಾರತೀಯ ನಿರ್ಮಾಣದ ನ್ಯಾವಿಗೇಷನ್ ವ್ಯವಸ್ಥೆಯಾದ ನಾವಿಕ್‌ಗೆ (NavIC) ಅಗತ್ಯ ಬೆಂಬಲ ಒದಗಿಸುವಂತೆ ಸೂಚಿಸಿದೆ. ಸರ್ಕಾರದ ಈ ನಿರ್ದೇಶನ ಸ್ಮಾರ್ಟ್ ಫೋನ್ ಉದ್ಯಮಕ್ಕೆ ಕಠಿಣ ಸಮಯದ ಸ್ಥಿತಿ ಒದಗಿಸಿದ್ದು, ಕನಿಷ್ಠ ಕಾಲಾವಧಿಯಲ್ಲಿ ಈ ಬೆಂಬಲ ಒದಗಿಸಬೇಕಿದೆ. ಅದರೊಡನೆ, ಇದಕ್ಕೆ ತಗಲುವ ಹೆಚ್ಚುವರಿ ವೆಚ್ಚವನ್ನೂ ಭರಿಸಬೇಕಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಭಿವೃದ್ಧಿ ಪಡಿಸಿರುವ, ನ್ಯಾವಿಗೇಷನ್ ವಿದ್ ಇಂಡಿಯನ್ ಕಾನ್ಸ್ಟೆಲ್ಲೇಷನ್ ಅಥವಾ ನಾವಿಕ್ ಒಂದು ಸ್ಟ್ಯಾಂಡ್ ಅಲೋನ್ ನ್ಯಾವಿಗೇಷನ್ ಸ್ಯಾಟಲೈಟ್ ವ್ಯವಸ್ಥೆಯಾಗಿದೆ. 174 ಮಿಲಿಯನ್ ಡಾಲರ್ ಮೊತ್ತದ ಈ ಯೋಜನೆಗೆ 2006ರಲ್ಲಿ ಅನುಮೋದನೆ ನೀಡಲಾಯಿತಾದರೂ, ಇದು 2018ರಲ್ಲಷ್ಟೇ ಕಾರ್ಯರೂಪಕ್ಕೆ ಬಂತು. ನಾವಿಕ್ ಎಂಟು ಉಪಗ್ರಹಗಳನ್ನು ಹೊಂದಿರುವ ವ್ಯವಸ್ಥೆಯಾಗಿದ್ದು, ಸಂಪೂರ್ಣ ಭಾರತದ ನೆಲದ ವ್ಯಾಪ್ತಿಯನ್ನು ಹೊಂದುವುದಲ್ಲದೆ, ಗಡಿಯಾಚೆಗಿನ 1,500 ಕಿಲೋಮೀಟರ್ ವ್ಯಾಪ್ತಿಯನ್ನೂ ತೋರಿಸುತ್ತದೆ.

ಆದರೆ, ಪ್ರಸ್ತುತ ನಾವಿಕ್‌ನ ಉಪಯೋಗಗಳು ಕೇವಲ ನಿಗದಿತವಾಗಿದೆ. ಇದನ್ನು ಈಗ ಸಾರ್ವಜನಿಕ ವಾಹನಗಳನ್ನು ಟ್ರ್ಯಾಕ್ ಮಾಡಲು, ನೈಸರ್ಗಿಕ ವಿಕೋಪಗಳನ್ನು ಟ್ರ್ಯಾಕ್ ಮಾಡಲು ಅಥವಾ ಅವುಗಳ ಕುರಿತಾದ ಮಾಹಿತಿ ಕಲೆ ಹಾಕಲು, ಹಾಗೂ ಮೊಬೈಲ್ ಸಂಪರ್ಕ ಸಿಗದ ಆಳ ಸಮುದ್ರಗಳಿಗೆ ತೆರಳುವ ಮೀನುಗಾರರಿಗೆ ಎಚ್ಚರಿಕೆಯ ಸಂದೇಶದ ಮುನ್ಸೂಚನೆ ಕಳುಹಿಸಲು, ಬಳಸಿಕೊಳ್ಳಲಾಗುತ್ತದೆ. ಸ್ಮಾರ್ಟ್ ಫೋನ್‌ಗಳಲ್ಲಿ ಇದಕ್ಕೆ ಬೆಂಬಲ ದೊರಕಿಸಿಕೊಳ್ಳುವುದು ನಾವಿಕ್ ಮುಂದಿನ ಹೆಜ್ಜೆಯಾಗಿದೆ.

ನಾವಿಕ್ ಹೇಗೆ ವಿಭಿನ್ನವಾಗಿದೆ?

ಈ ವ್ಯವಸ್ಥೆಗಳು ಹೊಂದಿರುವ ವ್ಯಾಪ್ತಿ ಹಾಗೂ ಅವುಗಳು ಮಾಹಿತಿ ಒದಗಿಸುವ ಭೂ ಪ್ರದೇಶವೇ ಪ್ರಮುಖ ವ್ಯತ್ಯಾಸವಾಗಿದೆ. ಜಿಪಿಎಸ್ ವ್ಯವಸ್ಥೆಯು ಜಗತ್ತಿನಾದ್ಯಂತ ಇರುವ ಎಲ್ಲ ಬಳಕೆದಾರರೂ ಬಳಸಬಹುದಾಗಿದ್ದು, ಅದರ ಉಪಗ್ರಹಗಳು ಭೂಮಿಗೆ ಪ್ರತಿದಿನವೂ ಎರಡು ಸಲ ಪರಿಭ್ರಮಣೆ ನಡೆಸುತ್ತವೆ. ಆದರೆ ನಾವಿಕ್ ವ್ಯವಸ್ಥೆಯು ಕೇವಲ ಭಾರತ ಹಾಗೂ ಸುತ್ತಲಿನ ಪ್ರದೇಶಗಳಿಗೆ ಸೀಮಿತವಾಗಿದೆ.

ಜಿಪಿಎಸ್ ವ್ಯವಸ್ಥೆಯಂತೆಯೇ ಜಾಗತಿಕ ವ್ಯಾಪ್ತಿ ಹೊಂದಿರುವ ಮೂರು ನ್ಯಾವಿಗೇಷನ್ ವ್ಯವಸ್ಥೆಗಳಿವೆ. ಅವೆಂದರೆ ರಷ್ಯಾದ ಗ್ಲೋನಾಸ್, ಯುರೋಪಿಯನ್ ಒಕ್ಕೂಟದ ಗೆಲಿಲಿಯೋ ಹಾಗೂ ಚೀನಾ ಸರ್ಕಾರಿ ಸ್ವಾಮ್ಯದ ಬೈದು.‌ ಜಪಾನ್ ಬಳಿ ಇರುವ ಕ್ಯುಜೆಡ್ಎಸ್‌ಎಸ್ ವ್ಯವಸ್ಥೆ ಇನ್ನೊಂದು ಪ್ರಾಂತೀಯ ನ್ಯಾವಿಗೇಷನ್ ವ್ಯವಸ್ಥೆಯಾಗಿದ್ದು, ಏಷ್ಯಾ - ಓಷಿಯಾನ್ ಪ್ರಾಂತ್ಯವನ್ನು ವ್ಯಾಪಿಸುತ್ತದೆ. ಇದು ಪ್ರಮುಖವಾಗಿ ಜಪಾನ್ ಕೇಂದ್ರಿತ ವ್ಯವಸ್ಥೆಯಾಗಿದೆ.

2021ರ ಭಾರತದ ಸ್ಯಾಟಲೈಟ್ ನ್ಯಾವಿಗೇಷನ್ ಡ್ರಾಫ್ಟ್ ನೀತಿಯ ಪ್ರಕಾರ, ಭಾರತ ತನ್ನ ಹೇಳಿಕೆಯಲ್ಲಿ ಭಾರತ ಸರ್ಕಾರ ತನ್ನ ನ್ಯಾವಿಗೇಷನ್ ವ್ಯವಸ್ಥೆಯ ವ್ಯಾಪ್ತಿಯನ್ನು ಪ್ರಾಂತೀಯ ವ್ಯವಸ್ಥೆಯಿಂದ ಜಾಗತಿಕ ವ್ಯಾಪ್ತಿ ಹೊಂದಿರುವ ವ್ಯವಸ್ಥೆಯನ್ನಾಗಿಸಲು ಪ್ರಯತ್ನ ಪಡುವುದಾಗಿ, ಮತ್ತು ಆ ಮೂಲಕ ನಾವಿಕ್ ಸಂಕೇತ ಪ್ರಪಂಚದ ಎಲ್ಲ ಭಾಗಗಳಲ್ಲೂ ಲಭ್ಯವಾಗುವಂತೆ ಮಾಡುವುದಾಗಿ ತಿಳಿಸಿದೆ.

ಭಾರತ ಏಕೆ ನಾವಿಕ್‌ಗೆ ಒತ್ತು ನೀಡುತ್ತಿದೆ?

ಭಾರತ ಸರ್ಕಾರದ ಪ್ರಕಾರ, ನಾವಿಕ್ ವ್ಯವಸ್ಥೆಯನ್ನು ವಿದೇಶೀ ಉಪಗ್ರಹಗಳ ಮೇಲಿನ ಭಾರತದ ಅವಲಂಬನೆಯನ್ನು ತೊಡೆದು ಹಾಕಲು, ಅದರಲ್ಲೂ ವಿಶೇಷವಾಗಿ ಕಾರ್ಯತಂತ್ರದ ವಿಚಾರಗಳಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಆರಂಭಿಸಲಾಯಿತು. ಜಿಪಿಎಸ್ ಹಾಗೂ ಗ್ಲೋನಾಸ್ ನಂತಹ ವ್ಯವಸ್ಥೆಗಳನ್ನು ಆ ದೇಶಗಳ ರಕ್ಷಣಾ ಸಂಸ್ಥೆಗಳು ನಿರ್ವಹಿಸುವುದರಿಂದ, ಅವುಗಳ ಮೇಲೆ ಪೂರ್ಣ ಅವಲಂಬನೆ ಹೊಂದುವುದು ಯಾವಾಗಲೂ ಲಾಭಕರ ಎಂದು ಹೇಳಲು ಸಾಧ್ಯವಿಲ್ಲ ಮತ್ತು ಅವುಗಳನ್ನು ನಾಗರಿಕ ಬಳಕೆಯಿಂದ ಹಿಂಪಡೆಯುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ. ಆದ್ದರಿಂದ ಭಾರತಕ್ಕೆ ತನ್ನದೇ ಆದ ನ್ಯಾವಿಗೇಷನ್ ವ್ಯವಸ್ಥೆ ಇರುವುದು ಯಾವತ್ತಿಗೂ ಸುರಕ್ಷಿತ.

2021ರಲ್ಲಿ ಭಾರತ ಸರ್ಕಾರ ಹೇಳಿಕೆ ನೀಡಿ, ನಾವಿಕ್ ಒಂದು ಸಂಪೂರ್ಣ ದೇಶೀಯ ನಿರ್ಮಾಣದ ನ್ಯಾವಿಗೇಷನ್ ವ್ಯವಸ್ಥೆಯಾಗಿದ್ದು, ಸಂಪೂರ್ಣವಾಗಿ ಭಾರತದ ನಿಯಂತ್ರಣದಲ್ಲಿ ಇರಲಿದೆ. ಇದು ಯಾವುದೇ ಸಂದರ್ಭದಲ್ಲಿ ನ್ಯಾವಿಗೇಷನ್ ವ್ಯವಸ್ಥೆಗಳನ್ನು ಹಿಂಪಡೆಯುವ ಅಥವಾ ಉಪಯೋಗ ನಿರಾಕರಿಸುವ ಅಪಾಯವನ್ನು ಮೀರಲು ಸಹಕಾರಿಯಾಗುತ್ತದೆ ಎಂದಿದೆ. ಭಾರತ ದೇಶೀಯ ಉದ್ದಿಮೆಗಳು ನಾವಿಕ್ ನ್ಯಾವಿಗೇಷನ್ ವ್ಯವಸ್ಥೆಯನ್ನು ಬಳಸಿ, ಆ ಮೂಲಕ ಅದನ್ನು ಇನ್ನಷ್ಟು ಅಭಿವೃದ್ಧಿ ಹೊಂದಲು ನೆರವಾಗಬೇಕೆಂದು ಬಯಸುತ್ತದೆ.

ಗಿರೀಶ್ ಲಿಂಗಣ್ಣ

ಈ ಬರಹದ ಲೇಖಕರು ರಕ್ಷಣಾ ವಿಶ್ಲೇಷಕ ಮತ್ತು ಜರ್ಮನಿಯ ADD Engineering GmbH ನ ಅಂಗಸಂಸ್ಥೆಯಾದ ಆಡ್ ಎಂಜಿನಿಯರಿಂಗ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

SCROLL FOR NEXT