ಕೊಲಂಬಿಯಾ: ಗ್ಯಾಬೊ ಎಂದೆ ಪ್ರಸಿದ್ಧರಾದ, ಸಾಹಿತ್ಯಕ್ಕೆ ನೊಬೆಲ್ ಪ್ರಶಸ್ತಿ ಪುರಸ್ಕೃತ ದಿವಂಗತ ಗೆಬ್ರಿಯೇಲ್ ಗಾರ್ಸಿಯಾ ಮಾರ್ಕೆಸ್ ಅವರಿಗೆ ಈಗ ಮತ್ತೊಂದು ಗೌರವ. ಕೊಲಂಬಿಯಾ ದೇಶ ಈ ಮಹಾನ್ ಲೇಖಕನ ಚಿತ್ರವುಳ್ಳ ನೋಟುಗಳ ಸರಣಿಯನ್ನು ಬಿಡುಗಡೆ ಮಾಡಲಿದೆ.
ವಿಶ್ವವಿಖ್ಯಾತ 'ಒನ್ ಹಂಡ್ರೆಡ್ ಯಿಯರ್ಸ್ ಆಫ್ ಸಾಲಿಟ್ಯೂಡ್' ಕಾದಂಬರಿ ಮತ್ತು ಇತರ ಬಹು ವಿಖ್ಯಾತ-ಜನಪ್ರಿಯ ಕಾದಂಬರಿಗಳ ಲೇಖಕ ಮಾಂತ್ರಿಕ ವಾಸ್ತವದ ಹರಿಕಾರ ಎಂದೆ ಪ್ರಸಿದ್ದ. ಇವರು ಮೆಕ್ಸಿಕೋದಲ್ಲಿ ಏಪ್ರಿಲ್ ನಲ್ಲಿ ದಿವಂಗತರಾದರು.
ಕೊಲಂಬಿಯಾದ ಚುನಾಯಿತ ಪ್ರತಿನಿಧಿಗಳು ಮಾರ್ಕೆಸ್ ಚಿತ್ರವಿರುವ ನೋಟುಗಳನ್ನು ಹೊರತರುವ ಪ್ರಸ್ತಾವನೆಗೆ ಒಪ್ಪಿಗೆಯಿಟ್ಟು, ನೋಟುಗಳನ್ನು ಮುದ್ರಿಸಲು ಕೇಂದ್ರ ಬ್ಯಾಂಕಿಗೆ ಸೂಚನೆ ನೀಡಿದ್ದಾರೆ.
ಮಾರ್ಕೆಸ್ ಅವರು ೧೯೮೨ ರಲ್ಲಿ ತಮ್ಮ ಒಟ್ಟು ಸಾಹಿತ್ಯ ಕೃಷಿಗೆ ನೊಬೆಲ್ ಪ್ರಶತಿಗೆ ಭಾಜನರಾಗಿದ್ದರು.