ಪ್ಲೇಬಾಯ್ ಪುರವಣಿ 
ವಿಶೇಷ

ಅಯ್ಯೋ ಪ್ಲೇಬಾಯ್!

ಅರವತ್ತೆರಡು ವರ್ಷಗಳ ಹಿಂದೆ ಮರ್ಲಿನ್ ಮನ್ರೋ ಹಾಕಿಕೊಟ್ಟ ಪರಂಪರೆ ಕೊನೆಗೊಂಡಿದೆ. ಅರೆನಗ್ನ, ನಗ್ನ ಚಿತ್ರಗಳ ಮೂಲಕ ಲಕ್ಷಾಂತರ ನೋಡುಗರನ್ನು ಮತ್ತು ಓದುಗರನ್ನು...

ಅರವತ್ತೆರಡು ವರ್ಷಗಳ ಹಿಂದೆ ಮರ್ಲಿನ್ ಮನ್ರೋ ಹಾಕಿಕೊಟ್ಟ ಪರಂಪರೆ ಕೊನೆಗೊಂಡಿದೆ. ಅರೆನಗ್ನ, ನಗ್ನ ಚಿತ್ರಗಳ ಮೂಲಕ ಲಕ್ಷಾಂತರ ನೋಡುಗರನ್ನು ಮತ್ತು ಓದುಗರನ್ನು ಪಡೆದುಕೊಂಡಿದ್ದ ಪ್ಲೇ ಬಾಯ್ ಪತ್ರಿಕೆ ಇನ್ನು ಮುಂದೆ ನಗ್ನ ಸುಂದರಿಯ ಚಿತ್ರಗಳನ್ನು ಪ್ರಕಟಿಸುವುದಿಲ್ಲ ಎಂಬ ನಿರ್ಧಾರವನ್ನು ಪ್ರಕಟಿಸಿದೆ. 
ಇದು ಪ್ಲೇಬಾಯ್ ಓದುಗರಿಗೆ ಆಘಾತಕಾರಿ ಸುದ್ದಿ. ಪ್ಲೇ ಬಾಯ್ ಪತ್ರಿಕೆಯ ಸುದ್ದಿ ಸ್ಕಾಟ್ ಫ್ಲಾಂಡರ್ಸ್ ಈ ಸುದ್ದಿಯನ್ನು ಹೊರಹಾಕಿದ್ದಾರೆ. ಇದಕ್ಕೆ ಕಾರಣ ಇಂಟರ್ನೆಟ್! ಸುಲಭವಾಗಿ ಲಭ್ಯವಾಗುತ್ತಿರುವ ನೀಲಿಚಿತ್ರಗಳು, ಉಚಿತವಾಗಿ ಸಿಕ್ಕುತ್ತಿರುವ ನಗ್ನ ಚಿತ್ರಗಳು ಪ್ಲೇಬಾಯ್ನ ಜನಪ್ರಿಯತೆಯನ್ನು ತುಳಿದು ಹಾಕಿವೆ. ಸಾಮಾಜಿಕ ಜಾಲತಾಣಗಳಂತೂ ಇಂಥ ಟ್ರೆಂಡ್ ಅನ್ನು ವಿಪರೀತವಾಗಿ ಪೋಷಿಸುತ್ತಿದ್ದು, ಪ್ಲೇಬಾಯ್ನಂಥ ಪತ್ರಿಕೆಯ ಅಗತ್ಯವನ್ನೇ ನಗಣ್ಯವಾಗಿಸಿವೆ. ಹಾಗಾಗಿ ಪ್ಲೇಬಾಯ್ ಈ ನಿರ್ಧಾರಕ್ಕೆ ಬಂದ ಹಾಗೆ ಕಾಣುತ್ತಿದೆ. 1953ರಲ್ಲಿ ಮೊದಲ ಬಾರಿಗೆ ಅಂಥ ಕಾಣಿಸಿಕೊಂಡಿತ್ತು. ಅಲ್ಲಿಂದ ಇಲ್ಲಿಯವರೆಗೆ ನೂರಾರು ಮಾಡೆಲ್‍ಗಳು ತಮ್ಮ ದೇಹ ಸೌಂದರ್ಯವನ್ನು ಈ  ಪತ್ರಿಕೆಯ ಪುಟಗಳಲ್ಲಿ ಹರವಿದ್ದರು.
ಆಧುನಿಕದ ಹೊಡೆತಕ್ಕೆ ಪುಟಗಳು ಥರಗುಟ್ಟಿ ಹೋಗಿವೆ. 56 ಲಕ್ಷದಷ್ಟಿದ್ದ ಅದರ ಪ್ರಸಾರ ಈಗ 10 ಲಕ್ಷಕ್ಕಿಂತ ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಆದರೆ ವರ್ಷಗಳಿಂದ ಪ್ಲೇಬಾಯ್ ನೋಡುತ್ತಿರುವ, ಕ್ಷಮಿಸಿ ಓದುತ್ತಿರುವ ನಿಷ್ಠಾವಂತರಿಗೆ ಒಂದೇ ಒಂದು ನಿರಾಳವಾಗುವ ವಿಷಯವಿದೆ. ಪತ್ರಿಕೆಯ ನಿರ್ಧಾರ ತಕ್ಷಣವೇ ಜಾರಿಯಾಗುತ್ತಿಲ್ಲ. 2016ರ ಮಾರ್ಚ್‍ಗೆ ಪ್ಲೇಬಾಯ್ ಎಂದಿನಂತೆ ಪ್ರಕಟವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

SCROLL FOR NEXT