ವಿಶೇಷ

ಮಹಿಳಾ ನೌಕರರಿಗೆ ವರ್ಷಕ್ಕೆ 12 ದಿನಗಳ ಋತುಚಕ್ರ ರಜೆ ಘೋಷಿಸಿದ ಸೂರತ್ ಮೂಲದ ಕಂಪೆನಿ

Sumana Upadhyaya

ಸೂರತ್: ಗುಜರಾತ್ ರಾಜ್ಯದ ಸೂರತ್ ಮೂಲದ ಡಿಜಿಟಲ್ ಮಾರುಕಟ್ಟೆ ಕಂಪೆನಿ ತನ್ನ ಸಂಸ್ಥೆಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ವರ್ಷಕ್ಕೆ 12 ದಿನ ಋತುಚಕ್ರ ರಜೆ(period leave) ನೀಡಲು ನಿರ್ಧರಿಸಿದೆ.

ತಕ್ಷಣದಿಂದಲೇ ಜಾರಿಗೆ ಬರುವಂತೆ ಮಹಿಳಾ ನೌಕರರಿಗೆ ವರ್ಷಕ್ಕೆ 12 ಋತುಚಕ್ರ ರಜೆಯನ್ನು ನೀಡಲಾಗುವುದು ಎಂದು ಐವಿಪನನ್ ಸ್ಥಾಪಕ ಭೌಟಿಕ್ ಸೇಠ್ ತಿಳಿಸಿದ್ದಾರೆ. ಈ ಮೂಲಕ, ಫುಡ್ ಡೆಲಿವರಿ ಕಂಪೆನಿಯಾದ ಝೊಮ್ಯಾಟೊ ಕ್ರಮವನ್ನೇ ಅನುಸರಿಸಿದೆ.

ಭೌಟಿಕ ಸೇಠ್ ಅವರ ಕಂಪೆನಿ 2014ರಲ್ಲಿ ಆರಂಭವಾಗಿದ್ದು ಒಟ್ಟು 9 ಮಂದಿ ನೌಕರರಿದ್ದಾರೆ, ಅವರಲ್ಲಿ 8 ಮಂದಿ ಮಹಿಳಾ ನೌಕರರಾಗಿದ್ದಾರೆ. 

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಭೌಟಿಯಾ, ಹೆಣ್ಣು ಮಕ್ಕಳ ಋತುಚಕ್ರ ಬಗ್ಗೆ ಭಾರತೀಯ ಸಮಾಜದಲ್ಲಿ ಇನ್ನು ಕೂಡ ಮೂಢನಂಬಿಕೆ, ಕಳಂಕವಿದೆ. ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರು ವಾಶ್ ರೂಂಗೆ ಹೋಗುವಾಗ ಬ್ಯಾಗ್, ಪರ್ಸ್, ಪ್ಲಾಸ್ಟಿಕ್ ಬ್ಯಾಗ್ ತೆಗೆದುಕೊಂಡು ಹೋಗುವ ಪರಿಸ್ಥಿತಿಯಿದೆ. ಮಹಿಳೆಯರು ಮತ್ತು ಪುರುಷರ ಮಧ್ಯೆ ನೈಸರ್ಗಿಕ ಬದಲಾವಣೆಯನ್ನು ಅರ್ಥಮಾಡಿಸಲು ಭಾರತದಲ್ಲಿ ಸಣ್ಣಪುಟ್ಟ ಉದ್ದಿಮೆಗಳು, ಕಂಪೆನಿಗಳು ಈ ರೀತಿ ಹೆಣ್ಣುಮಕ್ಕಳಿಗೆ ರಜೆ ನೀಡಬೇಕೆಂದು ನಾವು ಸಂದೇಶ ಸಾರಲು ಈ ಕ್ರಮ ಕೈಗೊಂಡಿದ್ದೇವೆ. ಋತುಚಕ್ರ ಸಮಯದಲ್ಲಿ ಮಹಿಳೆಯರು ಕಚೇರಿಗೆ ಬಂದು ಕಷ್ಟಪಡುವ ಸಮಸ್ಯೆ ಇದರಿಂದ ತಪ್ಪುತ್ತದೆ ಎಂದು ಹೇಳಿದ್ದಾರೆ.

SCROLL FOR NEXT